Posts

ದುಬೈ ವೈಮಾನಿಕ ಪ್ರದರ್ಶನದಲ್ಲಿ ಭಾರತೀಯ ಯುದ್ಧ ವಿಮಾನ ಅಪಘಾತ, ಪೈಲಟ್ ದುರ್ಮರಣ,

Image
ದುಬೈ ವೈಮಾನಿಕ ಪ್ರದರ್ಶನದಲ್ಲಿ ಭಾರತೀಯ ಯುದ್ಧ ವಿಮಾನ ಅಪಘಾತ, ಪೈಲಟ್ ದುರ್ಮರಣ, ದುಬೈ - ದುಬೈನಲ್ಲಿ ನಡೆದ ವೈಮಾನಿಕ ಪ್ರದರ್ಶನದಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಭಾರತೀಯ ಯುದ್ಧ ವಿಮಾನ ಪತನಗೊಂಡು ಪೈಲಟ್ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖಾ ತಂಡ ರಚಿಸಲಾಗುತ್ತಿದೆ. ದುಬೈನ ಮಾಧ್ಯಮ ಕಚೇರಿ ಮತ್ತು ಯುಎಇ ರಕ್ಷಣಾ ಸಚಿವಾಲಯವು ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳು ಘಟನೆಗೆ "ಕ್ಷಿಪ್ರವಾಗಿ ಪ್ರತಿಕ್ರಿಯಿಸಿವೆ" ಮತ್ತು ಸ್ಥಳದಲ್ಲಿ ಪರಿಸ್ಥಿತಿಯನ್ನು ನಿರ್ವಹಿಸುತ್ತಿವೆ ಎಂದು ತಿಳಿಸಿವೆ. ದುಬೈ ಏರ್‌ಶೋ 2025 ವೆಬ್‌ಸೈಟ್ ಹೇಳುವಂತೆ ಈ ಕಾರ್ಯಕ್ರಮವು 1,500 ಕಂಪನಿಗಳಿಂದ 148,000 ಕ್ಕೂ ಹೆಚ್ಚು ಪ್ರೇಕ್ಷಕರು ಮತ್ತು ಪ್ರದರ್ಶಕರನ್ನು ಆಕರ್ಷಿಸಿದೆ. ಸೋಮವಾರ ಪ್ರಾರಂಭವಾದ ವೈಮಾನಿಕ ಪ್ರದರ್ಶನದ ಕೊನೆಯ ದಿನದಂದು ಈ ಭೀಕರ ಅಪಘಾತ ಸಂಭವಿಸಿದೆ.

ಮದೀನ:- ಬಸ್–ಪೆಟ್ರೋಲ್ ಟ್ಯಾಂಕರ್ ಭೀಕರ ಅಪಘಾತ: 40 ಜನರು ದುರ್ಮರಣ"

Image
ಬಸ್–ಪೆಟ್ರೋಲ್ ಟ್ಯಾಂಕರ್ ಭೀಕರ ಅಪಘಾತ: 40 ಜನರು ದುರ್ಮರಣ" ಸೌದಿಅರೇಬಿಯ ಸಮಯ ರಾತ್ರಿ 11:00 ಗಂಟೆ ಸುಮಾರಿಗೆ ಭೀಕರ ಅಪಘಾತ, ಮೆಕ್ಕಾದಲ್ಲಿ ತೀರ್ಥಯಾತ್ರೆ ಮುಗಿಸಿ ಮದೀನಾಕ್ಕೆ ಹೋಗುವ ದಾರಿಯಲ್ಲಿ ಅಪಘಾತ, ಮದೀನಾ ನಡುವಿನ ಮುಫರಹತ್ ಎಂಬ ಸ್ಥಳದಲ್ಲಿ ಅಪಘಾತ ಸಂಭವಿಸಿದೆ. ಬಸ್‌ನಲ್ಲಿದ್ದ ಎಲ್ಲಾ ಯಾತ್ರಿಕರು ಹೈದರಾಬಾದಿನವರು ಎಂದು ಉಮ್ರಾ ಕಂಪನಿ ದೃಢಪಡಿಸಿದೆ.  ಮದೀನಾದಲ್ಲಿ ಉಮ್ರಾ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 40 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೆಕ್ಕಾದಿಂದ ಹೊರಟ ಉಮ್ರಾ ಬಸ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಬಸ್‌ನಲ್ಲಿ 43 ಹೈದರಾಬಾದಿನವರು ಇದ್ದರು. ಮೃತರಲ್ಲಿ 20 ಮಹಿಳೆಯರು ಮತ್ತು 11 ಮಕ್ಕಳು ಎಂದು ವರದಿಯಾಗಿದೆ. ಪೆಟ್ರೋಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ನಂತರ ಬಸ್‌ ತಕ್ಷಣವೇ ಬೆಂಕಿಗೆ ಆಹುತಿಯಾಯಿತು. ಅಪಘಾತದಲ್ಲಿ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ ಎಂದು ವರದಿಯಾಗಿದೆ. ಬದುಕುಳಿದವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

