Posts

Showing posts from February, 2026

ಕರ್ನಾಟಕ ಕಲ್ಚರಲ್ ಫೌಂಡೇಶನ್, ಕೆ ಸಿ ಎಫ್ ಕುವೈಟ್, ಕೆ ಸಿ ಎಫ್ ಫೌಂಡೇಶನ್ ಡೇ,

Image
  ಕರ್ನಾಟಕ ಕಲ್ಚರಲ್ ಫೌಂಡೇಶನ್, ಕೆ ಸಿ ಎಫ್ ಕುವೈಟ್, ಕೆ ಸಿ ಎಫ್ ಫೌಂಡೇಶನ್ ಡೇ, 2026 ದಿನಾಂಕ ಫೆಬ್ರವರಿ 13 ಶುಕ್ರವಾರ ಮಗ್ರಿಬ್ ನಮಾಝ್ ನಂತರ ಸಾಲ್ಮೀಯ ಸುನ್ನಿ ಸೆಂಟರ್ ನಲ್ಲಿ ಕೆ ಸಿ ಎಫ್ ಕುವೈಟ್ ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ನೊಂದಿಗೆ ಆರಂಭವಾಯಿತು. ಪ್ರಧಾನ ಕಾರ್ಯದರ್ಶಿ ಮುಸ್ತಫ ಉಳ್ಳಾಲ ಸ್ವಾಗತಿಸಿದರು. ಸಂಘಟನಾ ಇಲಾಖೆಯ ಅಧ್ಯಕ್ಷರಾದ ಬಹುಮಾನ್ಯ ಬಾದುಶ ಸಖಾಫಿ ಉದ್ಘಾಟಿಸಿದರು.ಶಿಕ್ಷಣ ಇಲಾಖೆಯ ಅಧ್ಯಕ್ಷರಾದ ಬಹುಮಾನ್ಯ ಶಾಹುಲ್ ಹಮೀದ್ ಸಅದಿ ಝುಹ್ರಿ ಕೆಸಿಎಫ್ ಡೇ ಬಗ್ಗೆ ವಿವರಿಸಿದರು. ಆಡಳಿತ ಇಲಾಖೆಯ ಅಧ್ಯಕ್ಷರಾದ ಬಹುಮಾನ್ಯ ಫಾರೂಕ್ ಸಖಾಫಿ ರಮಳಾನ್ ತಿಂಗಳ ಬಗ್ಗೆ ತರಗತಿ ನಡೆಸಿದರು.  ಕೆಸಿಎಫ್ ಅಂತರರಾಷ್ಟ್ರೀಯ ಆಡಳಿತ ಇಲಾಖೆಯ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಾಡ್ ಸಂಘಟನಾ ಚರ್ಚಾಕೂಟದಲ್ಲಿ ವಿಷಯ ಮಂಡಿಸಿ ಉಪಯುಕ್ತ ಸಲಹೆ ನೀಡಿದರು.ಕೆಸಿಎಫ್ಅಂತರರಾಷ್ಟ್ರೀಯ ನಾಯಕರಾದ ಜನಾಬ್ ಝಕರ್ರಿಯ್ಯಾ ಆನೆಕಲ್ ಮತ್ತು ಜನಾಬ್ ಯಾಕೂಬ್ ಕಾರ್ಕಳ ಕಾರ್ಯಕ್ರಮದ ಅವಲೋಕನ ನಡೆಸಿ ವಿಷಯ ಮಂಡಿಸಿದರು. ನೋರ್ತ್ ಝೋನ್ ಅಧ್ಯಕ್ಷರಾದ ಬಹುಮಾನ್ಯ ಕಾಸಿಂ ಉಸ್ತಾದ್ ಬೆಲ್ಮ ಹಾಗೂ ಸೌತ್ ಝೋನ್ ನಾಯಕರಾದ ಜನಾಬ್ ಶಫೀಕ್ ಬೊಂದೆಲ್ ಆಶಂಷ ಕೋರಿದರು. ಮಹಬುಲ ಸೆಕ್ಟರ್ ಕಾರ್ಯಕರ್ತ ಜನಾಬ್ ಅರ್ಬಾಝ್ ಇಸ್ಲಾಮಿಕ್ ಹಾಡು ಹಾಡಿ ನೆರೆದವರನ್ನು...
Image
