Posts

Showing posts from February, 2023

ಬಾಳೆಹೊನ್ನುರು,ಗುಂಡು ಹಾರಿಸಿ ಇಬ್ಬರ ಹತ್ಯೆ,ಸಹೋದರರು ಸ್ಥಳದಲ್ಲೇ ಸಾವು!

Image
  ಬಾಳೆಹೊನ್ನುರು,ಗುಂಡು ಹಾರಿಸಿ ಇಬ್ಬರ ಹತ್ಯೆ,ಸಹೋದರರು ಸ್ಥಳದಲ್ಲೇ ಸಾವು! ಹಾಡಹಗಲೇ ಬಂದೂಕಿನಿಂದ ಗುಂಡು ಹೊಡೆದು ಇಬ್ಬರನ್ನು ಹತ್ಯೆಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಉಜ್ಜಯಿನಿ ಚಂದ್ರುವಳ್ಳಿ ಬಿದಿರೆ ಗ್ರಾಮದ ಸಮೀಪ ಬೈಕ್ ನಲ್ಲಿ ತೆರಳುತ್ತಿದ್ದ ಸಹೋದರರ ಮೇಲೆ ರಮೇಶ್ ಎಂಬ ಆರೋಪಿ ಬಂದೂಕಿನಿಂದ ಗುಂಡು ಹೊಡೆದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಮೃತ ಸಹೋದರರನ್ನು ಪ್ರವೀಣ್ (33) ಮತ್ತು ಪ್ರಕಾಶ್ (30) ಎಂದು ಗುರುತಿಸಲಾಗಿದ್ದು, ಚಂದ್ರವಳ್ಳಿ ಗ್ರಾಮದ ರಮೇಶ್ ಎಂಬಾತ ಕೋವಿಯಿಂದ ಗುಂಡು ಹಾರಿಸಿ ಇಬ್ಬರನ್ನು ಕೊಲೆಗೈದಿದ್ದಾನೆ ಎನ್ನಲಾಗಿದೆ. ಘಟನೆಗೆ ಕಾರಣ ಇನ್ನಷ್ಟೆ ತಿಳಿಯಬೇಕಾಗಿದೆ,ಆರೋಪಿಯನ್ನು ಪೊಲೀಸರು ಬಂಧಿಸಿದ್ದರೆ ಎಂದು ತಿಳಿದು ಬಂದಿದೆ, 🖋 ವೀರಮಣಿ, ಬಾಳೆಹೊನ್ನುರು,

ಸೌದಿ ಅರೇಬಿಯಾದಲ್ಲಿ ಒಂಟೆಗೆ ಕಾರು ಢಿಕ್ಕಿಯಾಗಿ ಕರ್ನಾಟಕದ ಮೂವರು ದುರ್ಮರಣ,

Image
  ಸೌದಿ ಅರೇಬಿಯಾದಲ್ಲಿ ಒಂಟೆಗೆ ಕಾರು ಢಿಕ್ಕಿಯಾಗಿ ಕರ್ನಾಟಕದ ಮೂವರು ದುರ್ಮರಣ, ರಿಯಾದ್:-ಸೌದಿ ಅರೇಬಿಯಾದಲ್ಲಿ ಶುಕ್ರವಾರ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ ದ.ಕ ಜಿಲ್ಲೆಯ ನಾಲ್ವರು ಯುವಕರು ಮೃತಪಟ್ಟ ದಾರುಣ ಘಟನೆ ನಡೆದಿದೆ. ಮಂಗಳೂರಿನ ಹೊರವಲಯದ ಹಳೆಯಂಗಡಿ ಕದಿಕೆ ನಿವಾಸಿ ರಿಝಾನ್, ಅಕೀಲ್, ನಾಸಿರ್, ಶಿಹಾಬ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ನಾಲ್ವರು ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಖುರೈಸ್ ರಸ್ತೆಯ ಬಳಿ ಒಂಟೆಗೆ ಢಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಎನ್ನಲಾಗಿದೆ. ಯುವಕರು SAQCO ಎಂಬ ಕಂಪೆನಿಯಲ್ಲಿ ನೌಕರರಾಗಿದ್ದು, ಕಾರಿನಲ್ಲಿದ್ದ ಮತ್ತೋರ್ವ ಬಾಂಗ್ಲಾದೇಶದ ಯುವಕ ಕೂಡ ಮೃತಪಟ್ಟಿದ್ದಾನೆ. ಎಂದು ತಿಳಿದುಬಂದಿದೆ. ಹಳೆಯಂಗಡಿ ನಿವಾಸಿ ರಿಝಾನ್ ಅವರು, 4 ತಿಂಗಳ ಹಿಂದಷ್ಟೇ ಉದ್ಯೋಗ ನಿಮಿತ್ತ ಸೌದಿ ಅರೇಬಿಯಾಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ,

ಹೊತ್ತಿ ಉರಿದ ಚಲಿಸುತ್ತಿರುವ ಕಾರ್, ಗರ್ಭಿಣಿ ಹಾಗೂ ಪತಿ ಸಜೀವ ದಹನ.!

Image
   ಹೊತ್ತಿ ಉರಿದ ಚಲಿಸುತ್ತಿರುವ ಕಾರ್ ಗರ್ಭಿಣಿ ಹಾಗೂ ಪತಿ ಸಜೀವ ದಹನ.! ಕಣ್ಣೂರು:- ದಂಪತಿ ಪ್ರಯಾಣಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿರುವ ಘಟನೆ ಕೇರಳದ ಕಣ್ಣೂರಿನ ಜಿಲ್ಲಾ ಸರಕಾರಿ ಆಸ್ಪತ್ರೆ ಸಮೀಪ ಗುರುವಾರ ನಡೆದಿದೆ, ಕಾರಿನಲ್ಲಿ ಆರು ಮಂದಿ ಪ್ರಯಾಣಿಸುತ್ತಿದ್ದು, ಕಾರಿಗೆ ಬೆಂಕಿ ಹೊತ್ತಿಕೊಂಡ ನಂತರ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ನಾಲ್ವರು ಪಾರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ಕುಟ್ಯತ್ತೂರಿನವರಾದ 35 ಹಾಗೂ 26 ವರ್ಷ ವಯಸ್ಸಿನ ಸಂತ್ರಸ್ತರು ಹಾಗೂ ಇತರರು ಜಿಲ್ಲಾ ಆಸ್ಪತ್ರೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ,ಮೃತಪಟ್ಟ ಮಹಿಳೆ ಗರ್ಭಿಣಿಯಾಗಿದ್ದು, ಕಾರಿನ ಮುಂಭಾಗದ ಬಾಗಿಲು ತೆರೆದು ಸಂತ್ರಸ್ತ ದಂಪತಿಯನ್ನು ರಕ್ಷಿಸಲು ಪ್ರಯತ್ನಿಸಿದರೂ ಅದು ವಿಫಲವಾಗಿದೆ ಎಂದು ವರದಿ ತಿಳಿಸಿದೆ.