AIFWA2025-2028 ರ ಸಾಲಿಗೆ ನೂತನ ಸಾರಥಿಗಳು,

Image
  AIFWA2025-2028 ರ ಸಾಲಿಗೆ ನೂತನ ಸಾರಥಿಗಳು, ಅಬೂಬಕ್ಕರ್ ಐಸಮ್ಮ ಫ್ಯಾಮಿಲಿ ವೆಲ್ಫೇರ್ ಅಸೋಸಿಯೇಸನ್) ಇದರ ಮಹಾಸಭೆಯು ದಿ:-13/07/2025 ರವಿವಾರ ಸಮಯ ಬೆಳಿಗ್ಗೆ 11:30ಕ್ಕೆ ಪೆರಿಂಜೆ ಗಾಣದಕೊಟ್ಟಿಗೆ ತರವಾಡ್ ಮನೆಯಲ್ಲಿ ಸಭೆಯ ಅದ್ಯಕ್ಷರಾದ ಕೆ ಮಹಮ್ಮದ್ ಕುಪ್ಪೆಟ್ಟಿ ಇವರ ಅದ್ಯಕ್ಷತೆಯಲ್ಲಿ ನಡೆಯಿತು ಮೊದಲಿಗೆ ಮೌಲೂದ್ ಪಾರಾಯಣ ಮಾಡಿ ನಂತರ ಬಹು! ಶರಫುದ್ದೀನ್ ತಂಘಳ್ ರವರ ದುಆ ದೊಂದಿಗೆ ಸಭೆಯನ್ನು ಉದ್ಘಾಟನೆ ಮಾಡಿದರು ಜ! ಖಾಲಿದ್ ಕಾಶಿಪಟ್ಣ ಎಲ್ಲರನ್ನು ಸ್ವಾಗತಿಸಿದರು ನಮ್ಮ ಫ್ಯಾಮಿಲಿಯ ಪರಿಚಯವನ್ನು ಅಬೂಬಕ್ಕರ್ ಸಿದ್ದೀಕ್(ಅಬ್ಬಾಸ್ ಅಂಬಿಯಾ ಆಲ್ದೂರು)ಇವರು ನೆರವೇರಿಸಿದರು ಹಾಗೂ ಮುಂದಿನ ನಮ್ಮ ಫ್ಯಾಮಿಲಿ ಭವಿಷ್ಯಕ್ಕಾಗಿ ಬೈಲಾವನ್ನು ಬಹಳ ಅಚ್ಚುಕಟ್ಟಾಗಿ ರಚಿಸಿ ಸಭೆಯಲ್ಲಿ ಮಂಡಿಸಿದರು ಬಹಳ ಚರ್ಚೆಯ ನಂತರ ಅದಕ್ಕೆ ಅನುಮೋದನೆಯನ್ನು ಪಡೆಯಲಾಯಿತು ಹಾಗೂ ಸೇರಿರುವ ಎಲ್ಲಾ ಸದಸ್ಯರ ಒಪ್ಪಿಗೆಯೊಂದಿಗೆ ಫ್ಯಾಮಿಲಿ ಗೆ AIFWA ಎಂಬ ಒಂದು ಒಳ್ಳೆಯ ಹೆಸರನ್ನು ನಾಮಕರಣ ಮಾಡಲಾಯಿತು ನಂತರ ಸಭಾಧ್ಯಕ್ಷರ ಸೂಚನೆಯ ಮೇರೆಗೆ ನಮ್ಮ ಫ್ಯಾಮಿಲಿಗೆ 9 ಕ್ಯಾಬಿನೆಟ್ ಹಾಗೂ 23ಕಾರ್ಯಕಾರಿ ಸಮಿತಿ ಸದಸ್ಯರ ಹೊಸ ಸಮಿತಿಯೊಂದನ್ನು ರಚಿಸಲಾಯಿತು ಹಾಗೂ ಸಂಘದ ಕಾರ್ಯಕ್ರಮಗಳು ಉತ್ತಮವಾಗಿ ನಡೆಯಲು ಕೆಲವು ಉಪ ಸಮಿತಿಗಳನ್ನು ರಚನೆ ಮಾಡುವುದೆಂದು ತೀರ್ಮಾನಿಸಲಾಯಿತು ಇನ್ನು ಮುಂದೆ ಸಂಘದ ಎಲ್ಲಾ ಕಾರ್ಯಕ್ರಮಗಳು ಮಹಾಸಭೆಯ ದಿನ ಅಂಗೀಕರಿಸಿದ ಬೈಲಾ(BY L...

