Posts

Showing posts from July, 2025

AIFWA2025-2028 ರ ಸಾಲಿಗೆ ನೂತನ ಸಾರಥಿಗಳು,

Image
  AIFWA2025-2028 ರ ಸಾಲಿಗೆ ನೂತನ ಸಾರಥಿಗಳು, ಅಬೂಬಕ್ಕರ್ ಐಸಮ್ಮ ಫ್ಯಾಮಿಲಿ ವೆಲ್ಫೇರ್ ಅಸೋಸಿಯೇಸನ್) ಇದರ ಮಹಾಸಭೆಯು ದಿ:-13/07/2025 ರವಿವಾರ ಸಮಯ ಬೆಳಿಗ್ಗೆ 11:30ಕ್ಕೆ ಪೆರಿಂಜೆ ಗಾಣದಕೊಟ್ಟಿಗೆ ತರವಾಡ್ ಮನೆಯಲ್ಲಿ ಸಭೆಯ ಅದ್ಯಕ್ಷರಾದ ಕೆ ಮಹಮ್ಮದ್ ಕುಪ್ಪೆಟ್ಟಿ ಇವರ ಅದ್ಯಕ್ಷತೆಯಲ್ಲಿ ನಡೆಯಿತು ಮೊದಲಿಗೆ ಮೌಲೂದ್ ಪಾರಾಯಣ ಮಾಡಿ ನಂತರ ಬಹು! ಶರಫುದ್ದೀನ್ ತಂಘಳ್ ರವರ ದುಆ ದೊಂದಿಗೆ ಸಭೆಯನ್ನು ಉದ್ಘಾಟನೆ ಮಾಡಿದರು ಜ! ಖಾಲಿದ್ ಕಾಶಿಪಟ್ಣ ಎಲ್ಲರನ್ನು ಸ್ವಾಗತಿಸಿದರು ನಮ್ಮ ಫ್ಯಾಮಿಲಿಯ ಪರಿಚಯವನ್ನು ಅಬೂಬಕ್ಕರ್ ಸಿದ್ದೀಕ್(ಅಬ್ಬಾಸ್ ಅಂಬಿಯಾ ಆಲ್ದೂರು)ಇವರು ನೆರವೇರಿಸಿದರು ಹಾಗೂ ಮುಂದಿನ ನಮ್ಮ ಫ್ಯಾಮಿಲಿ ಭವಿಷ್ಯಕ್ಕಾಗಿ ಬೈಲಾವನ್ನು ಬಹಳ ಅಚ್ಚುಕಟ್ಟಾಗಿ ರಚಿಸಿ ಸಭೆಯಲ್ಲಿ ಮಂಡಿಸಿದರು ಬಹಳ ಚರ್ಚೆಯ ನಂತರ ಅದಕ್ಕೆ ಅನುಮೋದನೆಯನ್ನು ಪಡೆಯಲಾಯಿತು ಹಾಗೂ ಸೇರಿರುವ ಎಲ್ಲಾ ಸದಸ್ಯರ ಒಪ್ಪಿಗೆಯೊಂದಿಗೆ ಫ್ಯಾಮಿಲಿ ಗೆ AIFWA ಎಂಬ ಒಂದು ಒಳ್ಳೆಯ ಹೆಸರನ್ನು ನಾಮಕರಣ ಮಾಡಲಾಯಿತು ನಂತರ ಸಭಾಧ್ಯಕ್ಷರ ಸೂಚನೆಯ ಮೇರೆಗೆ ನಮ್ಮ ಫ್ಯಾಮಿಲಿಗೆ 9 ಕ್ಯಾಬಿನೆಟ್ ಹಾಗೂ 23ಕಾರ್ಯಕಾರಿ ಸಮಿತಿ ಸದಸ್ಯರ ಹೊಸ ಸಮಿತಿಯೊಂದನ್ನು ರಚಿಸಲಾಯಿತು ಹಾಗೂ ಸಂಘದ ಕಾರ್ಯಕ್ರಮಗಳು ಉತ್ತಮವಾಗಿ ನಡೆಯಲು ಕೆಲವು ಉಪ ಸಮಿತಿಗಳನ್ನು ರಚನೆ ಮಾಡುವುದೆಂದು ತೀರ್ಮಾನಿಸಲಾಯಿತು ಇನ್ನು ಮುಂದೆ ಸಂಘದ ಎಲ್ಲಾ ಕಾರ್ಯಕ್ರಮಗಳು ಮಹಾಸಭೆಯ ದಿನ ಅಂಗೀಕರಿಸಿದ ಬೈಲಾ(BY L...

