Posts

ರಿಯಾದ್ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿ,!

Image
ರಿಯಾದ್ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ 12 ಜನರು ಸಾವನ್ನಪ್ಪಿ, 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸೌದಿ ನಾಗರಿಕ ವಿಮಾನಯಾನ ಸಂಸ್ಥೆ ತಿಳಿಸಿದೆ. ರಿಯಾದ್: ಸೌದಿ ಅರೇಬಿಯಾದ ರಾಜಧಾನಿಯಲ್ಲಿರುವ ಕಿಂಗ್ ಖಾಲಿದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಕೆಕೆಐಎ) ಗುರಿಯಾಗಿಸಿಕೊಂಡು ಶನಿವಾರ ನಡೆದ ಕ್ಷಿಪಣಿ ದಾಳಿಯಲ್ಲಿ ಹನ್ನೆರಡು ಜನರು ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾ ಪ್ರಾಧಿಕಾರ (ಜಿಎಸಿಎ) ಭಾನುವಾರ ಮುಂಜಾನೆ ಪ್ರಕಟಿಸಿದೆ. ಸತ್ತವರಲ್ಲಿ ನಾಲ್ವರು ಸೌದಿ ನಾಗರಿಕರು ಹಾಗೂ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳು, ಒಬ್ಬ ಪ್ಯಾಲೆಸ್ಟೀನಿಯನ್, ಒಬ್ಬ ಅಮೇರಿಕನ್ ಪ್ರಜೆ, ಒಬ್ಬ ಈಜಿಪ್ಟ್, ಒಬ್ಬ ಜೋರ್ಡಾನ್, ಒಬ್ಬ ಸಿರಿಯನ್ ಮತ್ತು ಒಬ್ಬ ಸುಡಾನ್ ಪ್ರಜೆ ಸೇರಿದ್ದಾರೆ ಎಂದು ಜಿಎಸಿಎ ಹೇಳಿಕೆಯಲ್ಲಿ ತಿಳಿಸಿದೆ. " ದಾಳಿಯಲ್ಲಿ (309) ಇತರರು ಗಾಯಗೊಂಡಿದ್ದಾರೆ, ಅವರ ಸ್ಥಿತಿ ಗಂಭೀರವಾಗಿದೆ" ಎಂದು ಹೇಳಿಕೆ ತಿಳಿಸಿದೆ. ದಾಳಿಯ ಕೆಲವು ಗಂಟೆಗಳ ನಂತರ,  ಸೌದಿ ಅರೇಬಿಯಾದ ಪ್ರಮುಖ ಪೂರ್ವ ವಿಮಾನ ನಿಲ್ದಾಣವಾದ ದಮ್ಮಾಮ್‌ನಲ್ಲಿರುವ ಕಿಂಗ್ ಫಹದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೂ ದಾಳಿಗೆ ಒಳಗಾಯಿತು ಎಂದು ಘೋಷಿಸಿದರು. ಮೇಜರ್ ಜನರಲ್ ತುರ್ಕಿ ಅಲ್-ಮಲಿಕಿ ಅವರು X ನಲ್ಲಿ ಪೋಸ್ಟ್‌ನಲ್ಲಿ ಈ ಘಟನೆಯನ್ನು ಪ್ರಕಟಿಸಿದರು. ಫೆಬ್ರವರಿ 28 ರಂದು ಇರಾ...

ತುಳುವಿನಕೊಪ್ಪದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿದ ಶಾಸಕ ಟಿ.ಡಿ. ರಾಜೇಗೌಡ

Image
    ತುಳುವಿನಕೊಪ್ಪದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿದ ಶಾಸಕ ಟಿ.ಡಿ. ರಾಜೇಗೌಡ ಕೊಪ್ಪ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ತುಳುವಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ, ಅಕ್ಟೋಬರ್ 9ರಂದು ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ನಡೆಯಿತು. ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಅವರು ಸಮಾವೇಶವನ್ನು ಉದ್ಘಾಟಿಸಿದರು. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಒಂದೆಡೆ ಸೇರಿಸಿ ಆಯೋಜಿಸಲಾಗಿದ್ದ ಈ ಸಮಾವೇಶದಲ್ಲಿ 450ಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಓಣಿತೋಟ ರತ್ನಾಕರ್, ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್. ರವೀಂದ್ರ, ಹಿರಿಯ ವಕೀಲ ಸುಧೀರ್ ಕುಮಾರ್ ಮುರೊಳ್ಳಿ, ನರೇಂದ್ರ ಶೆಟ್ಟಿ, ನಾಗೇಂದ್ರ ಪ್ರಸಾದ್, ಸಂತೋಷ್ ಕಲ್ಕೆರೆ, ಸಾದಿಕ್ ನಾರ್ವೆ, ಪ್ರಕಾಶ್ ಪೂಜಾರಿ ಉಪಸ್ಥಿತರಿದ್ದರು. ಅಲ್ಲದೆ, ಕಾರ್ಯನಿರ್ವಾಹಕ ಅಧಿಕಾರಿ ನವೀನ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ವೀಣಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಒಟ್ಟಿನಲ್ಲಿ, ತುಳುವಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಈ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗ...