ಕೊಪ್ಪ:- ನ್ಯಾಯಕ್ಕಾಗಿ ಕೊಪ್ಪ ದಲ್ಲಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ,

Image
 ಶಮಿತಾ ಸಾವಿನ ನ್ಯಾಯಕ್ಕಾಗಿ ಹೋರಾಟ,  ಕೊಪ್ಪ:- ನ್ಯಾಯಕ್ಕಾಗಿ ಕೊಪ್ಪ ದಲ್ಲಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ,  ರಾಜ್ಯದ ಗಮನ ಸೆಳೆದಿರುವ ಕೊಪ್ಪ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿನಿ ಶಮಿತಾ ಸಾವು ಪ್ರಕರಣ ಇದೀಗ ಹೋರಾಟದ ಹಾದಿ ಹಿಡಿದಿದೆ. ಸೋಮವಾರ ಕೊಪ್ಪದಲ್ಲಿ ಭಾರೀ ಹೋರಾಟ ನಡೆಯಲಿದೆ. ಜೂ.28ರಂದು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅನುಮಾನಸ್ಪದವಾಗಿ ಸಾವಿಗೀಡಾಗಿರುತ್ತಾಳೆ, ಈ ಬಗ್ಗೆ ಸೂಕ್ತ ತನಿಖೆಯನ್ನು ಕೈಗೊಳ್ಳಬೇಕು ಹಾಗೂ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರನ್ನು ತನಿಖೆಗೆ ಒಳಪಡಿಸಲು ಅಗ್ರಹಿಸಿ ಪ್ರಗತಿಪರ ಸಂಘಟನೆಗಳೊಂದಿಗೆ ದಿನಾಂಕ:07:07:2025ರಂದು ಬೆಳ್ಳಿಗೆ 10 ಗಂಟೆಯಿಂದ ಎರಡು ಗಂಟೆವರೆಗೆ ಟೌನ್ ಹಾಲಿನಿಂದ ಬಸ್ ನಿಲ್ದಾಣ ಹೊರಗೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.  ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಕೊಪ್ಪ ಪೊಲೀಸರು, ಶಮಿತಾ ಸಾವಿಗೆ ನ್ಯಾಯ ಬೇಕು. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಳಲ್ಲ. ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ವರದಿ:- ಮಜೀದ್ ಸಣ್ಣಕೆರೆ

ಕೊಪ್ಪಳ, ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ವಿರೋಧಿಸಿ ಮಸೀದಿಗಳ ಮುಂದೆ ಮೌನ ಪ್ರತಿಭಟನೆ.

