ಸೌದಿ ಅರೇಬಿಯಾದಲ್ಲಿ ಕಾರು ಅಪಘಾತ,ಮೂವರು ಮಕ್ಕಳು ಸಹಿತ ಕೇರಳದ ಒಂದೇ ಕುಟುಂಬದ ಐವರು ಮೃತ್ಯು,


 

ಸೌದಿ ಅರೇಬಿಯಾದ ಬಿಶಾ ಪ್ರಾಂತ್ಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೇರಳದ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ ಎಂದು onmanorama.com ವರದಿ ಮಾಡಿದೆ . ಮೃತರನ್ನು ಮುಹಮ್ಮದ್ ಜಾಬೀರ್ ( 48 ) , ಅವರ ಪತ್ನಿ ಶಬ್ಬಾ ( 36 ) ಮತ್ತು ಮಕ್ಕಳಾದ ಸೈಬಾ ( 7 ) , ಸಹಾ ( 5 ) ಮತ್ತು ಲುಚ್ಛಿ ಎಂದು ಗುರುತಿಸಲಾಗಿದೆ . ಶುಕ್ರವಾರ ರಾತ್ರಿ ಕುಟುಂಬ ಸಮೇತರಾಗಿ ಜುಬೈಲ್‌ನಿಂದ ಜಿಝಾನ್‌ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ . ಮಾರ್ಗಮಧ್ಯೆ ಅವರ ವಾಹನಕ್ಕೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ, ಜಾಬೀರ್ ಮತ್ತು ಕುಟುಂಬ ಕೇರಳದ ಕೋಝಿಕ್ಕೋಡ್ ಮೂಲದವರಾಗಿದ್ದಾರೆ ಎಂದು ತಿಳಿದು ಬಂದಿದೆ .

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?