Posts

Showing posts from June, 2023

ಕುವೈತ್,ರಕ್ತಧಾನ ಶಿಬಿರವನ್ನು ಆಯೋಜಿಸಿದ್ದ K C F,ಕುವೈತ್ ಝೋನ್,

Image
  ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಕುವೈಟ್ ರಕ್ತಧಾನ ಮಾಡಿ ಜೀವ ಉಳಿಸಿ ರಕ್ತಧಾನ ಶಿಬಿರವು ಜಬ್ರಿಯಾ ಸೆಂಟ್ರಲ್ ಬ್ಲಡ್ ಬ್ಯಾಂಕ್ ನಲ್ಲಿ ಜೂನ್ 16 ರ ಶುಕ್ರವಾರ KCF ಅಧ್ಯಕ್ಷರಾದ ಬಹು ಹುಸೈನ್ ಮುಸ್ಲಿಯಾರ್ ಎರುಮಾಡ್ ಅವರ ಉಪಸ್ಥಿತಿ ಯಲ್ಲಿ ಸಾಂತ್ವನ ವಿಭಾಗದ ಅಧ್ಯಕ್ಷರಾದ ಜನಾಬ್ ಇಕ್ಬಾಲ್ ಕಂದಾವರ, ಅಬ್ದುಲ್ ಮಲಿಕ್, ಬಹು ಬಾದಾಷ ಸಖಾಫಿ, ಝಕರಿಯ ಅನೇಕಲ್ ,ಬಹು ಉಮರ್ ಝು ಹ್ರಿ, ಫಾರೂಕ್ ಸಖಾಫಿ, ಇಬ್ರಾಹಿಂ ವೇಣೂರು , ಸಮೀರ್ ಕೆಸಿರೋಡ್ ಮುಸ್ತಫಾ ಉಳ್ಳಾಲ, ಉಮರಬ್ಬ ಕೊಳಕೆ , ಸಿರಾಜ್ ಸುಂಟಿ ಕೊಪ್ಪ ಇಸ್ಮಾಯಿಲ್ ಅಯ್ಯಂಗೇರಿ ರಾಷ್ಟ್ರೀಯ, ಝೋನ್, ಸೆಕ್ಟರ್, Kcf ಸದಸ್ಯರು ಹಾಜರಿದ್ದರು, KCF ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಕಾರ್ಕಳ ಅವರು ಶುಭಕೊರಿದರು,  ಸುಮಾರು ನೂರಾರು ಜನರು ರಕ್ತದಾನಕಾರ್ಯಕ್ರಮದಲ್ಲಿಭಾಗವಹಿಸಿದರು. ರಕ್ತದಾನ ಶಿಬಿರಕ್ಕೆ ಸಹಕರಿಸಿದ *ಐ ಟೀಮ್*, ಮತ್ತು ಭಾಗವಹಿಸಿದ ಎಲ್ಲರಿಗೂ KCF ರಾಷ್ಟ್ರೀಯ ಸಾಂತ್ವನ ವಿಭಾಗ ಧನ್ಯವಾದಗೈದರು. ಅದರಂತೆ ಪ್ರವಾದಿ ಮುಹಮ್ಮದ್ ನೆಬಿ (ಸ.ಅ)ರವರ ಚರಿತ್ರೆ ಪುಸ್ತಕ ವನ್ನು ಬಿಡುಗಡೆ ಗೊಳಿಸಲಾಯಿತು. ವರದಿ:- ಇಬ್ರಾಹಿಂ ವೇಣೂರು ಕುವೈಟ್

ಅಜ್ಜಿಯನ್ನು ಕೊಂದ ಮೊಮ್ಮಗ,!

Image
  ಅಜ್ಜಿಯನ್ನು ಕೊಂದ ಮೊಮ್ಮಗ,! ಮೈಸೂರು :ಅಜ್ಜಿಯೊಬ್ಬರನ್ನು ತನ್ನ ಮೊಮ್ಮಗನೇ ಕೊಲೆಗೈದು ಶವವನ್ನು ಸುಟ್ಟಿರುವ ಘಟನೆ ಮೈಸೂರು ತಾಲೂಕಿನ ಸಾಗರಕಟ್ಟೆಯಲ್ಲಿ  ನಡೆದಿದೆ. ಗಾಯತ್ರಿಪುರಂ ನಿವಾಸಿ ಸುಲೋಚನಾ(75) ಕೊಲೆಯಾದ ಅಜ್ಜಿ ಎಂದು ತಿಳಿದು ಬಂದಿದೆ. ಸುಪ್ರೀತ್(23) ಆರೋಪಿ ಮೊಮ್ಮಗ ಎಂದು ತಿಳಿದು ಬಂದಿದೆ. ಅಜ್ಜಿಯ ಬೈಗುಳ ಸಹಿಸಿಕೊಳ್ಳಲಾಗದೆ ಈತ ತನ್ನ ಅಜ್ಜಿಯನ್ನು ಕೊಲೆಗೈದು, ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ರಟ್ಟಿನ ಡಬ್ಬಕ್ಕೆ ಹಾಕಿ ಕಾರಿನಲ್ಲಿ ಮೈಸೂರು ತಾಲೂಕು ಸಾಗರಕಟ್ಟೆಯ ಬಳಿ ಕೆಆರ್‌ಎಸ್ ಹಿನ್ನೀರಿನ ಪ್ರದೇಶಕ್ಕೆ ತಂದು ಸುಟ್ಟು ಹಾಕಿದ್ದಾನೆ ಎಂದು ತಿಳಿದು ಬಂದಿದೆ. ಅರೆಬೆಂದ ಸ್ಥಿತಿಯಲ್ಲಿ ವೃದ್ಧೆಯೊಬ್ಬರು ಶವ ಪತ್ತೆಯಾದ ಬಗ್ಗೆ ಇಲವಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ಬೆನ್ನತ್ತಿದ ಇಲವಾಲ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಜಿ.ಎಸ್. ಸ್ವರ್ಣ ಅವರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.