Posts

Showing posts from May, 2026

ಆಲ್ ಇಂಡಿಯಾ ಪೊಲೀಸ್ ಗೇಮ್ಸ್‌ನಲ್ಲಿ ಕನ್ನಡಿಗನ ಸಾಧನೆ – ಫಾಝಿಲ್‌ರೆಹಮಾನ್ ಗೆ ಬೆಳ್ಳಿ ಪದಕ”ರಾಷ್ಟ್ರಮಟ್ಟದಲ್ಲಿ ಮಿಂಚಿದ ಮಲೆನಾಡ ವೇಟ್‌ಲಿಫ್ಟರ್‌

Image
ಆಲ್ ಇಂಡಿಯಾ ಪೊಲೀಸ್ ಗೇಮ್ಸ್‌ನಲ್ಲಿ ಕನ್ನಡಿಗನ ಸಾಧನೆ – ಫಾಝಿಲ್‌ರೆಹಮಾನ್ ಗೆ ಬೆಳ್ಳಿ ಪದಕ”ರಾಷ್ಟ್ರಮಟ್ಟದಲ್ಲಿ ಮಿಂಚಿದ ಮಲೆನಾಡ ವೇಟ್‌ಲಿಫ್ಟರ್‌ ಹರಿಯಾಣ ರಾಜ್ಯದ ಕರ್ನಾಲ್ ಜಿಲ್ಲೆಯ ಮಧುಬನ್‌ನಲ್ಲಿ ನಡೆದ 2026-27ನೇ ಸಾಲಿನ All India Police Games Weightlifting Competition ನಲ್ಲಿ ಕರ್ನಾಟಕದ  ಕ್ರೀಡಾಪಟು ಗಮನಾರ್ಹ ಸಾಧನೆ ಮಾಡಿ ರಾಜ್ಯದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಿದ್ದಾರೆ.  ಇನ್ನೂ 110 ಕೆಜಿ ವಿಭಾಗದಲ್ಲಿ ಕೊಪ್ಪ ಮೂಲದ ಫಾಝಿಲ್ ರೆಹಮಾನ್ ಸಣ್ಣಕೇರೆ ಯವರು, CISF ದೆಹಲಿ ತಂಡದ ಪರವಾಗಿ ಸ್ಪರ್ಧಿಸಿ ಬೆಳ್ಳಿ ಪದಕ ಗೆದ್ದು ಅದ್ಭುತ ಸಾಧನೆ ಮಾಡಿದ್ದಾರೆ. ರಾಷ್ಟ್ರಮಟ್ಟದ ಈ ಪ್ರತಿಷ್ಠಿತ ಪೊಲೀಸ್ ಕ್ರೀಡಾಕೂಟದಲ್ಲಿ ಕನ್ನಡಿಗ ಕ್ರೀಡಾಪಟುಗಳು ಪದಕ ಗೆದ್ದಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಇವರ ಸಾಧನೆ ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಮಟ್ಟದ ಸಾಧನೆ ಮಾಡಲು ಪ್ರೇರಣೆಯಾಗಲಿ ಎಂದು ಹಾರೈಸುವ ವಾರ್ತಾ ಸಾರಥಿ ಬಳಗ,,

ಆಲ್ ಇಂಡಿಯಾ ಪೊಲೀಸ್ ಗೇಮ್ಸ್‌ನಲ್ಲಿ ಕನ್ನಡಿಗರ ಸಾಧನೆ – ಫಾಝಿಲ್‌ಗೆ ಬೆಳ್ಳಿ, ಸುಚಿನ್‌ಗೆ ಕಂಚು”

