ಹೊತ್ತಿ ಉರಿದ ಚಲಿಸುತ್ತಿರುವ ಕಾರ್, ಗರ್ಭಿಣಿ ಹಾಗೂ ಪತಿ ಸಜೀವ ದಹನ.!
ಹೊತ್ತಿ ಉರಿದ ಚಲಿಸುತ್ತಿರುವ ಕಾರ್ ಗರ್ಭಿಣಿ ಹಾಗೂ ಪತಿ ಸಜೀವ ದಹನ.!
ಕಣ್ಣೂರು:- ದಂಪತಿ ಪ್ರಯಾಣಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿರುವ ಘಟನೆ ಕೇರಳದ ಕಣ್ಣೂರಿನ ಜಿಲ್ಲಾ ಸರಕಾರಿ ಆಸ್ಪತ್ರೆ ಸಮೀಪ ಗುರುವಾರ ನಡೆದಿದೆ,ಕಾರಿನಲ್ಲಿ ಆರು ಮಂದಿ ಪ್ರಯಾಣಿಸುತ್ತಿದ್ದು, ಕಾರಿಗೆ ಬೆಂಕಿ ಹೊತ್ತಿಕೊಂಡ ನಂತರ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ನಾಲ್ವರು ಪಾರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಜಿಲ್ಲೆಯ ಕುಟ್ಯತ್ತೂರಿನವರಾದ 35 ಹಾಗೂ 26 ವರ್ಷ ವಯಸ್ಸಿನ ಸಂತ್ರಸ್ತರು ಹಾಗೂ ಇತರರು ಜಿಲ್ಲಾ ಆಸ್ಪತ್ರೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ,ಮೃತಪಟ್ಟ ಮಹಿಳೆ ಗರ್ಭಿಣಿಯಾಗಿದ್ದು,ಕಾರಿನ ಮುಂಭಾಗದ ಬಾಗಿಲು ತೆರೆದು ಸಂತ್ರಸ್ತ ದಂಪತಿಯನ್ನು ರಕ್ಷಿಸಲು ಪ್ರಯತ್ನಿಸಿದರೂ ಅದು ವಿಫಲವಾಗಿದೆ ಎಂದು ವರದಿ ತಿಳಿಸಿದೆ.

Comments
Post a Comment