ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ,ಎನ್ ಕೆ ಶಾಫಿ ಸಅದಿ ಆಯ್ಕೆ,
ಬೆಂಗಳೂರು : ಕರ್ನಾಟಕ ರಾಜ್ಯ ವಕ್ಸ್ ಬೋರ್ಡ್ ಇದರ ನೂತನ ಅಧ್ಯಕ್ಷರಾಗಿ ಎನ್.ಕೆ.ಎಮ್.ಶಾಫಿ ಸಅದಿ ಆಯ್ಕೆಯಾಗಿದ್ದಾರೆ . ವಕ್ಸ್ ಬೋರ್ಡ್ ಅಧ್ಯಕ್ಷರಾಗಿದ್ದ ಡಾ.ಮುಹಮ್ಮದ್ ಯುಸುಫ್ ರವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಬೆಂಗಳೂರು ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ವಕ್ಸ್ ಬೋರ್ಡ್ ಕಛೇರಿಯಲ್ಲಿ ಚುನಾವಣೆ ನಡೆದಿತ್ತು . ಕರ್ನಾಟಕ ಪ್ರದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಚುನಾವಣೆಯ ಉಸ್ತುವಾರಿ ವಹಿಸಿದ್ದರು . ಇಂದು ಬೆಳಿಗ್ಗೆ 10 : 30 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು.ಶಾಫಿ ಸಅದಿ ಹಾಗೂ ಮುಹಮ್ಮದ್ ಸಲೀಂ ನಾಮಪತ್ರ ಸಲ್ಲಿಸಿದ್ದರು . ಶಾಫಿ ಸಅದಿಯವರು ಒಟ್ಟು ಹತ್ತು ಮತಗಳಲ್ಲಿ ಆರು ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರೆ , ಮುಹಮ್ಮದ್ ಸಲೀಂ ನಾಲ್ಕು ಮತಗಳನ್ನು ಪಡೆಯುವ ಮೂಲಕ ಸೋಲನುಭವಿಸಿದರು .
ಸಅದಿಯವರು ಕರ್ನಾಟಕ ರಾಜ್ಯ ಸರಕಾರದಿಂದ ಕಳೆದ ಎರಡು ಅವಧಿಗೆ ಆಲೀಂ ಕೋಟಾದಲ್ಲಿ ರಾಜ್ಯ ವಕ್ಸ್ ಬೋರ್ಡ್ ಸದಸ್ಯರಾಗಿ ನಾಮ ನಿರ್ದೇಶನಗೊಂಡಿದ್ದರು . ಸದ್ಯ ಕರ್ನಾಟಕ ಮುಸ್ಲಿಮ್ ಜಮಾಅತ್ ಇದರ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ . ವಕ್ಸ್ ಬೋರ್ಡ್ ಗೆ ಮೊದಲ ಉಲಮಾ ಅಧ್ಯಕ್ಷ : ಉಲಮಾ ( ಮೌಲಾನ ) ಒಬ್ಬರು ಕರ್ನಾಟಕ ರಾಜ್ಯ ವಕ್ಸ್ ಬೋರ್ಡ್ ಅಧ್ಯಕ್ಷರಾಗಿ ಇದೇ ಮೊದಲ ಬಾರಿಗೆ ಆಯ್ಕೆಯಾಗಿದ್ದು , ಕರಾವಳಿಗೂ ಇದು ಮೊದಲ ಆಯ್ಕೆಯಾಗಿದೆ . *ಶಾಫಿ ಸಅದಿ ಆಯ್ಕೆಗೆ ಹರ್ಷ ವ್ಯಕ್ತಪಡಿಸಿದ ಇಂಡಿಯನ್ ಗ್ರ್ಯಾಂಡ್ ಮುಫ್ತಿ*, ಇಂಡಿಯನ್ ಗ್ಯ್ರಾಂಡ್ ಮುಫ್ತಿ ಖಮರುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರು ತಮ್ಮ ತುರ್ತು ಸಂದೇಶದಲ್ಲಿ ಶಾಫಿ ಸಅದಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ .
Comments
Post a Comment