ಅಂಬೇಡ್ಕರ್ ಭವನದ ನಿವೇಶನಕ್ಕಾಗಿ ದಲಿತರೊಂದಿಗೆ ಧರಣಿಯಲ್ಲಿ ಕುಳಿತ ಸುಧಾಕರ್ ಎಸ್. ಶೆಟ್ಟಿ,

Image
  ಅಂಬೇಡ್ಕರ್ ಭವನದ ನಿವೇಶನಕ್ಕಾಗಿ ದಲಿತರೊಂದಿಗೆ ಧರಣಿಯಲ್ಲಿ ಕುಳಿತ ಸುಧಾಕರ್ ಎಸ್. ಶೆಟ್ಟಿ, ದಲಿತ ಸಂಘರ್ಷ ಸಮಿತಿಯ ಹೋರಾಟಕ್ಕೆ ಜೆಡಿಎಸ್ ರಾಷ್ಟ್ರೀಯ ವಕ್ತಾರರ ಬೆಂಬಲ; ನಿವೇಶನದ ವಿಚಾರದಲ್ಲಿ ಪಾರದರ್ಶಕತೆಗೆ ಆಗ್ರಹ ಶೃಂಗೇರಿ, ಅಕ್ಟೋಬರ್ 9: ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಮೀಸಲಿಟ್ಟ ನಿವೇಶನವನ್ನು ರಕ್ಷಿಸುವಂತೆ ಆಗ್ರಹಿಸಿ, ದಲಿತ ಸಂಘರ್ಷ ಸಮಿತಿಯ ವತಿಯಿಂದ ಶೃಂಗೇರಿ ಪಟ್ಟಣ ಪಂಚಾಯಿತಿ ಕಚೇರಿ ಎದುರು ನಡೆಯುತ್ತಿದ್ದ ಅಹೋರಾತ್ರಿ ಧರಣಿಯಲ್ಲಿ ಜಾತ್ಯತೀತ ಜನತಾದಳದ (ಜೆಡಿಎಸ್) ರಾಷ್ಟ್ರೀಯ ವಕ್ತಾರರಾದ ಸುಧಾಕರ್ ಎಸ್. ಶೆಟ್ಟಿ ಅವರು ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಶೃಂಗೇರಿ ಪಟ್ಟಣದ ಶಾರದಾನಗರ ಬಡಾವಣೆಯಲ್ಲಿ 2016ರಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ 100 × 100 ಅಡಿ ನಿವೇಶನ ಮಂಜೂರು ಮಾಡಲಾಗಿತ್ತು. ಆದರೆ, ಇದೀಗ ಆ ನಿವೇಶನವನ್ನು ಮಾರುಕಟ್ಟೆ ಉದ್ದೇಶಕ್ಕೆ ಬಳಸುವ ಪ್ರಯತ್ನ ನಡೆಯುತ್ತಿದೆ ಎಂಬ ಆತಂಕ ವ್ಯಕ್ತವಾಗಿದ್ದು, ನಿವೇಶನದ ಮೂಲ ಉದ್ದೇಶವನ್ನು ರಕ್ಷಿಸಬೇಕೆಂದು ದಲಿತ ಸಂಘರ್ಷ ಸಮಿತಿ ಹೋರಾಟ ನಡೆಸುತ್ತಿದೆ. ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಸುಧಾಕರ್ ಎಸ್. ಶೆಟ್ಟಿ, ಅಂಬೇಡ್ಕರ್ ಭವನ ಕೇವಲ ಒಂದು ಕಟ್ಟಡವಲ್ಲ; ಅದು ದಲಿತ ಸಮುದಾಯದ ಸ್ವಾಭಿಮಾನ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂಕೇತವಾಗಿದೆ ಎಂದು ಹೇಳಿದರು. 2016ರಲ್ಲಿ ಮಂಜೂರಾದ ನಿವೇಶನದ ವಿಚಾರದಲ್ಲಿ ಈಗ ಗೊಂದಲ ಉಂಟಾಗ...
Image
 

