ಬಾಳೆಹೊನ್ನುರು,ಗುಂಡು ಹಾರಿಸಿ ಇಬ್ಬರ ಹತ್ಯೆ,ಸಹೋದರರು ಸ್ಥಳದಲ್ಲೇ ಸಾವು!
ಬಾಳೆಹೊನ್ನುರು,ಗುಂಡು ಹಾರಿಸಿ ಇಬ್ಬರ ಹತ್ಯೆ,ಸಹೋದರರು ಸ್ಥಳದಲ್ಲೇ ಸಾವು!
ಹಾಡಹಗಲೇ ಬಂದೂಕಿನಿಂದ ಗುಂಡು ಹೊಡೆದು ಇಬ್ಬರನ್ನು ಹತ್ಯೆಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಉಜ್ಜಯಿನಿ ಚಂದ್ರುವಳ್ಳಿ ಬಿದಿರೆ ಗ್ರಾಮದ ಸಮೀಪ ಬೈಕ್ ನಲ್ಲಿ ತೆರಳುತ್ತಿದ್ದ ಸಹೋದರರ ಮೇಲೆ ರಮೇಶ್ ಎಂಬ ಆರೋಪಿ ಬಂದೂಕಿನಿಂದ ಗುಂಡು ಹೊಡೆದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಮೃತ ಸಹೋದರರನ್ನು ಪ್ರವೀಣ್ (33) ಮತ್ತು ಪ್ರಕಾಶ್ (30) ಎಂದು ಗುರುತಿಸಲಾಗಿದ್ದು, ಚಂದ್ರವಳ್ಳಿ ಗ್ರಾಮದ ರಮೇಶ್ ಎಂಬಾತ ಕೋವಿಯಿಂದ ಗುಂಡು ಹಾರಿಸಿ ಇಬ್ಬರನ್ನು ಕೊಲೆಗೈದಿದ್ದಾನೆ ಎನ್ನಲಾಗಿದೆ.
ಘಟನೆಗೆ ಕಾರಣ ಇನ್ನಷ್ಟೆ ತಿಳಿಯಬೇಕಾಗಿದೆ,ಆರೋಪಿಯನ್ನು ಪೊಲೀಸರು ಬಂಧಿಸಿದ್ದರೆ ಎಂದು ತಿಳಿದು ಬಂದಿದೆ,
🖋 ವೀರಮಣಿ, ಬಾಳೆಹೊನ್ನುರು,

Comments
Post a Comment