ಕೊಪ್ಪ:- ನ್ಯಾಯಕ್ಕಾಗಿ ಕೊಪ್ಪ ದಲ್ಲಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ,

Image
 ಶಮಿತಾ ಸಾವಿನ ನ್ಯಾಯಕ್ಕಾಗಿ ಹೋರಾಟ,  ಕೊಪ್ಪ:- ನ್ಯಾಯಕ್ಕಾಗಿ ಕೊಪ್ಪ ದಲ್ಲಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ,  ರಾಜ್ಯದ ಗಮನ ಸೆಳೆದಿರುವ ಕೊಪ್ಪ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿನಿ ಶಮಿತಾ ಸಾವು ಪ್ರಕರಣ ಇದೀಗ ಹೋರಾಟದ ಹಾದಿ ಹಿಡಿದಿದೆ. ಸೋಮವಾರ ಕೊಪ್ಪದಲ್ಲಿ ಭಾರೀ ಹೋರಾಟ ನಡೆಯಲಿದೆ. ಜೂ.28ರಂದು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅನುಮಾನಸ್ಪದವಾಗಿ ಸಾವಿಗೀಡಾಗಿರುತ್ತಾಳೆ, ಈ ಬಗ್ಗೆ ಸೂಕ್ತ ತನಿಖೆಯನ್ನು ಕೈಗೊಳ್ಳಬೇಕು ಹಾಗೂ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರನ್ನು ತನಿಖೆಗೆ ಒಳಪಡಿಸಲು ಅಗ್ರಹಿಸಿ ಪ್ರಗತಿಪರ ಸಂಘಟನೆಗಳೊಂದಿಗೆ ದಿನಾಂಕ:07:07:2025ರಂದು ಬೆಳ್ಳಿಗೆ 10 ಗಂಟೆಯಿಂದ ಎರಡು ಗಂಟೆವರೆಗೆ ಟೌನ್ ಹಾಲಿನಿಂದ ಬಸ್ ನಿಲ್ದಾಣ ಹೊರಗೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.  ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಕೊಪ್ಪ ಪೊಲೀಸರು, ಶಮಿತಾ ಸಾವಿಗೆ ನ್ಯಾಯ ಬೇಕು. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಳಲ್ಲ. ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ವರದಿ:- ಮಜೀದ್ ಸಣ್ಣಕೆರೆ

ಕೊಪ್ಪಳ, ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ವಿರೋಧಿಸಿ ಮಸೀದಿಗಳ ಮುಂದೆ ಮೌನ ಪ್ರತಿಭಟನೆ.