Image
ಕೊಪ್ಪಳ,  ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ವಿರೋಧಿಸಿ ಮಸೀದಿಗಳ ಮುಂದೆ ಮೌನ ಪ್ರತಿಭಟನೆ. ಕೊಪ್ಪಳ : ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಕರೆ ಹಿನ್ನೆಲೆ ನಗರದಲ್ಲಿ ಶುಕ್ರವಾರದ ವಿಶೇಷ ಪ್ರಾರ್ಥನೆ ಬಳಿಕ ಮಸೀದಿಗಳ ಮುಂದೆ ಮಾನವ ಸರಪಳಿ ಮಾಡಿ ಮೌನ ಪ್ರತಿಭಟನೆ ವ್ಯಕ್ತಪಡಿಸಿದರು.     ಕುಷ್ಟಗಿ ರಸ್ತೆಯಲ್ಲಿರುವ ಖೂಬಾ ಮಸೀದಿಯ ಮುಂದೆ ಮಾನವ ಸರಪಳಿ ಮಾಡಿ ಮೌನ ಪ್ರತಿಭಟನೆ ಮಾಡಿದ ಬಳಿಕ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್ ಮಾತನಾಡಿ ಯಾರೂ ಬೇಡಿಕೆ ಇಡದೆ ಇದ್ದಂತಹ ವಕ್ಫ್ ಮಂಡಳಿಯ ನಿಯಮಗಳನ್ನು ಬದಲಾಯಿಸಲಾಗಿದೆ. ಸರ್ಕಾರ ಯಾರ ಪಿತೂರಿಗೆ ಈ ನಿಯಮಗಳು ಬದಲಾಯಿಸಿ ಇಸ್ಲಾಂ ಧರ್ಮಕ್ಕೆ ತದ್ವಿರುದ್ಧವಾಗಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದಲ್ಲದೆ. ಧರ್ಮ ನಿರಪೇಕ್ಷ.ಸಮಾಜವಾದಿ. ಜಾತ್ಯತೀತ ಎಂಬ ಪದವನ್ನು ಸಂವಿಧಾನದ ಪೀಠಿಕೆಯಿಂದ ತೆಗೆಯುವ ಹೇಳಿಕೆಗಳನ್ನು ನೋಡಿದರೆ ಸಂವಿಧಾನವನ್ನು ವಿರೋಪ ಗೊಳಿಸುವ ಪಿತೂರಿ ನಡೆಸಲಾಗುತ್ತಿದೆ. ಸವಿಧಾನವನ್ನು ನಿಷ್ಪ್ರಯೋಜಕ ಗೊಳಿಸುವ ಎಲ್ಲಾ ಕುತಂತ್ರಗಳು ನಡೆಯುತ್ತಿದೆ. ಸಂವಿಧಾನ ಉಳಿಸಿಕೊಳ್ಳುವ ಮತ್ತು ಹಳೆಯ ವಕ್ಫ್ ಮಂಡಳಿಯ ಕಾಯ್ದೆಗಳನ್ನು ಯಥಾ ಸ್ಥಿತಿಯಲ್ಲಿ ಮುಂದುವರಿಸಲು ಒತ್ತಾಯಸಿದರು.       ಖೂಬಾ ಮಸೀದಿಯ ಪೇಶ್ ಇಮಾಮ್ ಹಾಫಿಝ್ ಮೊಹಮ್ಮದ್ ಮುಜಾಹಿದ್ ಖಾಝಿ ರಝಾ. ಖೂಬಾ ಮಸೀದಿ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಬ್. ಉಪಾ...
Image
 ಕೊಪ್ಪ:-  ತಾಲೂಕಿನ ಹರಂದೂರು ಗ್ರಾಮದ ಸಣ್ಣಕೆರೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಗೆ ಹೊಸದಾಗಿ ದಾಖಲಾತಿಯಾದ ಮಕ್ಕಳಿಗೆ, ಬೆಂಗಳೂರಿನಲ್ಲಿ ವಾಸವಿರುವ ಗುರುರಾಜ್ ಎಂಬುವವರು  ತಲಾ ಮೂರು ಜೊತೆ ಸಮವಸ್ತ್ರ ಕೊಟ್ಟು ಮಾನವೀಯತೆ ಮೆರೆದಿದ್ದಾರೆ, ಫಾಝಿಲ್ ರಹ್ಮಮಾನ್,ಸಣ್ಣಕೆರೆ ಶಾಲೆಯ ವಿದ್ಯಾರ್ಥಿ,ವಿಡಿಯೋ ನೋಡಲು ಇಲ್ಲಿ ಒತ್ತಿ,  ಗುರುರಾಜ್ ರವರಿಗೆ ಸಣ್ಣಕೇರೆ ಶಾಲೆಯ   ಎಸ್ ಡಿ ಎಂ ಸಿ. ಅಧ್ಯಕ್ಷರು ಹಾಗು   ಸದ್ಯಸ್ಯರು ಶಾಲೆಯ ಶಿಕ್ಷಕರು ಗ್ರಾಮಸ್ಥರು. ಹಾಗೂ ಮಕ್ಕಳ ಪೋಷಕರು. ಅಭಿನಂದಿಸಿ ಧನ್ಯವಾದ ಸಲ್ಲಿಸಿದರು. ವರದಿ:- ಮಜೀದ್ ಸಣ್ಣಕೆರೆ

