ಶುಕ್ರವಾರ ಸಂಭ್ರಮದ ಕೆಸಿಎಫ್ ಕುವೈಟ್ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್ 2023
22/09/2023, ಶುಕ್ರವಾರ ಸಂಭ್ರಮದ ಕೆಸಿಎಫ್ ಕುವೈಟ್ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್ 2023
ರಬೀಹುಲ್ ಅವ್ವಲ್ ತಿಂಗಳು ಬರುವಾಗಲೇ ವಿಶ್ವಾಶಿಗಳಿಗೆ ಎಲ್ಲಿಲ್ಲದ ಸಂತೋಷ.ವಿಶಿಷ್ಟವಾಗಿ ಕೆಸಿಎಫ್ ಕುವೈಟ್ ಕಾರ್ಯಕರ್ತರಿಗೆ ಹಬ್ಬದ ಸಂಭ್ರಮ.
ಅತ್ಯಂತ ಮಹತ್ತರವಾದ ಜಗತ್ತಿಗೆ ಕರುಣೆಯ ಪ್ರವಾದಿ ಎಂಬ ಘೋಷ ವಾಕ್ಯದೊಂದಿಗೆ ಕೆ ಸಿ ಎಫ್ ನಡೆಸಿಕೊಂಡು ಬರುವಂತಹ ವಿಲಾದ್ ಸಮ್ಮೇಳನವು ಜಗತ್ತು ಕಂಡ ಮಹಾನಾಯಕ ವಿಶ್ವ ಪ್ರವಾದಿ صلي الله عليه وسلم ಜನ್ಮದಿನದ ಅಂಗವಾಗಿ ಜಗತ್ತಿಗೆ ಕರುಣೆಯ ಪ್ರವಾದಿ ಎಂಬ ಘೋಷ ವಾಕ್ಯದೊಂದಿಗೆ ಇದೇ ಬರುವ ತಾರೀಕು 22 ಸಪ್ಟೆಂಬರ್ ಶುಕ್ರವಾರ 5:00 ಗಂಟೆಗೆ ಸರಿಯಾಗಿ ಕುವೈಟ್ ಅಬ್ಬಾಸಿಯ ಸೆಂಟ್ರಲ್ ಸ್ಕೂಲ್ನಲ್ಲಿ ನಡೆಯಲಿರುವುದು ಈ ಸಮ್ಮೇಳನಕ್ಕೆ ಮುಖ್ಯ ಅತಿಥಿಯಾಗಿ ಊರಿನಲ್ಲಿ ಖ್ಯಾತಿ ಪಡೆದಂತಹ ಮದನೀಯಂ ಎಂಬ ಖ್ಯಾತ ನಾಮದ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಹಾಗೂ ನಮ್ಮ ಊರಿನ ನಮ್ಮ ಪ್ರೀತಿಯ ನೆಚ್ಚಿನ ನಾಯಕ ಕರ್ನಾಟಕ ರಾಜ್ಯದ ಸ್ಪೀಕರ್ ಯು.ಟಿ ಖಾದರ್ ಭಾಗವಹಿಸಲಿರುವರು. ಅನೇಕ ಗಣ್ಯ ವ್ಯಕ್ತಿಗಳು ಭಾಗವಹಿಸುವ ಕಾರ್ಯಕ್ರಮಕ್ಕೆ ತಾವೆಲ್ಲರೂ ಬಂದು ಯಶಸ್ವಿಗೊಳಿಸಬೇಕು ಇನ್ಷಾ ಅಲ್ಲಾ ಸಯದ್ ಕುಟುಂಬದ ಧ್ರುವತಾರೆ ಸೈಯದ್ ಹಬೀಬ್ ಕೋಯ ತಂಞಳ್ ಕುವೈಟ್ ದುವಾ ಆಶಿರ್ವಚನ ನೀಡಲಿರುವರು.
ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿ

Comments
Post a Comment