ಕೊಪ್ಪದಲ್ಲಿ 243 ಮತದಾರರ ವಿರುದ್ಧ ಆಕ್ಷೇಪಣೆ: ಮುಸ್ಲಿಂ–ಕ್ರೈಸ್ತ ಸಮುದಾಯದಿಂದ ಪ್ರತಿಭಟನೆ,

Image
ಕೊಪ್ಪದಲ್ಲಿ 243 ಮತದಾರರ ವಿರುದ್ಧ ಆಕ್ಷೇಪಣೆ: ಮುಸ್ಲಿಂ–ಕ್ರೈಸ್ತ ಸಮುದಾಯದಿಂದ ಪ್ರತಿಭಟನೆ, ಕೊಪ್ಪ, ಅಕ್ಟೋಬರ್ 7: ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆ ಕೊಪ್ಪ ತಾಲ್ಲೂಕಿನಲ್ಲಿ 243 ಮತದಾರರ ವಿರುದ್ಧ Form-7 ಮೂಲಕ ಆಕ್ಷೇಪಣೆ ಸಲ್ಲಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಬುಧವಾರ ಕೊಪ್ಪ ತಾಲ್ಲೂಕು ಕಚೇರಿ ಮುಂಭಾಗ ನೂರಾರು ಮಂದಿ ಜಮಾಯಿಸಿ, ಆಕ್ಷೇಪಣೆಗಳ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು ಹಾಗೂ ಅರ್ಹ ಮತದಾರರ ಹೆಸರುಗಳನ್ನು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಕೈಬಿಡಬಾರದು ಎಂದು ಆಗ್ರಹಿಸಿದರು. 243 ಮತದಾರರ ವಿರುದ್ಧ ಆಕ್ಷೇಪಣೆ ಪ್ರತಿಭಟನಾಕಾರರ ಪ್ರಕಾರ, ಒಟ್ಟು 243 ಮತದಾರರ ವಿರುದ್ಧ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಅವರಲ್ಲಿ 218 ಮಂದಿ ಮುಸ್ಲಿಂ ಹಾಗೂ 25 ಮಂದಿ ಕ್ರೈಸ್ತ ಸಮುದಾಯಕ್ಕೆ ಸೇರಿದವರು ಎಂದು ತಿಳಿಸಲಾಗಿದೆ. ಒಂದೇ ವರ್ಗದ ಮತದಾರರ ವಿರುದ್ಧ ಹೆಚ್ಚಿನ ಸಂಖ್ಯೆಯಲ್ಲಿ ಆಕ್ಷೇಪಣೆ ಸಲ್ಲಿಕೆಯಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಈ ಕುರಿತು ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು. ಪ್ರತಿಯೊಬ್ಬರಿಗೂ ನೋಟಿಸ್ ನೀಡಿ ಪರಿಶೀಲನೆಗೆ ಆಗ್ರಹ ಆಕ್ಷೇಪಣೆಗೆ ಒಳಗಾಗಿರುವ ಪ್ರತಿಯೊಬ್ಬ ಮತದಾರರಿಗೂ ಸೂಕ್ತ ನೋಟಿಸ್ ನೀಡಿ, ಅವರ ದಾಖಲೆಗಳು, ವಾ...

