K C F,ಕರ್ನಾಟಕ ಕಲ್ಬರಲ್ ಫೌಂಡೇಶನ್ ಕೆಸಿಎಫ್ ಕುವೈಟ್ ವತಿಯಿಂದ ಮಿಲಾದ್ ಕಾನ್ಫರೆನ್ಸ್2023
ಕರ್ನಾಟಕ ಕಲ್ಬರಲ್ ಫೌಂಡೇಶನ್ ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿ ವತಿಯಿಂದ ಜಗತ್ತಿಗೆ ಕರುಣೆಯ ಪ್ರವಾದಿ ﷺ ಎಂಬ ಘೋಷ ವಾಕ್ಯದೊಂದಿಗೆ ಮೀಲಾದ್ ಕಾನ್ಸರೆನ್ಸ್ -2023 ಕಾರ್ಯಕ್ರಮ ಅಬ್ಬಾಸಿಯದ ಇಂಡಿಯನ್ ಸೆಂಟ್ರಲ್ ಸ್ಕೂಲ್ ನಲ್ಲಿ ದಿನಾಂಕ 22/09/2023 ರಂದು ಬಹಳ ವಿಜೃಂಭಣೆ ಯಿಂದ ನಡೆಯಿತು. KCF ಕುವೈತ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹು. ಹುಸೈನ್ ಎರ್ಮಾಡ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ಮೀಲಾದ್ ಸ್ವಾಗತ ಸಮಿತಿ ಛೇರ್ಮನ್ ಬಹು. ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದ್ ರವರು ಕಾರ್ಯಕ್ರಮ ಉದ್ಘಾಟಿಸಿದರು. ಸಯ್ಯದ್ ಹಬೀಬ್ ಅಲ್ ಬುಖಾರಿ ತಂಗಳ್ ರವರ ದುಆ ದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಹಮೀದ್ ಸಹದಿ ಝುಹ್ರಿ,ಬಾದುಶ ಸಖಾಫಿ ಹಾಗೂ ಶಫೀಕ್ ಅಹ್ಸನಿ ರವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನೆರೆವೇರಿತು. ಕಾರ್ಯಕ್ರಮ ದಲ್ಲಿ ಕೆಸಿಎಫ್ ಸಂಘಟನ ಅಧ್ಯಕ್ಷ ಉಮರ್ ಝುಹ್ರಿ ಅವರನ್ನು ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು. ಅದೇ ರೀತಿ TVS ಗ್ರೂಫ್ ಮಾಲೀಕ ಡಾ|ಹೈದರ್ ಹಾಜಿ ಹಾಗೂ ಇಂಜಿನಿಯರ್ ಹಮೀದ್ ಕುಳಿಯಾರ್ ರವರನ್ನು ನಮ್ಮ ಸಂಘಟನೆಯ ಹಿತೈಷಿಗಳು ಸಹಾಯಕರು ಎಂಬುದನ್ನು ಗುರುತಿಸಿ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು. .. KCF ಕುವೈತ್ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ಜನಾಬ್, ಯಾಕೂಬ್ ಕಾರ್ಕಳ ಬಂದ ಅತಿಥಿ ಗಳನ್ನು ಮತ್ತು ಸಭಿಕರನ್ನು ಸ್ವಾಗತಿಸಿ.ಸಂಘಟನೆ ಬಂದ ದಾರಿಯನ್ನು ಸ್ಮ...