ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯದ 450 ಹಾಸಿಗೆ ಬೋಧಕ ಆಸ್ಪತ್ರೆಯ ಉದ್ಘಾಟನೆಗೆ ಮತ್ತು ಎಂ.ಆರ್.ಐ.ಮಷಿನ್ ಮಂಜೂರಿಗೆ ಆಗ್ರಹಿಸಿ ಮನವಿ.




ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯದ 450 ಹಾಸಿಗೆ ಬೋಧಕ ಆಸ್ಪತ್ರೆಯ ಉದ್ಘಾಟನೆಗೆ ಮತ್ತು ಎಂ.ಆರ್.ಐ.ಮಷಿನ್ ಮಂಜೂರಿಗೆ ಆಗ್ರಹಿಸಿ ಮನವಿ.


  ಕೊಪ್ಪಳ : 450 ಹಾಸಿಗೆಗಳ ನೂತನ ಬೋಧಕ ಆಸ್ಪತ್ರೆಯ ಕಟ್ಟಡ ಶೀಘ್ರದಲ್ಲೇ ಉದ್ಘಾಟಿಸಿ.ವೈದ್ಯಕೀಯ ಮಹಾವಿದ್ಯಾಲಯಕ್ಕೆ ಮತ್ತು ಜಿಲ್ಲಾ ಆಸ್ಪತ್ರೆಗೆ ತಲಾ ಒಂದು ಎಂಆರ್‌ಐ ಮಷಿನ್ ಗಳನ್ನು ಮಂಜೂರು ಮಾಡಲು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾಧಿಕಾರಿ ಸುರೇಶ್ ಬಿ ಇಟ್ನಾಳ ಮುಖಾಂತರ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್. ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ್, ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್. ಕೊಳಚೆ ನಿರ್ಮೂಲನಾ ವೇದಿಕೆಯ ಸಂಚಾಲಕ ಗಾಳೆಪ್ಪ ಮುಂಗೋಲಿ ಮುಂತಾದವರು ಮನವಿ ಸಲ್ಲಿಸಿದರು.

ಚಿನ್ನದ ಪದಕ ಪಡೆದ ವೈಟ್ ಲಿಫ್ಟರ್, ವಿಡಿಯೋ ನೋಡಲು ಇಲ್ಲಿ ಒತ್ತಿ,



     ಮನವಿಯಲ್ಲಿ ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ನೂತನ 450 ಹಾಸಿಗೆ ಬೋಧಕ ಆಸ್ಪತ್ರೆಯ  ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರೂ ಅನಗತ್ಯ ವಿಳಂಬ ಮಾಡದೆ ಶೀಘ್ರದಲ್ಲೇ ಉದ್ಘಾಟಿಸಿ ಸೇವೆಗೆ ಅವಕಾಶ ಮಾಡಿಕೊಡಬೇಕು.

