ಮದೀನ:- ಬಸ್–ಪೆಟ್ರೋಲ್ ಟ್ಯಾಂಕರ್ ಭೀಕರ ಅಪಘಾತ: 40 ಜನರು ದುರ್ಮರಣ"
ಬಸ್–ಪೆಟ್ರೋಲ್ ಟ್ಯಾಂಕರ್ ಭೀಕರ ಅಪಘಾತ: 40 ಜನರು ದುರ್ಮರಣ"
ಸೌದಿಅರೇಬಿಯ ಸಮಯ ರಾತ್ರಿ 11:00 ಗಂಟೆ ಸುಮಾರಿಗೆ ಭೀಕರ ಅಪಘಾತ, ಮೆಕ್ಕಾದಲ್ಲಿ ತೀರ್ಥಯಾತ್ರೆ ಮುಗಿಸಿ ಮದೀನಾಕ್ಕೆ ಹೋಗುವ ದಾರಿಯಲ್ಲಿ ಅಪಘಾತ, ಮದೀನಾ ನಡುವಿನ ಮುಫರಹತ್ ಎಂಬ ಸ್ಥಳದಲ್ಲಿ ಅಪಘಾತ ಸಂಭವಿಸಿದೆ. ಬಸ್‌ನಲ್ಲಿದ್ದ ಎಲ್ಲಾ ಯಾತ್ರಿಕರು ಹೈದರಾಬಾದಿನವರು ಎಂದು ಉಮ್ರಾ ಕಂಪನಿ ದೃಢಪಡಿಸಿದೆ.
ಮದೀನಾದಲ್ಲಿ ಉಮ್ರಾ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 40 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೆಕ್ಕಾದಿಂದ ಹೊರಟ ಉಮ್ರಾ ಬಸ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಬಸ್‌ನಲ್ಲಿ 43 ಹೈದರಾಬಾದಿನವರು ಇದ್ದರು. ಮೃತರಲ್ಲಿ 20 ಮಹಿಳೆಯರು ಮತ್ತು 11 ಮಕ್ಕಳು ಎಂದು ವರದಿಯಾಗಿದೆ.
ಪೆಟ್ರೋಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ನಂತರ ಬಸ್ ತಕ್ಷಣವೇ ಬೆಂಕಿಗೆ ಆಹುತಿಯಾಯಿತು. ಅಪಘಾತದಲ್ಲಿ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ ಎಂದು ವರದಿಯಾಗಿದೆ. ಬದುಕುಳಿದವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.


Comments
Post a Comment