ಅಲ್-ಮದೀನ ಮಂಜನಾಡಿ 30ನೇ ವರ್ಷದ ಮಹಾ ಸಮ್ಮೇಳನದ ಪ್ರಚಾರ ಪ್ರಯುಕ್ತ ಅಲ್ ಮದೀನಾ ಕುವೈಟ್ ಕಮಿಟಿ ಸ್ವಾಗತ ಸಮಿತಿ ಅಸ್ತಿತ್ವಕ್ಕೆ
ಅಲ್-ಮದೀನ ಮಂಜನಾಡಿ 30ನೇ ವರ್ಷದ ಮಹಾ ಸಮ್ಮೇಳನದ ಪ್ರಚಾರ ಪ್ರಯುಕ್ತ ಅಲ್ ಮದೀನಾ ಕುವೈಟ್ ಕಮಿಟಿ ಸ್ವಾಗತ ಸಮಿತಿ ಅಸ್ತಿತ್ವಕ್ಕೆ ಅಲ್ ಮದೀನಾ ಕುವೈಟ್ ಕಮೀಟಿಯ ವತಿಯಿಂದ ಮಾಸಿಕ ಬದ್ರ್ ಮೌಲಿದ್ ಹಾಗೂ ಶೈಖ್ ಜೀಲಾನಿ ತಾಜುಲ್ ಉಲಮಾ ನೂರುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮವು ನವಂಬರ್ 3 ರಂದು ಕುವೈತ್ ಸಿಟಿಯ ನಶಾತ್ ಹಾಲ್ ನಲ್ಲಿ ಅಲ್ ಮದೀನಾ ಕುವೈಟ್ ಕಮಿಟಿಯ ಅಧ್ಯಕ್ಷ ರಾದ ಬಹು ಸಾವುಲ್ ಹಮೀದ್ ಸಹದಿ ಝುಹ್ರಿ ಉಸ್ತಾದರ ಅಧ್ಯಕ್ಷತೆಯಲ್ಲಿ ಹಾಗೂ ಬಹು ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದರ ದುಆ ದೊಂದಿಗೆ ಪ್ರಾರಂಭ ಗೊಂಡು ನಂತರ ಅಲ್ ಮದೀನಾ ಮಂಜನಾಡಿ ಇದರ 30 ನೇ ವರ್ಷದ ಮಹಾ ಸಮ್ಮೇಳನ ಇದೇ ಬರುವ 2024 ಫೆಬ್ರವರಿ 1,2,3, 4 ಮಂಜನಾಡಿಯಲ್ಲಿ ನಡೆಯಲಿದೆ. ಇದರ ಮಹಾ ಸಮ್ಮೇಳನದ ಪ್ರಚಾರ ಕಾರ್ಯಕ್ರಮ ನಿಮಿತ್ತ ಅಲ್-ಮದೀನ ಕುವೈತ್ ಕಮಿಟಿ ಕುವೈಟ್ ನಲ್ಲಿ ಡಿಸೆಂಬರ್ 8 2023 ರಂದು ಅಬ್ಬಾಸಿಯ ಇಂಡಿಯನ್ ಸೆಂಟ್ರಲ್ ಸ್ಕೂಲ್ ನ ಸಭಾಂಗಣ ದಲ್ಲಿ 30ನೇ ವರ್ಷ ದ ಪ್ರಚಾರ ಸಮಾರಂಭ ನಡೆಯಲಿರುವುದು. ಕಾರ್ಯಕ್ರಮದ ಯಶಸ್ವಿಗಾಗಿ ಅಲ್-ಮದೀನ ರಾಷ್ಟ್ರೀಯ ನಾಯಕರು ಹಾಗೂ ಕೆಸಿಎಫ್, ಮತ್ತು ಡಿಕೆ ಎಸ್ ಸಿ ಕಿಸ್ವ ಕೊಡಗು ಸುನ್ನಿ ನಾಯಕರ ಸಮ್ಮುಖದಲ್ಲಿ ಸ್ವಾಗತ ಸಮಿತಿ ರಚಿಸಲಾಯಿತು ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ವನ್ನುಅಲ್ ಮದೀನಾ ಕುವೈಟ್ ಪ್ರಧಾನ ಕಾರ್ಯದರ್ಶಿಯಾದ ಹಾಜಿ ಮೂಸ ಇಬ್ರಾ...