K C F,ಕರ್ನಾಟಕ ಕಲ್ಬರಲ್ ಫೌಂಡೇಶನ್ ಕೆಸಿಎಫ್ ಕುವೈಟ್ ವತಿಯಿಂದ ಮಿಲಾದ್ ಕಾನ್ಫರೆನ್ಸ್2023


 

ಕರ್ನಾಟಕ ಕಲ್ಬರಲ್ ಫೌಂಡೇಶನ್  ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿ ವತಿಯಿಂದ ಜಗತ್ತಿಗೆ ಕರುಣೆಯ ಪ್ರವಾದಿ  ﷺ

 ಎಂಬ ಘೋಷ ವಾಕ್ಯದೊಂದಿಗೆ ಮೀಲಾದ್ ಕಾನ್ಸರೆನ್ಸ್ -2023 ಕಾರ್ಯಕ್ರಮ ಅಬ್ಬಾಸಿಯದ ಇಂಡಿಯನ್ ಸೆಂಟ್ರಲ್ ಸ್ಕೂಲ್ ನಲ್ಲಿ ದಿನಾಂಕ 22/09/2023 ರಂದು ಬಹಳ ವಿಜೃಂಭಣೆ ಯಿಂದ ನಡೆಯಿತು.



KCF ಕುವೈತ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹು. ಹುಸೈನ್ ಎರ್ಮಾಡ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ಮೀಲಾದ್ ಸ್ವಾಗತ ಸಮಿತಿ ಛೇರ್ಮನ್ ಬಹು. ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದ್ ರವರು ಕಾರ್ಯಕ್ರಮ ಉದ್ಘಾಟಿಸಿದರು.



ಸಯ್ಯದ್ ಹಬೀಬ್ ಅಲ್ ಬುಖಾರಿ ತಂಗಳ್ ರವರ ದುಆ ದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಹಮೀದ್ ಸಹದಿ ಝುಹ್ರಿ,ಬಾದುಶ ಸಖಾಫಿ ಹಾಗೂ ಶಫೀಕ್ ಅಹ್ಸನಿ ರವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನೆರೆವೇರಿತು. ಕಾರ್ಯಕ್ರಮ ದಲ್ಲಿ ಕೆಸಿಎಫ್ ಸಂಘಟನ ಅಧ್ಯಕ್ಷ ಉಮರ್ ಝುಹ್ರಿ  ಅವರನ್ನು  ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು. ಅದೇ ರೀತಿ  TVS ಗ್ರೂಫ್ ಮಾಲೀಕ ಡಾ|ಹೈದರ್ ಹಾಜಿ ಹಾಗೂ ಇಂಜಿನಿಯರ್ ಹಮೀದ್ ಕುಳಿಯಾರ್ ರವರನ್ನು ನಮ್ಮ ಸಂಘಟನೆಯ ಹಿತೈಷಿಗಳು ಸಹಾಯಕರು ಎಂಬುದನ್ನು ಗುರುತಿಸಿ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು.






.. KCF ಕುವೈತ್ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ಜನಾಬ್, ಯಾಕೂಬ್ ಕಾರ್ಕಳ ಬಂದ ಅತಿಥಿ ಗಳನ್ನು ಮತ್ತು ಸಭಿಕರನ್ನು ಸ್ವಾಗತಿಸಿ.ಸಂಘಟನೆ ಬಂದ ದಾರಿಯನ್ನು ಸ್ಮರಿಸಿದರು. ಖಲಂದರ್ ಶಾಫಿ ರವರ ಕಿರಾಅತ್ ನೊಂದಿಗೆ ಕಾರ್ಯಕ್ರಮ ಆರಂಭ ಗೊಂಡಿತು.



ಕಾರ್ಯಕ್ರಮ ಕ್ಕೆ ಆಶಂಸಗೈದ ಉಮರ್ ಝುಹ್ರಿ ಉಮರುಲ್ ಫಾರೂಕ್ ಸಖಾಫಿ. Tvs ಮಾಲೀಕ ಡಾಕ್ಟರ್ ಹೈದರ್ ಹಾಜಿ ಇಂಜಿನಿಯರ್ ಹಮೀದ್ ಕುಳಿಯಾರ್   ಸಾಲ್ಮಿಯ ಕ್ಲಿನಿಕ್ ಬ್ರಾಂಚ್ ಮ್ಯಾನೇಜರ್ ಅಬ್ದುಲ್ ರಝಾಕ್ ಮಾತನಾಡಿದರು. 

ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹು ಹುಸೈನ್ ಏರುಮಾಡ್ ಅಧ್ಯಕ್ಷ ಬಾಷಣ ಮಾಡಿದರು.