Image
ಕೊಪ್ಪಳ,  ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ವಿರೋಧಿಸಿ ಮಸೀದಿಗಳ ಮುಂದೆ ಮೌನ ಪ್ರತಿಭಟನೆ. ಕೊಪ್ಪಳ : ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಕರೆ ಹಿನ್ನೆಲೆ ನಗರದಲ್ಲಿ ಶುಕ್ರವಾರದ ವಿಶೇಷ ಪ್ರಾರ್ಥನೆ ಬಳಿಕ ಮಸೀದಿಗಳ ಮುಂದೆ ಮಾನವ ಸರಪಳಿ ಮಾಡಿ ಮೌನ ಪ್ರತಿಭಟನೆ ವ್ಯಕ್ತಪಡಿಸಿದರು.     ಕುಷ್ಟಗಿ ರಸ್ತೆಯಲ್ಲಿರುವ ಖೂಬಾ ಮಸೀದಿಯ ಮುಂದೆ ಮಾನವ ಸರಪಳಿ ಮಾಡಿ ಮೌನ ಪ್ರತಿಭಟನೆ ಮಾಡಿದ ಬಳಿಕ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್ ಮಾತನಾಡಿ ಯಾರೂ ಬೇಡಿಕೆ ಇಡದೆ ಇದ್ದಂತಹ ವಕ್ಫ್ ಮಂಡಳಿಯ ನಿಯಮಗಳನ್ನು ಬದಲಾಯಿಸಲಾಗಿದೆ. ಸರ್ಕಾರ ಯಾರ ಪಿತೂರಿಗೆ ಈ ನಿಯಮಗಳು ಬದಲಾಯಿಸಿ ಇಸ್ಲಾಂ ಧರ್ಮಕ್ಕೆ ತದ್ವಿರುದ್ಧವಾಗಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದಲ್ಲದೆ. ಧರ್ಮ ನಿರಪೇಕ್ಷ.ಸಮಾಜವಾದಿ. ಜಾತ್ಯತೀತ ಎಂಬ ಪದವನ್ನು ಸಂವಿಧಾನದ ಪೀಠಿಕೆಯಿಂದ ತೆಗೆಯುವ ಹೇಳಿಕೆಗಳನ್ನು ನೋಡಿದರೆ ಸಂವಿಧಾನವನ್ನು ವಿರೋಪ ಗೊಳಿಸುವ ಪಿತೂರಿ ನಡೆಸಲಾಗುತ್ತಿದೆ. ಸವಿಧಾನವನ್ನು ನಿಷ್ಪ್ರಯೋಜಕ ಗೊಳಿಸುವ ಎಲ್ಲಾ ಕುತಂತ್ರಗಳು ನಡೆಯುತ್ತಿದೆ. ಸಂವಿಧಾನ ಉಳಿಸಿಕೊಳ್ಳುವ ಮತ್ತು ಹಳೆಯ ವಕ್ಫ್ ಮಂಡಳಿಯ ಕಾಯ್ದೆಗಳನ್ನು ಯಥಾ ಸ್ಥಿತಿಯಲ್ಲಿ ಮುಂದುವರಿಸಲು ಒತ್ತಾಯಸಿದರು.       ಖೂಬಾ ಮಸೀದಿಯ ಪೇಶ್ ಇಮಾಮ್ ಹಾಫಿಝ್ ಮೊಹಮ್ಮದ್ ಮುಜಾಹಿದ್ ಖಾಝಿ ರಝಾ. ಖೂಬಾ ಮಸೀದಿ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಬ್. ಉಪಾ...
Image
 ಕೊಪ್ಪ:-  ತಾಲೂಕಿನ ಹರಂದೂರು ಗ್ರಾಮದ ಸಣ್ಣಕೆರೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಗೆ ಹೊಸದಾಗಿ ದಾಖಲಾತಿಯಾದ ಮಕ್ಕಳಿಗೆ, ಬೆಂಗಳೂರಿನಲ್ಲಿ ವಾಸವಿರುವ ಗುರುರಾಜ್ ಎಂಬುವವರು  ತಲಾ ಮೂರು ಜೊತೆ ಸಮವಸ್ತ್ರ ಕೊಟ್ಟು ಮಾನವೀಯತೆ ಮೆರೆದಿದ್ದಾರೆ, ಫಾಝಿಲ್ ರಹ್ಮಮಾನ್,ಸಣ್ಣಕೆರೆ ಶಾಲೆಯ ವಿದ್ಯಾರ್ಥಿ,ವಿಡಿಯೋ ನೋಡಲು ಇಲ್ಲಿ ಒತ್ತಿ,  ಗುರುರಾಜ್ ರವರಿಗೆ ಸಣ್ಣಕೇರೆ ಶಾಲೆಯ   ಎಸ್ ಡಿ ಎಂ ಸಿ. ಅಧ್ಯಕ್ಷರು ಹಾಗು   ಸದ್ಯಸ್ಯರು ಶಾಲೆಯ ಶಿಕ್ಷಕರು ಗ್ರಾಮಸ್ಥರು. ಹಾಗೂ ಮಕ್ಕಳ ಪೋಷಕರು. ಅಭಿನಂದಿಸಿ ಧನ್ಯವಾದ ಸಲ್ಲಿಸಿದರು. ವರದಿ:- ಮಜೀದ್ ಸಣ್ಣಕೆರೆ