ಕೊಪ್ಪಳದ ಅಶೋಕ ವೃತ್ತದಲ್ಲಿ ದೇವನಹಳ್ಳಿ ಚಳುವಳಿನಿರತ ರೈತರ ಬಂಧನ ಖಂಡಿಸಿ ಪ್ರತಿಭಟನೆ.

Image
 ಕೊಪ್ಪಳದ ಅಶೋಕ ವೃತ್ತದಲ್ಲಿ ದೇವನಹಳ್ಳಿ ಚಳುವಳಿನಿರತ ರೈತರ ಬಂಧನ ಖಂಡಿಸಿ ಪ್ರತಿಭಟನೆ. ಕೊಪ್ಪಳ : ದೇವನಹಳ್ಳಿ ಚಳುವಳಿ ನಿರತ ರೈತರ ಬಂಧನ ಖಂಡಿಸಿ ಸಂಯುಕ್ತ ಹೋರಾಟ - ಕರ್ನಾಟಕ ಜಿಲ್ಲಾ ಮಂಡಳಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ  ಎಚ್ಚರಿಕೆ ನೀಡಿ ಬಂಧಿತ ರೈತರನ್ನು ಬಿಡುಗಡೆಗೆ ಆಗ್ರಹಿಸಿದರು.       ಕೊಪ್ಪಳ ಜಿಲ್ಲೆಯ ರೈತ ಪರ ಚಳವಳಿಗಾರರು ಮಾತನಾಡಿ ದೇವನಹಳ್ಳಿ ಸೇರಿದಂತೆ 13 ಗ್ರಾಮಗಳಲ್ಲಿನ ರೈತರು ಸರ್ಕಾರದ ಬಲವಂತದ ಭೂ ಸ್ವಾಧೀನ ರೈತ ವಿರೋಧಿ ನೀತಿಗಳನ್ನು ಪ್ರತಿಭಟಿಸಿ, ಸುಮಾರು 1180 ದಿನಗಳಿಂದ, ದೇವನಹಳ್ಳಿಯ ಸಂತೆ ಮೈದಾನದಲ್ಲಿ ಶಾಂತಿಯುತ ಚಳುವಳಿಯನ್ನು ನಡೆಸುತ್ತಿದ್ದರು. ಇಂಥದೊಂದು ದೀರ್ಘಾವಧಿಯ ರೈತ ಚಳುವಳಿ ನಡೆಯುತ್ತಿದ್ದರೂ, ಸರ್ಕಾರ ಮಾತ್ರ ಎನೂ ನಡೆಯುತ್ತಿಲ್ಲವೆಂಬಂತೆ ಜಾಣ ಕುರುಡುತನ ಪ್ರದರ್ಶಿಸಿತು. ಇದು ರೈತರ ತಾಳ್ಮೆಗೆಡಲು ಕಾರಣವಾಯಿತು. ಇದರಿಂದಾಗಿ ರೈತರ ಚಳುವಳಿಯು ತೀವ್ರತೆ ಪಡೆಯಿತು.          ಕೊಪ್ಪಳ ನಗರದಲ್ಲಿ 25. 06. 2025ರಂದು ದೇವನಹಳ್ಳಿಯ ರೈತ ಚಳುವಳಿಗೆ ಬೆಂಬಲಿಸಿದ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ ರಾಜ್ಯದ ವಿವಿಧ ಜಿಲ್ಲೆಗಳ ರೈತರು, ಕಾರ್ಮಿಕರು, ಜನಪರ ಸಂಘಟನೆಗಳ ಕಾರ್ಯಕರ್ತರು ದೇವನಹಳ್ಳಿ ಚಲೋ ಚಳುವಳಿಯ ಭಾಗವಾಗಿ ಅಲ್ಲಿ ಸಾವಿರ ಸಾವಿರ ಸಂಖ...