ತಹಶೀಲ್ದಾರ್ ಅಂಬುಜಾ ಜೊತೆ ಮಾತುಕತೆ ನಡೆಸಿದ ಜೆ ಡಿ ಎಸ್ ರಾಜ್ಯ ಉಪಾಧ್ಯಕ್ಷರು,




 ವರದಿ:- ವೀರಮಣಿ 



ಮಲೆನಾಡಿಗರ ಮುಖ್ಯ ಸಮಸ್ಯೆಯಾದ 94c ಹಾಗೂ ಈ ಸ್ವತ್ತಿನ ಕುರಿತಾಗಿ ಉಂಟಾಗಿರುವ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಶೃಂಗೇರಿ ತಾಲೂಕು ಕಛೇರಿಗೆ ತೆರಳಿ ತಹಶೀಲ್ದಾರ್ ಅಂಬುಜಾ ಅವರೊಂದಿಗೆ ಮಲೆನಾಡು ಭಾಗದ ಸಮಸ್ಯೆಗಳ ಕುರಿತಾಗಿ ಸವಿಸ್ತಾರವಾಗಿ ಸುಧಾಕರ್ ಶೆಟ್ಟಿ ಅವರು ಚರ್ಚಿಸಿದ್ದಾರೆ.

ಅತಿಶೀಘ್ರವಾಗಿ ಮಲೆನಾಡಿಗರ ಸಮಸ್ಯೆಗೆ ಪರಿಹಾರ ನೀಡಲೇಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿಸಿದ್ದಾರೆ.




ಪ್ರಾಕೃತಿಕ ಸೊಬಗಿನಿಂದ ಕೂಡಿರುವ ಮಲೆನಾಡು ಭಾಗವು ಎಲ್ಲರ ಕಣ್ಣಿಗೂ ಸ್ವಚ್ಛಂದವಾಗಿ ಬಹಳ ಸುಂದರವಾಗಿ ತೋರುತ್ತದೆ, ಆದರೆ ಇಲ್ಲಿನ ಮೂಲನಿವಾಸಿಗಳು ಎದುರಿಸುತ್ತಿರುವ ಸಂಕಷ್ಟ ಯಾರಿಂದಲೂ ಪರಿಹಾರ ವಾಗುತ್ತಿಲ್ಲ. ತಲೆದೋರಿರುವ 94c ಹಾಗೂ ಈ ಸ್ವತ್ತುಗಳ ಸಮಸ್ಯೆ ಅತಿ ಶೀಘ್ರವಾಗಿ ಪರಿಹಾರ ವಾಗಬೇಕೆಂದು ಮಾನ್ಯ ತಹಸೀಲ್ದಾರ್ ಅವರಲ್ಲಿ ಕೋರಿದ್ದಾರೆ.


ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಶೃಂಗೇರಿ ಕ್ಷೇತ್ರದ ಜೆಡಿಎಸ್ ಘಟಕದ ಅಧ್ಯಕ್ಷರಾದ ಕಳಸಪ್ಪ ಗೌಡ, ಕಾರ್ಯದರ್ಶಿ ದಿನೇಶ್ ಹೆಗ್ಡೆ, ದೇವೇಂದ್ರ, ಉಪಸ್ಥಿತರಿದ್ದರು,

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?