ಕರ್ನಾಟಕ ಕಲ್ಚರಲ್ ಫೌಂಡೇಶನ್, ಕೆ ಸಿ ಎಫ್ ಕುವೈಟ್, ಕೆ ಸಿ ಎಫ್ ಫೌಂಡೇಶನ್ ಡೇ,


 


ಕರ್ನಾಟಕ ಕಲ್ಚರಲ್ ಫೌಂಡೇಶನ್, ಕೆ ಸಿ ಎಫ್ ಕುವೈಟ್, ಕೆ ಸಿ ಎಫ್ ಫೌಂಡೇಶನ್ ಡೇ, 2026



ದಿನಾಂಕ ಫೆಬ್ರವರಿ 13 ಶುಕ್ರವಾರ ಮಗ್ರಿಬ್ ನಮಾಝ್ ನಂತರ ಸಾಲ್ಮೀಯ ಸುನ್ನಿ ಸೆಂಟರ್ ನಲ್ಲಿ ಕೆ ಸಿ ಎಫ್ ಕುವೈಟ್ ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ನೊಂದಿಗೆ ಆರಂಭವಾಯಿತು. ಪ್ರಧಾನ ಕಾರ್ಯದರ್ಶಿ ಮುಸ್ತಫ ಉಳ್ಳಾಲ ಸ್ವಾಗತಿಸಿದರು.



ಸಂಘಟನಾ ಇಲಾಖೆಯ ಅಧ್ಯಕ್ಷರಾದ ಬಹುಮಾನ್ಯ ಬಾದುಶ ಸಖಾಫಿ ಉದ್ಘಾಟಿಸಿದರು.ಶಿಕ್ಷಣ ಇಲಾಖೆಯ ಅಧ್ಯಕ್ಷರಾದ ಬಹುಮಾನ್ಯ ಶಾಹುಲ್ ಹಮೀದ್ ಸಅದಿ ಝುಹ್ರಿ ಕೆಸಿಎಫ್ ಡೇ ಬಗ್ಗೆ ವಿವರಿಸಿದರು. ಆಡಳಿತ ಇಲಾಖೆಯ ಅಧ್ಯಕ್ಷರಾದ ಬಹುಮಾನ್ಯ ಫಾರೂಕ್ ಸಖಾಫಿ ರಮಳಾನ್ ತಿಂಗಳ ಬಗ್ಗೆ ತರಗತಿ ನಡೆಸಿದರು.


 ಕೆಸಿಎಫ್ ಅಂತರರಾಷ್ಟ್ರೀಯ ಆಡಳಿತ ಇಲಾಖೆಯ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಾಡ್ ಸಂಘಟನಾ ಚರ್ಚಾಕೂಟದಲ್ಲಿ ವಿಷಯ ಮಂಡಿಸಿ ಉಪಯುಕ್ತ ಸಲಹೆ ನೀಡಿದರು.ಕೆಸಿಎಫ್ಅಂತರರಾಷ್ಟ್ರೀಯ ನಾಯಕರಾದ ಜನಾಬ್ ಝಕರ್ರಿಯ್ಯಾ ಆನೆಕಲ್ ಮತ್ತು ಜನಾಬ್ ಯಾಕೂಬ್ ಕಾರ್ಕಳ ಕಾರ್ಯಕ್ರಮದ ಅವಲೋಕನ ನಡೆಸಿ ವಿಷಯ ಮಂಡಿಸಿದರು.



ನೋರ್ತ್ ಝೋನ್ ಅಧ್ಯಕ್ಷರಾದ ಬಹುಮಾನ್ಯ ಕಾಸಿಂ ಉಸ್ತಾದ್ ಬೆಲ್ಮ ಹಾಗೂ ಸೌತ್ ಝೋನ್ ನಾಯಕರಾದ ಜನಾಬ್ ಶಫೀಕ್ ಬೊಂದೆಲ್ ಆಶಂಷ ಕೋರಿದರು. ಮಹಬುಲ ಸೆಕ್ಟರ್ ಕಾರ್ಯಕರ್ತ ಜನಾಬ್ ಅರ್ಬಾಝ್ ಇಸ್ಲಾಮಿಕ್ ಹಾಡು ಹಾಡಿ ನೆರೆದವರನ್ನು ಮನರಂಜಿಸಿದರು.



 ವಿಶೇಷ ಅತಿಥಿಯಾಗಿ ಆಗಮಿಸಿದ ಎಸ್.ಎಸ್.ಎಫ್ ರಾಷ್ಟ್ರೀಯ ನಾಯಕರಾದ ಉಬೈದ್ ಸಖಾಫಿ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.ಅಧ್ಯಕ್ಷರಾದ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿ ಹಿತನುಡಿಗೈದು ದುಆ ನಡೆಸಿಕೊಟ್ಟರು.ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜನಾಬ್ ಅಬ್ಬಾಸ್ ಬಳಂಜೆ ಧನ್ಯವಾದ ಹೇಳಿದರು. ಕೆಸಿಎಫ್ ಡೇ ಪ್ರಯುಕ್ತ ಎರಡು ಝೋನ್ ಗಳಲ್ಲಿ ಕಾರ್ಯಕರ್ತರ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಸಲಾಗಿತ್ತು. ಕೊನೆಯಲ್ಲಿ ತಬರುಕ್ ನೀಡಲಾಯಿತು.






ವರದಿ :ಪ್ರಕಾಶನ ಮತ್ತು ಪ್ರಚಾರ ವಿಭಾಗ ಕೆಸಿಎಫ್ ಕುವೈಟ್





Comments

Popular posts from this blog

ಕೊಪ್ಪ, ಶಾಲೆಯ ಮಕ್ಕಳನ್ನ ಅಟೋ ಚಾಲಕರ ಸೀಟಿನಿಂದ ಇಳಿಸಿದ ಪಿ ಎಸ್ ಐ ಬಸವರಾಜ್, ಚಾಲಕರಿಗೆ ಎಚ್ಚರಿಕೆ

250ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನಲ್ಲಿ ಪತನ,!