Posts

Showing posts from June, 2026

ನಾನು ಹೆದರುವುದಿಲ್ಲ, ಸತ್ಯವನ್ನೇ ಮಾತನಾಡುತ್ತೇನೆ.- ನಟ ಶಿವರಾಜ್ ಕುಮಾರ್

Image
  ನಾನು ಹೆದರುವುದಿಲ್ಲ, ಸತ್ಯವನ್ನೇ ಮಾತನಾಡುತ್ತೇನೆ.- ನಟ ಶಿವರಾಜ್ ಕುಮಾರ್ ನಾನು ಯಾವುದಕ್ಕೂ ಹೆದರುವುದಿಲ್ಲ, ಸತ್ಯವನ್ನೇ ಮಾತನಾಡುತ್ತೇನೆ.- ನಟ ಶಿವರಾಜ್ ಕುಮಾರ್ ಅವರು ಮಾಧ್ಯಮಗಳ ವರ್ತನೆ ಕುರಿತು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದಲ್ಲಿ ಯಾವುದೇ ವಿವಾದ ಅಥವಾ ಸಮಸ್ಯೆ ಉದ್ಭವಿಸಿದಾಗ ತಮ್ಮನ್ನೇ ಪ್ರಶ್ನಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿರುವ ಅವರು, ಎಲ್ಲ ವಿಷಯಗಳಿಗೂ ನನ್ನನ್ನೇ ಯಾಕೆ ಟಾರ್ಗೆಟ್ ಮಾಡ್ತೀರಾ ಎಂದು ಪ್ರಶ್ನಿಸಿದ್ದಾರೆ. ತೆಲುಗಿನ ಬಹು ನಿರೀಕ್ಷಿತ ''ಪೆದ್ದಿ'' ಚಿತ್ರದಲ್ಲಿ ನಟಿಸಿರುವ ಶಿವರಾಜ್‌ಕುಮಾರ್, ಚಿತ್ರದ ಪ್ರಚಾರದ ಅಂಗವಾಗಿ ನೀಡಿದ ಸಂದರ್ಶನವೊಂದರಲ್ಲಿ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ, ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಪ್ಯಾನ್ ಇಂಡಿಯಾ ಸಿನಿಮಾಗಳ ಯುಗದಲ್ಲಿ ಎಲ್ಲ ಭಾಷೆಗಳ ಚಿತ್ರಗಳನ್ನು ಗೌರವಿಸುವ ಮನೋಭಾವ ಅಗತ್ಯ ಎಂದು ಹೇಳಿದರು. ಇತ್ತೀಚಿನ ಕೆಲವು ವಿವಾದಗಳ ಕುರಿತಾಗಿಯೂ ಪರೋಕ್ಷವಾಗಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಯಾರೇನು ಬೇಕಾದರೂ ಪೋಸ್ಟ್ ಮಾಡಬಹುದು. ಅದು ಅವರ ಆಯ್ಕೆ. ಆದರೆ, ಚಿತ್ರರಂಗದ ಪ್ರಮುಖ ವಿಚಾರಗಳ ಬಗ್ಗೆ ಸಂಬಂಧಪಟ್ಟ ಸಂಸ್ಥೆಗಳೇ ಅಧಿಕೃತವಾಗಿ ಪ್ರತಿಕ್ರಿಯಿಸಬೇಕು ಎಂದು ಅಭಿಪ್ರಾಯಪಟ್ಟರು. ಪವನ್ ಕಲ್ಯಾಣ್ ಅವರು ಕನ್ನಡ...