ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,
ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,
ಎನ್ ಆರ್ ಪುರ:- ತಾಲೂಕಿನ ಹೊನ್ನೆಕೊಪ್ಪದಲ್ಲಿ ಒಂದೆರಡು ದಿನಗಳ ಹಿಂದೆ ಅಪ್ರಾಪ್ತೆ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ,
ಶಶಾಂಕ್(28) ಎಂಬಾತ ತನ್ನ ಸೋದರಿ ಸಂಬಂಧಿಕರ ಮಗಳನ್ನೇ ಈ ಕೃತ್ಯಕ್ಕೆ ಬಳಸಿಕೊಂಡಿದ್ದು ಬೆಳಕಿಗೆ ಬಂದಿದೆ. ಈ ಘಟನೆಯು ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಗೆ ಹೋದಾಗ ಮೊದಲು ಬೆಳಕಿಗೆ ಬಂದಿದ್ದು ಅಪ್ರಾಪ್ತೆ ಈಗ ಏಳು ತಿಂಗಳ ಗರ್ಭಿಣಿಯಾಗಿದ್ದು ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ವಿಷಯ ಹೊರಬಾರಬಾರದಂತೆ ಆರೋಪಿ ಪ್ರಯತ್ನಪಟ್ಟಿದ್ದು ಎಲ್ಲಾ ರೀತಿಯ ಪ್ರಯತ್ನಗಳು ನಡೆದಿದೆ ಎಂದು ಆರೋಪಗಳು ಕೇಳಿಬಂದಿದ್ದು ಆದರೆ ಈತನ ನೀಚ ಕೃತ್ಯ ಕೊನೆಗೂ ಬಹಿರಂಗವಾಗಿದೆ.
ಪೋಷಕರು ನೀಡಿದ ದೂರು ಆಧರಿಸಿ ಮೂರು ದಿನದ ಹಿಂದೆಯೇ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿ ಹೆಸರು ಉಲ್ಲೇಖಿಸದ ಕಾರಣ ಬಂಧಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ..
ಆರೋಪಿಯು ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂಬ ತೀವ್ರ ಆರೋಪವು ಸ್ಥಳೀಯರಿಂದ ಕೇಳಿಬಂದಿದ್ದು. ಅಲ್ಲದೇ ಆರೋಪಿಯ ಒತ್ತಡದಿಂದ ಮಾಹಿತಿಯನ್ನು ನೀಡಲು ವಿಳಂಬವಾಗಿದ್ದು ಈ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿ ಹೆಸರನ್ನು ಸಂತ್ರಸ್ತೆ ತಿಳಿಸಿದ ಹಿನ್ನೆಲೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿ ಶಶಾಂಕ್ ನನ್ನು ಬಂಧಿಸಿ, ಫೋಕ್ಸೋ ಪ್ರಕರಣ ದಾಖಲಿಸಿ ನ್ಯಾಯಾಂಗ ವಂಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.

Comments
Post a Comment