ದರೋಡೆಕೋರ ಚಂದ್ರನ್‌ ವಿಡಿಯೋ ನೋಡಲು ಇಲ್ಲಿ ಒತ್ತಿ,

      ಕೊಪ್ಪಳ ನಗರದ ಜಿಲ್ಲಾ ಆಸ್ಪತ್ರೆಗೆ ಕಳೆದ ಅವಧಿಯಲ್ಲಿ ತಾವು ಮುಖ್ಯಮಂತ್ರಿ ಇದ್ದಾಗ ನಮ್ಮ ಸಂಘಟನೆಯಿಂದ ಸಲ್ಲಿಸಿದ ಮನವಿಗೆ ಸ್ಪಂದಿಸಿ ತಾವು ಸಿಟಿ ಸ್ಕ್ಯಾನ್, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರು ಮಾಡಿದ್ದು.ಈಗ ಅವುಗಳು ಈ ಭಾಗದ ಬಡ ಜನರಿಗೆ ಬಳಕೆಯಾಗುತ್ತಿದ್ದು ತಮಗೆ ಬಡ ರೋಗಿಗಳ ಪರವಾಗಿ ಕೃತಜ್ಞತೆಗಳು. ಅದೇ ರೀತಿ ಆಗ ಜಿಲ್ಲಾ ಆಸ್ಪತ್ರೆಗೆ ಎಂಆರ್‌ಐ ಮಷಿನ್ ಕೋರಿದಾಗ ತಮ್ಮ ಅವಧಿಯ ಕೊನೆಯ ಸಚಿವ ಸಂಪುಟದ ಸಭೆಯಲ್ಲಿ ಮಂಜೂರು ಮಾಡಿದ್ದೀರಿ, ಆದರೆ ಚುನಾವಣೆಯ ನಂತರ ಸರ್ಕಾರ ಬದಲಾಗಿದ್ದರಿಂದ ಪ್ರಕ್ರಿಯೆ ಸ್ಥಗಿತಗೊಂಡಿತ್ತು, ಕಳೆದ ಕೆಲವು ತಿಂಗಳುಗಳ ಹಿಂದೆ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಿಗೆ ತಲಾ ಒಂದು ಎಂಆರ್‌ಐ ಮಷಿನ್ ಗಳನ್ನು ಮಂಜೂರು ಮಾಡಿದ್ದು ಆದರೆ ಇನ್ನೂ ವರೆಗೂ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಎಂಆರ್‌ಐ ಮಷಿನ್ ಬಂದಿಲ್ಲ.ನಮ್ಮ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಹಾಗೂ ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಗೆ ಪ್ರತ್ಯೇಕ ತಲಾ ಒಂದು ಎಂಆರ್‌ಐ ಮಷಿನ್ ಗಳನ್ನು ಮಂಜೂರು ಮಾಡಬೇಕು. ಕಂಪ್ಯೂಟರ್ ರೇಡಿಯೋ ಗ್ರಾಫಿ ಎರಡು ಘಟಕಗಳು. ಡೈರೆಕ್ಟ್ ರೇಡಿಯೋ ಗ್ರಾಫಿ ಒಂದು ಘಟಕ. ರೇಡಿಯೋಲಜಿ ಡಿಪಾರ್ಟ್ಮೆಂಟ್ ಗೆ ಸದ್ಯ ಮೂರು ಜನ ಇದ್ದಾರೆ. ಈಗಿರುವ ಜನದಟ್ಟಣೆಗೆ ಸಾಕಾಗುವದಿಲ್ಲ ಹೀಗಾಗಿ ಸುಮಾರು ಹತ್ತು ಜನ ತಾಂತ್ರಿಕ ಸಿಬ್ಬಂದಿಗಳನ್ನು ಒದಗಿಸಬೇಕು.ಜಿಲ್ಲಾ ಆಸ್ಪತ್ರೆ ಹಾಗೂ ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಪ್ರತ್ಯೇಕ ಗೊಳ್ಳುವುದರಿಂದ ಜಿಲ್ಲಾ ಆಸ್ಪತ್ರೆಗೆ ಅಗತ್ಯ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಒದಗಿಸಬೇಕು,ಆಸ್ಪತ್ರೆಯ ಒಳ ಭಾಗದಲ್ಲಿ ಜಿರಲೆ.ಕೀಟ. ಹುಳುಗಳು ಹುಟ್ಟಿಕೊಂಡು ಚಿಕ್ಕ ಮಕ್ಕಳಿಗೆ ಮತ್ತು ಒಳ ರೋಗಿಗಳಿಗೆ ಭಯ ಹುಟ್ಟಿಸಿದೆ.ತಕ್ಷಣ ನಿರಂತರ ಸ್ವಚ್ಚತೆ ಕಾಪಾಡಲು ಕ್ರಮ ಕೈಗೊಳ್ಳಬೇಕೆಂದು ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್. ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ್. ಪಾಸ್ಟರ್ಸ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್.ಕೊಳಚೆ ನಿರ್ಮೂಲನಾ ವೇದಿಕೆಯ ಸಂಚಾಲಕ ಗಾಳೆಪ್ಪ ಮುಂಗೋಲಿ ಮುಂತಾದವರು ಆಗ್ರಹಿಸಿದರು.



ಜನಪರ ಸಂಘಟನೆಗಳ ಒಕ್ಕೂಟ.  ನಗರ ಪೊಲೀಸ್ ಠಾಣೆ ಎದುರಿಗೆ. ಹಟಗಾರ ಪೇಟೆ.ಹಸನ್ ರಸ್ತೆ. ಕೊಪ್ಪಳ : 583 231.

ಮೊ: 9900187612.

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?