  ಕೊಪ್ಪ :ಪಟ್ಟಣದ ಹೊರವಲಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಣ್ಣಕೆರೆಯ ಮಕ್ಕಳು ಇಂಗ್ಲಿಷ್ ಫೆಸ್ಟ್ ನಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ. ಪಿಎಂಶ್ರೀ ಕೆಪಿಎಸ್ ಶಾಲೆ ಕೊಪ್ಪ ಪಟ್ಟಣದಲ್ಲಿ ನಡೆದ ಮೂರು ಕ್ಲಸ್ಟರ್ ಗಳ ನಡುವಿನ ಇಂಗ್ಲಿಷ್ ಫೆಸ್ಟ್ ನ 1 ರಿಂದ 5 ನೇ ತರಗತಿಯ ಸ್ಪರ್ಧೆಗಳಲ್ಲಿ ಸಣ್ಣಕೆರೆ ಶಾಲೆಯ ವಿದ್ಯಾರ್ಥಿಗಳಾದ ಶೌರ್ಯ ಯು ರೀಡಿಂಗ್ ಪ್ರಥಮ, ಸೈಯದ್ ಆರಿಜ್ ಅರ್ಹಂ ರೈಟಿಂಗ್ ಸ್ಪರ್ಧೆಯಲ್ಲಿ ದ್ವಿತೀಯ, ತನಯ್ ಗೌಡ ಸ್ಟೋರಿ ಟೆಲ್ಲಿಂಗ್ ತೃತೀಯ, ಅಕ್ಷರ ಎಸ್ ಶೆಟ್ಟಿ ಪಿಕ್ ಅಂಡ್ ಸ್ಪೀಚ್ ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ. ಕನ್ನಡ ಮಾಧ್ಯಮದ ಮಕ್ಕಳು ಇಂಗ್ಲಿಷ್ ಭಾಷೆಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುವುದಕ್ಕೆ ಶಾಲಾ ಎಸ್‌.ಡಿ.ಎಂ.ಸಿ ಮತ್ತು ಊರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಎಸ್. ಡಿ. ಎಂ. ಸಿ ಮತ್ತು ದಾನಿಗಳ ಸಹಕಾರದಿಂದ ಪೂರ್ವ ಪ್ರಾಥಮಿಕ ಎಲ್. ಕೆ. ಜಿ, ಯು.ಕೆ. ಜಿ ತರಗತಿಗಳನ್ನು ಶಾಲೆಯಲ್ಲಿ ಆರಂಭಿಸುತ್ತಿದ್ದು, ಈ ಇಂಗ್ಲಿಷ್ ಸ್ಪರ್ಧೆಗಳಲ್ಲಿ ಈ ಬಾರಿ ಅತಿ ಹೆಚ್ಚು ಮಕ್ಕಳು ಬಹುಮಾನವನ್ನು ಪಡೆದಿರುವುದು ಹೊಸ ಪೋಷಕರಿಗೆ ಪ್ರೇರಣೆಯಾಗಲಿದೆ ಎಂದು ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ಬಿ. ವಿಜಯ್ ಶುಭ ಹಾರೈಸಿದರು.ಶಾಲಾ ಮುಖ್ಯ ಶಿಕ್ಷಕಿ ಭಾರತಿ ಎ, ಸಹಶಿಕ್ಷಕಿ ಆಶಾಲತಾ ಬಿ, ಅತಿಥಿ ಶಿಕ್ಷಕರಾದ ಸುಮ ಮಕ್ಕಳಿಗೆ ಅಭಿನಂದನೆ ತಿಳಿಸಿದ್...