ಗಗನ ಕುಸುಮವಾಗಿ ದಾಖಲೆ ಬರೆದ ಟೊಮೆಟೊ ದರ :ಕೆಜಿಗೆ 150 ರೂ!

 


ವರದಿ: ವೇಣುಗೋಪಾಲ್,



*ಬೆಂಗಳೂರು* : *ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಕೃಷಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಪರಿಣಾಮ ಮಾರುಕಟ್ಟೆಯಲ್ಲಿ ಟೊಮೆಟೊ ದರ ಕೆಜಿಗೆ ಬರೋಬ್ಬರಿ 150 ರೂ ನಂತೆ ಮಾರಾಟವಾಗುವ ಮೂಲಕ ಇತಿಹಾಸ ಸೃಷ್ಟಿಸಿದೆ.*

ಭಾರೀ ಮಳೆಯ ಕಾರಣ ಹೊಲದಲ್ಲಿಯೇ ಟೊಮೋಟೊ ಸೇರಿ ವಿವಿಧ ಬೆಳೆ ಹಾಳಾಗಿದ್ದು, ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಟೊಮೇಟೊ ಪೂರೈಕೆಯಾಗುತ್ತಿದೆ. ಇದರ ಪರಿಣಾಮ ಟೊಮೆಟೊ ದರ ದಿಢೀರ್ ಏರಿಕೆ ಕಂಡಿದೆ. ಚಿಲ್ಲರೆ ಮಳಿಗೆಗಳಲ್ಲಿ ಒಂದು ಕೆಜಿಗೆ 150 ರೂ.ನಂತೆ ಮಾರಾಟವಾಗಿದೆ.
*ಕಳೆದ 15 -20 ದಿನಗಳಿಂದ ಟೊಮೆಟೊ ದರ ಏರುಗತಿಯಲ್ಲಿ ಸಾಗುತ್ತಿದೆ. ಚಿಲ್ಲರೆ ಮಳಿಗೆಗಳಲ್ಲಿ ಕೆಜಿಗೆ 100 ರೂ.ವರೆಗೂ ತಲುಪಿದ್ದ ದರ ನಂತರ 125 ರೂ.ಗೆ ಈಗ 150 ರೂ.ಗೆ ಏರಿಕೆಯಾಗಿದೆ. ದರ ಇಷ್ಟೊಂದು ಏರಿಕೆ ಆದರೂ ಕೂಡ ಟೊಮೆಟೊ ಬೆಳೆಗಾರರಿಗೆ ಈಗಲೂ ಜುಜುಬಿ ಹಣ ಸಿಗುತ್ತಿದೆ. ದಲ್ಲಾಳಿಗಳು ಮಾತ್ರ ಹಣ ಮಾಡುತ್ತಿದ್ದಾರೆ. ಇತ್ತ ಮಳೆಯಿಂದ ಬೆಳೆ ನಾಶಗೊಂಡು ರೈತರು ತತ್ತರಿಸಿದ್ದಾರೆ.*
ಟೊಮೆಟೊ ಮಾತ್ರವಲ್ಲ, ಬಹುತೇಕ ಎಲ್ಲ ತರಕಾರಿಗಳ ದರ ಕೂಡ ಏರಿಕೆಯಾಗಿದೆ. ತರಕಾರಿ ದರ 50 ರಿಂದ 80 ರೂ.ವರೆಗೆ ಇದ್ದು, *ಸೊಪ್ಪಿನ ದರ ಹೆಚ್ಚಳವಾಗಿದೆ. ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ತರಕಾರಿ ಬೆಲೆ ಭಾರಿ ಏರಿಕೆಯಾಗುತ್ತಿರುವುದು ಗ್ರಾಹಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಚೆನ್ನೈ, ಬೆಂಗಳೂರು ಸೇರಿದಂತೆ ಮಲೆನಾಡು, ಕರಾವಳಿ ಮತ್ತಿತರ ಭಾಗಗಳಲ್ಲಿ ಮಳೆಯಾಗುತ್ತಿದೆ. ಈ ಮಳೆಯಿಂದ ರೈತರು ತತ್ತರಿಸಿದ್ದು, ರಾಗಿ, ಭತ್ತ, ಅಡಕೆ, ಕಾಫಿ, ಮೆಣಸು, ಶೇಂಗಾ, ಮೆಕ್ಕೆಜೋಳ ಇತ್ಯಾದಿ ಆಹಾರ ಧಾನ್ಯಗಳ ಕೃಷಿ ಹಾಳಾಗಿದ್ದರೆ, ತರಕಾರಿ ಬೆಳೆ ಕೊಳೆಯುತ್ತಿದೆ. ಇದು ದರ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.


Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?