Image
ಆಲ್ ಇಂಡಿಯಾ ಪೊಲೀಸ್ ಗೇಮ್ಸ್‌ನಲ್ಲಿ ಕನ್ನಡಿಗರ ಸಾಧನೆ – ಫಾಝಿಲ್‌ಗೆ ಬೆಳ್ಳಿ, ಸುಚಿನ್‌ಗೆ ಕಂಚು”ರಾಷ್ಟ್ರಮಟ್ಟದಲ್ಲಿ ಮಿಂಚಿದ ಕನ್ನಡಿಗ ವೇಟ್‌ಲಿಫ್ಟರ್‌ಗಳು ಹರಿಯಾಣ ರಾಜ್ಯದ ಕರ್ನಾಲ್ ಜಿಲ್ಲೆಯ ಮಧುಬನ್‌ನಲ್ಲಿ ನಡೆದ 2026-27ನೇ ಸಾಲಿನ All India Police Games Weightlifting Competition ನಲ್ಲಿ ಕರ್ನಾಟಕದ ಇಬ್ಬರು ಕನ್ನಡಿಗ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿ ರಾಜ್ಯದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಿದ್ದಾರೆ.  ಇನ್ನೂ 110 ಕೆಜಿ ವಿಭಾಗದಲ್ಲಿ ಕೊಪ್ಪ ಮೂಲದ ಫಾಝಿಲ್ ರೆಹಮಾನ್, CISF ದೆಹಲಿ ತಂಡದ ಪರವಾಗಿ ಸ್ಪರ್ಧಿಸಿ ಬೆಳ್ಳಿ ಪದಕ ಗೆದ್ದು ಅದ್ಭುತ ಸಾಧನೆ ಮಾಡಿದ್ದಾರೆ. 88 ಕೆಜಿ ವಿಭಾಗದಲ್ಲಿ ಸುಳ್ಯದ ಸುಚಿನ್ ಕುಮಾರ್, ಕರ್ನಾಟಕ ಪೊಲೀಸ್ ತಂಡವನ್ನು ಪ್ರತಿನಿಧಿಸಿ ಕಂಚಿನ ಪದಕ ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಷ್ಟ್ರಮಟ್ಟದ ಈ ಪ್ರತಿಷ್ಠಿತ ಪೊಲೀಸ್ ಕ್ರೀಡಾಕೂಟದಲ್ಲಿ ಕನ್ನಡಿಗ ಕ್ರೀಡಾಪಟುಗಳು ಪದಕ ಗೆದ್ದಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಇವರ ಸಾಧನೆ ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಮಟ್ಟದ ಸಾಧನೆ ಮಾಡಲು ಪ್ರೇರಣೆಯಾಗಲಿ ಎಂದು ಹಾರೈಸುವ ವಾರ್ತಾ ಸಾರಥಿ ಬಳಗ,,

ಕೊಪ್ಪ:- ಪ್ರತಿಭೆಗೆ ಪ್ರೋತ್ಸಾಹ: ಕೊಪ್ಪದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ, ವಿದ್ಯಾರ್ಥಿಗಳ ಸಾಧನೆಗೆ ಕೊಪ್ಪದಲ್ಲಿ ಭರ್ಜರಿ ಗೌರವ,

Image
  ಕೊಪ್ಪ:- ಪ್ರತಿಭೆಗೆ ಪ್ರೋತ್ಸಾಹ: ಕೊಪ್ಪದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ, ವಿದ್ಯಾರ್ಥಿಗಳ ಸಾಧನೆಗೆ ಕೊಪ್ಪದಲ್ಲಿ ಭರ್ಜರಿ ಗೌರವ,  ಮುಸ್ಲಿಂ ಸಂಯುಕ್ತ ಒಕ್ಕೂಟ ಕೊಪ್ಪ ಇವರ ವತಿಯಿಂದ ಪ್ರತಿಭಾ ಪುರಸ್ಕಾರ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದ ಕೊಪ್ಪ ಕಾರ್ಯಕ್ರಮ, ಕೊಪ್ಪ: ಕೊಪ್ಪ ತಾಲ್ಲೂಕು ಮುಸ್ಲಿಂ ಸಂಯುಕ್ತ ಒಕ್ಕೂಟದ ಆಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶುಕ್ರವಾರ ಕೊಪ್ಪ ಪುರಭವನದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕೊಪ್ಪ ತಾಲ್ಲೂಕಿನ ಜಮಾಅತ್‌ಗಳನ್ನು ಒಳಗೊಂಡಿರುವ ಈ ಒಕ್ಕೂಟದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಮಾಜದ ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಜಯಪುರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಷಾ ಗುಪ್ತಾ, ಇಂತಹ ಪ್ರೋತ್ಸಾಹಕಾರಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆಯಾಗುತ್ತವೆ. ವಿದ್ಯಾರ್ಥಿಗಳು ಮೊಬೈಲ್ ಹಾಗೂ ಇಂಟರ್ನೆಟ್‌ನಲ್ಲಿ ಸಮಯ ವ್ಯರ್ಥ ಮಾಡದೆ ಉತ್ತಮ ಭವಿಷ್ಯ ನಿರ್ಮಾಣದತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಯಪುರ ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರ...