ಅಜ್ಜಿಯನ್ನು ಕೊಂದ ಮೊಮ್ಮಗ,!
ಅಜ್ಜಿಯನ್ನು ಕೊಂದ ಮೊಮ್ಮಗ,!
ಮೈಸೂರು :ಅಜ್ಜಿಯೊಬ್ಬರನ್ನು ತನ್ನ ಮೊಮ್ಮಗನೇ ಕೊಲೆಗೈದು ಶವವನ್ನು ಸುಟ್ಟಿರುವ ಘಟನೆ ಮೈಸೂರು ತಾಲೂಕಿನ ಸಾಗರಕಟ್ಟೆಯಲ್ಲಿ ನಡೆದಿದೆ.
ಗಾಯತ್ರಿಪುರಂ ನಿವಾಸಿ ಸುಲೋಚನಾ(75) ಕೊಲೆಯಾದ ಅಜ್ಜಿ ಎಂದು ತಿಳಿದು ಬಂದಿದೆ. ಸುಪ್ರೀತ್(23) ಆರೋಪಿ ಮೊಮ್ಮಗ ಎಂದು ತಿಳಿದು ಬಂದಿದೆ.
ಅಜ್ಜಿಯ ಬೈಗುಳ ಸಹಿಸಿಕೊಳ್ಳಲಾಗದೆ ಈತ ತನ್ನ ಅಜ್ಜಿಯನ್ನು ಕೊಲೆಗೈದು, ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ರಟ್ಟಿನ ಡಬ್ಬಕ್ಕೆ ಹಾಕಿ ಕಾರಿನಲ್ಲಿ ಮೈಸೂರು ತಾಲೂಕು ಸಾಗರಕಟ್ಟೆಯ ಬಳಿ ಕೆಆರ್‌ಎಸ್ ಹಿನ್ನೀರಿನ ಪ್ರದೇಶಕ್ಕೆ ತಂದು ಸುಟ್ಟು ಹಾಕಿದ್ದಾನೆ ಎಂದು ತಿಳಿದು ಬಂದಿದೆ.
ಅರೆಬೆಂದ ಸ್ಥಿತಿಯಲ್ಲಿ ವೃದ್ಧೆಯೊಬ್ಬರು ಶವ ಪತ್ತೆಯಾದ ಬಗ್ಗೆ ಇಲವಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ಬೆನ್ನತ್ತಿದ ಇಲವಾಲ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಜಿ.ಎಸ್. ಸ್ವರ್ಣ ಅವರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Comments
Post a Comment