Posts

Showing posts from January, 2025

ಇತಿಹಾಸ ಪ್ರಸಿದ್ದ ತುರ್ಕಳಿಕೆ ಉರೂಸ್ ಜನವರಿ 22 ರಿಂದ 26 ರವರೆಗೆ,

Image
  ಇತಿಹಾಸ ಪ್ರಸಿದ್ದ ತುರ್ಕಳಿಕೆ ಉರೂಸ್  ಜನವರಿ 22 ರಿಂದ 26ರ ವರೆಗೆ, ಪುತ್ತೂರು : ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ದ ತುರ್ಕಳಿಕೆ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮವು ಜನವರಿ 22 ರಿಂದ 26ರ ವರೆಗೆ ನಡೆಯಲಿದೆ,ಎಂದು ತುರ್ಕಳಿಕೆ ಜಮಾಅತ್ ಸಮಿತಿ ಕಾರ್ಯದರ್ಶಿ ಮುಹಮ್ಮದ್ ಅಲಿ ತಿಳಿಸಿದರು, ಅವರು ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು, ಜ.22 ರಿಂದ 26 ರವೆರೆಗಿನ ಐದು ದಿನಗಳ ಕಾರ್ಯಕ್ರಮದಲ್ಲಿ ಧಾರ್ಮಿಕ ಮತ ಪ್ರವಚನ, ಸ್ವಲಾತ್ ಮಜ್ಲಿಸ್ ಹಾಗೂ ಮದನೀಯಂ ಮಜ್ಲಿಸ್ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ, ಸಯ್ಯಿದ್ ಸಾದಾತ್ ತಂಙಳ್ ಸಯ್ಯಿದ್ ಮುತ್ತನ್ನೂರ್ ತಂಙಳ್, ಸಯ್ಯಿದ್ ಬಾಯಾರ್ ತಂಙಳ್, ಸಯ್ಯಿದ್ ಮಸ್ಹೂದ್ ತಂಙಳ್ ಕೂರತ್ ಹಾಗೂ ಇನ್ನಿತರ ಉಲಮಾ ನೇತಾರರು ಭಾಗವಹಿಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಮಾಅತ್ ಸಮಿತಿ ಅಧ್ಯಕ್ಷ ಅಯ್ಯೂಬ್ ಕುದೂರು, ಸ್ಥಳೀಯ ಖತೀಬ್ ಹಮೀದ್ ಸಖಾಫಿ, ಕೋಶಾಧಿಕಾರಿ ರಶೀದ್ ಜಿ.ಕೆ, ಉಪಾಧ್ಯಕ್ಷ ಲತೀಫ್ ಸಖಾಫಿ ಭಾಗವಹಿಸಿದ್ದರು. 🖋 ರಿಯಾ ನೆಲ್ಯಾಡಿ,

ಕೆ ಸಿ ಎಫ್ ಕುವೈಟ್ 2025 - 2026 ರ ನೂತನ ಸಾರಥಿಗಳ ಆಯ್ಕೆ,

Image
ಕೆಸಿಎಫ್ ಕುವೈಟ್ 2025 - 2026 ರ ನೂತನ ಸಾರಥಿಗಳು, ಕೆಸಿಎಫ್  ಕುವೈಟ್ ರಾಷ್ಟ್ರೀಯ ಸಮಿತಿಯ ವಾರ್ಷಿಕ ಮಹಾಸಭೆಯು ದಿನಾಂಕ 27.12.24ರ ಶುಕ್ರವಾರ ಜುಮಾ ನಮಾಝ್ ನ ನಂತರ ಕುವೈಟ್ ಫರ್ವಾಣಿಯ ದ್ವಹಿ ಪ್ಯಾಲೆಸ್ ನ ಹಾಲ್ ನಲ್ಲಿ ಅಧ್ಯಕ್ಷರಾದ ಬಹು ಮಾನ್ಯ ಹುಸೈನ್ ಎರ್ಮಾಡ್  ಉಸ್ತಾದರ ಅಧ್ಯಕ್ಷತೆಯಲ್ಲಿ ನಾರ್ತ್ ಝೋನ್  ಅಧ್ಯಕ್ಷರಾದ ಕಲಂದರ್ ಶಾಫಿ ಕೃಷ್ಣಾಪುರ ಅವರ ಕಿರಾಹತ್ ನೊಂದಿಗೆ  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜನಾಬ್ ಯಾಕುಬ್ ಕಾರ್ಕಳ ಎಲ್ಲರನ್ನೂ ಸ್ವಾಗತಿಸಿ ಸದ್ರಿ ಸಾಲಿನ ವರದಿಯನ್ನ ವಾಚಿಸಿದರು ರಾಷ್ಟ್ರೀಯ ಕೋಶಾಧಿಕಾರಿ ಮೂಸಇಬ್ರಾಹಿಂ ಲೆಕ್ಕಪತ್ರ ಮಂಡನೆ ಮಾಡಿದರು.  ಕೊನೆಯದಾಗಿ KCF ಅಧ್ಯಕ್ಷರಾದ ಬಹು ಹುಸೈನ್ ಏರುಮಾಡ್ ಮಾತನಾಡಿ ಎರಡು ವರ್ಷದಲ್ಲಿ ಸಮಿತಿಯೊಂದಿಗೆ ಸಹಕರಿಸಿದ ಸದಸ್ಯರೆಲ್ಲಾರಿಗೂ ಧನ್ಯವಾದ ಹೇಳಿದರು RO ಅವರ ಅನುಮತಿಮೇರೆಗೆ 2022-24ರ ಪ್ರಸ್ತುತ ಸಮಿತಿಯನ್ನು ಬರ್ಕಸು ಮಾಡಲಾಯಿತು   RO ಆಗಿ ಆಗಮಿಸಿದ ಅಂತರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ಡಿ.ಪಿ ಯೂಸುಫ್ ಸಖಾಫಿ ಬೈತಾರ್ ಅವರ ಉತ್ತಮವಾದ ನಸೀಹತ್ ದುವಾ ಹಾಗೂ ಅಚ್ಚುಕಟ್ಟಾಗಿ ಕೆಸಿಎಫ್ ಕುವೈಟ್    ಸಮಿತಿಯ 2025-26 ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರು : ಅಬ್ದುರಹ್ಮಾನ್ ಸಖಾಫಿ ಪೊಯ್ಯತ್ ಬೈಲ್ ಪ್ರಧಾನ ಕಾರ್ಯದರ್ಶಿ: ಮುಸ್ತಫ ಉಲ್ಲಾಳ್ ಕೋಶಾಧಿಕಾರಿ: ಮೂಸ ಇಬ್ರಾಹಿಂ ಸಂ...