ಶೃಂಗೇರಿ:-100 ಬೆಡ್ ಆಸ್ಪತ್ರೆಗೆ ಸಂಪುಟ ಸಭೆಯಲ್ಲಿ ತೀರ್ಮಾನ,
ಶೃಂಗೇರಿ:-100 ಬೆಡ್ ಆಸ್ಪತ್ರೆಗೆ ಸಂಪುಟ ಸಭೆಯಲ್ಲಿ ತೀರ್ಮಾನ,
ವಾರ್ತಾ ಸಾರಥಿ:- ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ 2024-25ನೇ ಸಾಲಿನ ಆಯವ್ಯಯ ಘೋಷಣೆಯನ್ವಯ 100 ಹಾಸಿಗೆಗಳ ಸಾಮಾರ್ಥ್ಯದ ಆಸ್ಪತ್ರೆ ಶೃಂಗೇರಿ ಸೇರಿದಂತೆ 7 ತಾಲ್ಲೂಕುಗಳಿಗೆ ಆಸ್ಪತ್ರೆಗಳ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ರೂ.256.15 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮತಿ ನೀಡಲು ಸಚಿವ ಸಂಪುಟ ಸಭೆ ನಿರ್ಣಯಿಸಲಾಗಿದೆ,ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರು ತಿಳಿಸಿದ್ದಾರೆ.
ಶೃಂಗೇರಿ :"ರಸ್ತೆ ಬಂದ್ "
ತಾಲ್ಲೂಕಿನಾದ್ಯಂತ ಬಿರುಸಿನ ಮಳೆ ಸುರಿದು ಹಲವೆಡೆ ಮರಗಳು ಬಿದ್ದಿದ್ದು ತಾಲ್ಲೂಕಿನ ತ್ಯಾವನ ಬಳಿ ಧರೆ ಹಾಗೂ ಮರ ರಸ್ತೆ (ಮಂಗಳೂರು ಸೋಲಾಪುರ್ ರಾಷ್ಟೀಯ ಹೆದ್ದಾರಿ169)ಮೇಲೆ ಕುಸಿದು ಬಿದ್ದಿದೆ ಇದರಿಂದ ಸ್ವಲ್ಪ ಸಮಯ ಜನಜೀವನ ,ವಾಹನಸಂಚಾರಹಾಗೂ ವಿದ್ಯುತ್ ಸಂಚಾರ ಕೂಡ ಸ್ಥಗಿತ ವಾಗಿತ್ತು .
🖋 ಶಬ್ಬೀರ್ ಅಹ್ಮದ್ hh ಪುರ



Comments
Post a Comment