ಬಹು. ಮದನೀಯಮ್ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಮುಖ್ಯ ಬಾಷಣ ಹಾಗೂ ಭಕ್ತಿ ನಿರ್ಭರವಾದ ದುವಾ ನೆರವೇರಿಸಿದರು. ಮುಖ್ಯ ಭಾಷಣ ಮಾಡಿದ ಪ್ರಖ್ಯಾತ ವಾಗ್ಮಿ ಬಹು.ಮದನೀಯಮ್ ಉಸ್ತಾದ್ ಅವರನ್ನು 

ಬಹು.ಅಸಯ್ಯದ್ ಹಬೀಬ್ ಕೋಯ ತಂಗಳ್ ಹಾಗೂ ಕೆಸಿಎಫ್ ನ ನಾಯಕರು ಸೇರಿ  ಕಾಣಿಕೆ ಕೊಟ್ಟು ಗೌರವಿಸಲಾಯಿತು.    ಕೆಸಿಎಫ್ ic ಅಂತರಾಷ್ಟ್ರೀಯ ಪ್ರತಿಭೋತ್ಸವ ದಲ್ಲಿ ಕಿರಾಹತ್ ನಲ್ಲಿ ದ್ವಿತೀಯ ಸ್ಥಾನ ಪಡೆದ ಕೆಸಿಎಫ್ ಕುವೈಟ್ ನೋರ್ತ್ ಝೋನ್ ಅಧ್ಯಕ್ಷರಾದ  ಜನಾಬ್ ಶಾಫಿ ಜೋಕಟ್ಟೆ ಅವರಿಗೆ ವಿಶೇಷ ಸನ್ಮಾನ ನೀಡಲಾಯಿತು.



ಕೆಸಿಎಫ್ ದಫ್ಫ್ ಟೀಮ್ ವತಿಯಿಂದ ನಡೆದ ದಫ್ಫ್ ಪ್ರದರ್ಶನ  ಬಹಳ ಅತ್ಯುತ್ತಮವಾಗಿ ನಡೆಸಿ ಕೊಡಲಾಯಿತು.

ಕೆಸಿಎಫ್ ಐ ಟೀಮ್ ನ ಕರ್ತವ್ಯ ನಿಷ್ಠತೆ ಯನ್ನು ಹೊಂದಿರುವ ನಿಯಂತ್ರಣ ಹಾಗೂ ಅತಿಥಿಗಳ ಸ್ವೀಕಾರ ಕಾರ್ಯಕ್ರಮಕ್ಕೆ ಮೆರುಗುನೀಡುವಂತಾಯಿತು.ಹಾಗೂ ಕಾರ್ಯಕ್ರಮಕ್ಕೆ  ಅಲ್ ಮದೀನಾ, ಕೆ ಕೆ ಎಂ ಎ, ಕಿಸ್ವಾ ಕೊಡಗು, ಮರ್ಕಝುಲ್ ಹುದ ಕುವೈಟ್,ಮುಹಿಮ್ಮಾತ್, ಡಿಕೆಎಸ್ ಸಿ      ಸಮಿತಿ ಬಾಯರ್ ಸಮಿತಿ ಶುಭ ಕೋರಿದರು ಅದೇ ರೀತಿ  ಸಮಾರಂಭ ದಲ್ಲಿ "ಅಶರ ಬಿಶಾರ" ಎಂಬ ಈ ಸೋವನೀರ್ ಬಿಡುಗಡೆ ಗೊಳಿಸಲಾಯಿತು ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಮಿತಿ ನಾಯಕರು ಝೋನ್ ನಾಯಕರು ಸೆಕ್ಟರ್ ನಾಯಕರು ಮತ್ತು ಹಲವು ಸಂಘಟನೆಗಳ ನಾಯಕರು ಭಾಗವಹಿಸಿದರು 

ಕಾರ್ಯಕ್ರಮವನ್ನು ಬಾದುಶ ಸಖಾಫಿ ಹಾಗೂ ಶಫೀಕ್ ಅಹ್ಸನಿ ನಿರೂಪಿಸಿದರು.

ಕೊನೆಯಲ್ಲಿ ಆಡಳಿತ ವಿಭಾಗ ಅಧ್ಯಕ್ಷರಾದ ಅಬ್ಬಾಸ್ ಬಳಂಜ ಧನ್ಯವಾದ ಹೇಳಿ ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.




ವರದಿ :ಇಬ್ರಾಹಿಂ ವೇಣೂರು ಕುವೈಟ್ ಪ್ರಕಾಶನ ಮತ್ತು ಪ್ರಸಾರ ವಿಭಾಗ

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?