ಕುದ್ರೆಗುಂಡಿಯಲ್ಲಿ ಸೌಹಾರ್ದಯುತ ಉರೂಸ್ ಮಾರ್ಚ್ 28 ರಿಂದ,


ವರದಿ:-🖋ಮಜೀದ್ ಕೊಪ್ಪ 



 28:03:2022ರಿಂದ ಕುದ್ರೆಗುಂಡಿಯಲ್ಲಿ ಸೌಹಾರ್ದಯುತ ಉರುಸ್ ಸಂದಲ್ , ದಫ್ , ಸರ್ವಧರ್ಮ ಸಮ್ಮೇಳನ:-ಫಕೀರ್ ಅಹ್ಮದ್ ಸುದ್ದಿಗೋಷ್ಠಿಯಲ್ಲಿ ಉರುಸ್ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು ಕೊಪ್ಪ . ತಾಲೂಕಿನಕುದುರೆಗುಂಡಿಯ ಹಜ್ರತ್‌ಸಯ್ಯದ್‌ಸಾದತ್ ಷರೀಫುಲ್ಲಔಲಿಯಾ ( ಖ.ಸಿ ) ಮಖಾಂನ 92 ನೇ ವರ್ಷದಸೌಹಾರ್ದ ಉರೂಸ್ ಕಾರ್ಯಕ್ರಮಮಾ .28 ರಿಂದಮೂರು ದಿನಗಳ ಕಾಲ ಜರುಗಲಿದೆ ಎಂದು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಫಕೀರ್ ಅಹ್ಮದ್ ಹೇಳಿದರು . ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , 28 ರಂದು ಮುತ್ತಿನಕೊಪ್ಪದ ಸೈಯ್ಯದ್ ಹುಸೇನ್‌ ಜಮಲುಲೈ ಲಿತಂಬಳ್ ಅವರನೇತೃತ್ವದಲ್ಲಿ ಸ್ವಲಾತ್ ವಾರ್ಷಿಕೋತ್ಸವ , 29 ಕ್ಕೆಕಿನ್ಯ ಕೆ.ಎಸ್.ತಂಬಳ್ ಅಲ್‌ಹೈದ್ರೋಸ್‌ನೇತೃತ್ವದಲ್ಲಿ ಕುತುಬಿಯ್ಯತ್ , ಆ .30 ರಂದು ಬೆಳಗ್ಗೆ 10.30 ಗಂಟೆಗೆ ಕುದ್ರೆಗುಂಡಿ ಬಿಜೆಎಂ ಖತೀಬರಾದ ನೌಫಲ್ ಹಿಮಮಿ ಅಲ್ ಹಾದಿಯವರ ನೇತೃತ್ವದಲ್ಲಿ ಮೌಲಿದ್ ಮಜ್ಜಿಸ್ ನಡೆಯಲಿದೆ . 30 ರಂದು ಸಂಜೆ 7 ರಿಂದ ಮಲೆನಾಡಿನಸುಪ್ರಸಿದ್ಧಕಲಾವಿದರಿಂದದಫ್‌ ಕಾರ್ಯಕ್ರಮ , ಪವಿತ್ರ ಸಂದಲ್‌ಪ್ರಾರ್ಥನೆ ಮತ್ತು ಮೆರವಣಿಗೆ , ರಾತ್ರಿ 8 ಗಂಟೆಗೆ ಅಹ್ಮದ್ ನಂ ಫೈಝಿ ಅವರಿಂದ ಮುಖ್ಯ ಪ್ರಭಾಷಣ , ಧಾರ್ಮಿಕ ಪ್ರವಚನ , ಸರ್ವಧರ್ಮ ಸಮ್ಮೇಳನಗಳು ನಡೆಯಲಿವೆ ಎಂದು ತಿಳಿಸಿದರು . ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ತೀರ್ಥಹಳ್ಳಿಯ ಸಯ್ಯದ್ ಅಬೂಬಕ್ಕರ್ ಸಿದ್ದೀಖ್ ಅಲ್ ಹಾದಿ , ಕೊಪ್ಪದ ನಿತ್ಯಾ ಧಾರ ಮಾತೆ ದೇವಾಲಯದ ಫಾದರ್ ಮೆಲ್ವಿನ್ ಟೆಲಿಸ್ , ಜಿಲ್ಲಾ ಜನಜಾಗೃತಿವೇದಿಕೆ ಅಧ್ಯಕ್ಷ ಅರವಿಂದಸೋಮಯಾಜಿ ಆಗಮಿಸಲಿದ್ದಾರೆ,

ಜಾಹೀರಾತು,






ಮುಖ್ಯ ಅತಿಥಿಗಳಾಗಿ ಶಾಸಕ ಟಿ.ಡಿ.ರಾಜೇಗೌಡ , ಮುಖ್ಯ ಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ , ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ ಎಸ್ . ಶೆಟ್ಟಿ , ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು . ಸುದ್ದಿಗೋಷ್ಠಿಯಲ್ಲಿ ಉರುಸ್ ಕಾರ್ಯಕ್ರಮ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು . ಕುದುರೆಗುಂಡಿ ಬದ್ರಿಯಾ ಜುಮಾ ಮಸೀದಿ ಉಪಾಧ್ಯಕ್ಷ ಮಹಮ್ಮದ್ ಷರೀಫ್ , ಕಾರ್ಯದರ್ಶಿ ಬದ್ರುದ್ದೀನ್ , ಸಹ ಕಾರ್ಯದರ್ಶಿ ಎನ್.ಎಸ್ . ರಜಾಬ್ , ಖಜಾಂಚಿ ಮಹಮ್ಮದ್ ಹನೀಫ್ ಬೆಮ್ಮನೆ , ಬ್ಯಾರಿ ಒಕ್ಕೂಟ ಅಧ್ಯಕ್ಷ , ದಫ್ ಉಸ್ತಾದ್ ಬಿ.ಮಹಮ್ಮದ್ , ದರ್ಗಾ ಸಮಿತಿ ಮುಖ್ಯಸ್ಥ ಮೊಹಮ್ಮದ್ ಶಾಫಿ , ಅಬ್ದುಲ್ ರಜಾಕ್ ಮುಂತಾದವರು ಇದ್ದರು .






ಹೆಸರು:-ಮಜೀದ್ ಕೊಪ್ಪ 91484 88177

ಜಿಲ್ಲಾವರದಿಗಾರರು,ಚಿಕ್ಕಮಗಳೂರು

NRಪುರ,ಕೊಪ್ಪ, ಶೃಂಗೇರಿ,

ಹೆಸರು:- ವೀರಮಣಿ,73489 60125

ಜಿಲ್ಲಾವರದಿಗಾರರು,ಚಿಕ್ಕಮಗಳೂರು,

ಜಯಪುರ, ಬಾಳೆಹೊನ್ನುರು,ಅಲ್ದೂರ್,


Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?