KCF,ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈಟ್, ವತಿಯಿಂದ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್,ಅನುಸ್ಮರಣೆ,
KCF,ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈಟ್, ವತಿಯಿಂದ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್,ಅನುಸ್ಮರಣೆ,
ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ವತಿಯಿಂದ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಮಂಜನಾಡಿ ಮರ್ಹೂಂ ಅಹ್ಮದ್ ಉಸ್ತಾದ್ ಮಾಣಿಕ್ಕೂತ್ತ್ ಮರ್ಹೂಂ ಓ ಖಾಲಿದ್ ಸಾಹೇಬ್,
ಅನುಸ್ಮರಣೆ ಕಾರ್ಯಕ್ರಮವು ದಿನಾಂಕ 30/6/2022 ರಂದು ಗುರುವಾರ ಕುವೈಟ್ ಫಹಾಹೀಲ್ ನ ಮೆಡೆಕ್ಸ್ ಆಡಿಟೋರಿಯಂ ನಲ್ಲಿ ನಡೆಯಿತು,
ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಬಹು ಹುಸೈನ್ ಎರ್ಮಾಡ್ ಉಸ್ತಾದರ ಅಧ್ಯಕ್ಷತೆ ಯಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ಇಹ್ಸಾನ್ ಅಧ್ಯಕ್ಷ ಬಹು ಉಮರುಲ್ ಫಾರೂಕ್ ಸಖಾಫಿ ಉಸ್ತಾದರ ಬದರ್ ಮೌಲಿದ್ ಪಾರಾಯಣ ದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಮುಖ್ಯ ಅತಿಥಿ ಗಳಾಗಿ ಗೌರವಾನಿತ್ವ ಸಯ್ಯಿದ್ ಹಾಮಿದ್ ಫಝಲ್,
ಕೋಯಮ್ಮ ಅಲ್ ಬುಖಾರಿ ತಂಞಳ್ ಕೂರತ್ ರವರ ನೇತೃತ್ವ ಹಾಗೂ ದುವಾ ದೊಂದಿಗೆ ನಡೆದ ಕಾರ್ಯಕ್ರಮವನ್ನು ಕೆಸಿಎಫ್ ಕುವೈಟ್ ಸಂಘಟನಾ ಅಧ್ಯಕ್ಷ ಉಮರ್ ಝುಹುರಿ ಸ್ವಾಗತ ಭಾಷಣ ಮಾಡಿದರು,
ಅದೇ ರೀತಿ ಕೆಸಿಎಫ್ INC ಕೌನ್ಸಿಲರ್ ಬಹು ಅಬ್ದುಲ್ ರಹ್ಮಾನ್ ಸಖಾಫಿ ಉದ್ಘಾಟನೆ ಗೈದು ಆಶಂಸ ಭಾಷಣ ವನ್ನು ICF ಕುವೈಟ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಹು ಅಬ್ದುಲ್ ಹಕೀಮ್ ದಾರಿಮಿ ಉಸ್ತಾದರು ನಿರ್ವಹಿಸಿದರು.
ಮುಖ್ಯ ಅತಿಥಿ ಯಾಗಿ ಆಗಮಿಸಿದ ಬಹು ಅಬ್ದುಲ್ ಖಾದರ್ ಮದನಿ ಪಳ್ಳಂಗೋಡ್ ಜನರಲ್ ಸೆಕ್ರೆಟರಿ ಕೇರಳ ಮುಸ್ಲಿಂ ಜಮಾಆತ್ ಕಾಸರಗೋಡು ಜಿಲ್ಲೆ ಮರ್ಹೂಂ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ರವರ ಮತ್ತು ಮರ್ಹೂಂ ಅಹ್ಮದ್ ಉಸ್ತಾದ್ ಮಾಣಿಕೊತ್ತ್ ಹಾಗೂ ಮರ್ಹೂಂ ಓ ಖಾಲಿದ್ ರವರ ಅನುಸ್ಮರಣೆ ವಿವರವಾಗಿ ತಿಳಿಸಿದರು. ಸಭೆಯಲ್ಲಿ ಕೆಸಿಎಫ್ ರಾಷ್ಟ್ರೀಯ ನಾಯಕರು ಝೋನ್ ನಾಯಕರು ಮತ್ತು ಸೆಕ್ಟರ್ ನಾಯಕರು ಭಾಗವಹಿಸಿದರು,
ಕೊನೆಯಲ್ಲಿ ಕೆಸಿಎಫ್ ರಾಷ್ಟ್ರೀಯ ಸಮಿತಿಯ ಪಬ್ಲಿಕೇಶನ್ ವಿಭಾಗದ ಕಾರ್ಯದರ್ಶಿ ಇಬ್ರಾಹಿಂ ವೇಣೂರು ಧನ್ಯವಾದಗೈದು ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು,
ವರದಿ:- ಇಬ್ರಾಹಿಂ ವೇಣೂರು





Comments
Post a Comment