ಕೊಪ್ಪದಲ್ಲಿ SIR ಆಕ್ಷೇಪಣೆ ವಿಚಾರಕ್ಕೆ ಹೊಸ ಬೆಳವಣಿಗೆ,

Image
  ಕೊಪ್ಪದಲ್ಲಿ SIR ಆಕ್ಷೇಪಣೆ ವಿಚಾರಕ್ಕೆ ಹೊಸ ಬೆಳವಣಿಗೆ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ SIR ಮತದಾರರ ಪಟ್ಟಿ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಕೊಪ್ಪ ತಾಲೂಕಿನ ವಿವಿಧ ಭಾಗಗಳಲ್ಲಿ ಒಟ್ಟು 243 ಮತದಾರರ ವಿರುದ್ಧ Form-7 ಮೂಲಕ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ಮುಸ್ಲಿಂ ಸಂಯುಕ್ತ ಜಮಾಅತ್ ಕೊಪ್ಪ ತಿಳಿಸಿದೆ. ಈ ಪೈಕಿ 218 ಮುಸ್ಲಿಂ ಹಾಗೂ 25 ಕ್ರಿಶ್ಚಿಯನ್ ಮತದಾರರು ಇದ್ದಾರೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಆಕ್ಷೇಪಣೆಗೆ ಒಳಗಾದ ಮತದಾರರನ್ನು ಒಗ್ಗೂಡಿಸಿ, ಸಂಬಂಧಪಟ್ಟ ತಹಶೀಲ್ದಾರರು ಹಾಗೂ ಚುನಾವಣಾ ಅಧಿಕಾರಿಗಳಿಗೆ ದಾಖಲೆಗಳೊಂದಿಗೆ ಆಕ್ಷೇಪಣಾ ಅರ್ಜಿಗಳಿಗೆ ಉತ್ತರ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಜಮಾಅತ್ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 7ರಂದು ಬೆಳಗ್ಗೆ 10 ಗಂಟೆಗೆ ಆಕ್ಷೇಪಣೆಗೆ ಒಳಗಾದ ಎಲ್ಲಾ ಮತದಾರರು ಹಾಜರಾಗುವಂತೆ ಮನವಿ ಮಾಡಲಾಗಿದೆ. ಮತದಾರರು ಈ ಹಿಂದೆ BLO ನೀಡಿರುವ SIR ಫಾರಂನ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಹಾಗೂ ವೋಟರ್ ID ಕಾರ್ಡ್‌ನ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು ಎಂದು ಸೂಚಿಸಲಾಗಿದೆ. ಆಕ್ಷೇಪಣೆಗೆ ಒಳಗಾದ ಪ್ರತಿಯೊಬ್ಬ ಮತದಾರರ ಮತದಾನದ ಹಕ್ಕನ್ನು ರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಸ್ಲಿಂ ಸಂಯುಕ್ತ ಜಮಾಅತ್ ಕೊಪ್ಪ ಅಧ್ಯಕ್ಷ ಶಫಿ ಅಹಮದ್ ತಿಳಿಸಿದ್ದಾರೆ. ಇದೀಗ, ದಾಖಲೆಗಳೊಂದಿಗೆ ಸಲ...
Image
  ವಿಷಪೂರಿತ ಬಾವಿಗೆ ಬಿದ್ದ ಹಸುವಿನ ಸಾಹಸಮಯ ರಕ್ಷಣೆ, ಕೊಪ್ಪ: ಸುಮಾರು 25 ಅಡಿ ಆಳದ ವಿಷಪೂರಿತ ಬಾವಿಗೆ ಬಿದ್ದಿದ್ದ ಹಸುವನ್ನು ಕೊಪ್ಪ ಅಗ್ನಿಶಾಮಕ ಸಿಬ್ಬಂದಿ ಸಾಹಸಿಕ ಕಾರ್ಯಾಚರಣೆ ನಡೆಸಿ ಜೀವಂತವಾಗಿ ರಕ್ಷಿಸಿದ್ದಾರೆ.                           ಜಾಹೀರಾತು. ಶಾಂತಿಗ್ರಾಮ–ಹರಿಹರಪುರದಲ್ಲಿ ಘಟನೆ ನಡೆದಿದ್ದು, ಮಾಹಿತಿ ದೊರೆತ ತಕ್ಷಣ ಕೊಪ್ಪ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅಪಾಯಕಾರಿ ಪರಿಸ್ಥಿತಿಯ ನಡುವೆಯೂ B.A. ಸೆಟ್ ಧರಿಸಿ ಬಾವಿಗೆ ಇಳಿದ ಸಿಬ್ಬಂದಿ, ಹಸುವನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು. ಜಾಹೀರಾತು. AFSTO ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಸುಂದರ ಬಿ., ರಾಜು, ರಾಜೀವ್, ವಿಶ್ವನಾಥ್, ಲಿಂಗರಾಜು, ಗುರುನಾಥ್, ಮಲ್ಲೇಶ್ ಹಾಗೂ ಪ್ರಸಾದ್ ಪಾಲ್ಗೊಂಡಿದ್ದರು. ಅಗ್ನಿಶಾಮಕ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ಮೂಕ ಪ್ರಾಣಿಯೊಂದು ಬದುಕುಳಿದಿದ್ದು, ಸಾರ್ವಜನಿಕರಿಂದ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಜಾಹೀರಾತು.