ಆಲ್ ಇಂಡಿಯಾ ಪೊಲೀಸ್ ಗೇಮ್ಸ್‌ನಲ್ಲಿ ಕನ್ನಡಿಗರ ಸಾಧನೆ – ಫಾಝಿಲ್‌ಗೆ ಬೆಳ್ಳಿ, ಸುಚಿನ್‌ಗೆ ಕಂಚು”
ಆಲ್ ಇಂಡಿಯಾ ಪೊಲೀಸ್ ಗೇಮ್ಸ್‌ನಲ್ಲಿ ಕನ್ನಡಿಗರ ಸಾಧನೆ – ಫಾಝಿಲ್‌ಗೆ ಬೆಳ್ಳಿ, ಸುಚಿನ್‌ಗೆ ಕಂಚು”ರಾಷ್ಟ್ರಮಟ್ಟದಲ್ಲಿ ಮಿಂಚಿದ ಕನ್ನಡಿಗ ವೇಟ್‌ಲಿಫ್ಟರ್‌ಗಳು
ಹರಿಯಾಣ ರಾಜ್ಯದ ಕರ್ನಾಲ್ ಜಿಲ್ಲೆಯ ಮಧುಬನ್‌ನಲ್ಲಿ ನಡೆದ 2026-27ನೇ ಸಾಲಿನ All India Police Games Weightlifting Competition ನಲ್ಲಿ ಕರ್ನಾಟಕದ ಇಬ್ಬರು ಕನ್ನಡಿಗ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿ ರಾಜ್ಯದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಿದ್ದಾರೆ.
ಇನ್ನೂ 110 ಕೆಜಿ ವಿಭಾಗದಲ್ಲಿ ಕೊಪ್ಪ ಮೂಲದ ಫಾಝಿಲ್ ರೆಹಮಾನ್, CISF ದೆಹಲಿ ತಂಡದ ಪರವಾಗಿ ಸ್ಪರ್ಧಿಸಿ ಬೆಳ್ಳಿ ಪದಕ ಗೆದ್ದು ಅದ್ಭುತ ಸಾಧನೆ ಮಾಡಿದ್ದಾರೆ.
88 ಕೆಜಿ ವಿಭಾಗದಲ್ಲಿ ಸುಳ್ಯದ ಸುಚಿನ್ ಕುಮಾರ್, ಕರ್ನಾಟಕ ಪೊಲೀಸ್ ತಂಡವನ್ನು ಪ್ರತಿನಿಧಿಸಿ ಕಂಚಿನ ಪದಕ ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ರಾಷ್ಟ್ರಮಟ್ಟದ ಈ ಪ್ರತಿಷ್ಠಿತ ಪೊಲೀಸ್ ಕ್ರೀಡಾಕೂಟದಲ್ಲಿ ಕನ್ನಡಿಗ ಕ್ರೀಡಾಪಟುಗಳು ಪದಕ ಗೆದ್ದಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಇವರ ಸಾಧನೆ ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಮಟ್ಟದ ಸಾಧನೆ ಮಾಡಲು ಪ್ರೇರಣೆಯಾಗಲಿ ಎಂದು ಹಾರೈಸುವ ವಾರ್ತಾ ಸಾರಥಿ ಬಳಗ,,




Comments
Post a Comment