ರಾಜ್ಯದಲ್ಲಿ ಲಾಕ್‍ಡೌನ್ ಇಲ್ಲ, ಸುಳ್ಳುಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ, ಸಚಿವ ಸುಧಾಕರ್
ಬೆಂಗಳೂರು: ದಕ್ಷಿಣ ಆಫ್ರಿಕಾ ಸೇರಿದಂತೆ ಮತ್ತಿತರ ರಾಷ್ಟ್ರಗಳಲ್ಲಿ ಓಮಿಕ್ರಾನ್ ಹೊಸ ತಳಿಯ ಸೋಂಕು ಕಾಣಸಿಕೊಂಡಿರುವುದರಿಂದ ರಾಜ್ಯದಲ್ಲಿ ಪುನಃ ಲಾಕ್‍ಡೌನ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಒಂದು ವೇಳೆ ಸುಳ್ಳು ಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಒಂದು ಮತ್ತು ಎರಡನೇ ಅಲೆಯಿಂದಾಗಿ ಅನಾರೋಗ್ಯ ಸಮಸ್ಯೆ, ಲಾಕ್ ಡೌನ್ ನಿಂದ ಆರ್ಥಿಕವಾಗಿ ಈಗಾಗಲೇ ಜನರು ಬಹಳಷ್ಟು ನೊಂದಿದ್ದಾರೆ. ಬಹಳ ನಷ್ಟ ಅನುಭವಿಸಿದ್ದಾರೆ. ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ, ಹೀಗಾಗಿ ಮತ್ತೆ ಮತ್ತೆ ಆತಂಕ, ಸಮಸ್ಯೆ ಸೃಷ್ಟಿ ಮಾಡುವ ಕೆಲಸ ಮಾಡುವುದಿಲ್ಲ, ರಾಜ್ಯದಲ್ಲಿ ಲಾಕ್ ಡೌನ್ ಹೇರುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದರು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ ಹಬ್ಬುತ್ತಿದೆ. ಹೀಗೆ ಲಾಕ್ ಡೌನ್ ನ ಸುಳ್ಳು ಸುದ್ದಿ ಹಬ್ಬಿಸಿ ಜನರಲ್ಲಿ ಭಯ, ಆತಂಕ ಸೃಷ್ಟಿಸುವುದು ಬೇಡ, ಗೊಂದಲಮಯ ಸುದ್ದಿ ಹಾಕುವುದು ಬೇಡ ಎಂದರು.
ಡೆಲ್ಟಾಕ್ಕೆ ಹೋಲಿಸಿದರೆ ಇದರ ಪರಿಣಾಮ ಯಾವ ರೀತಿ ಹಬ್ಬುತ್ತದೆ ಎಂಬುದರ ಬಗ್ಗೆ ಈವರೆಗೂ ದೃಢಪಟ್ಟಿಲ್ಲ. ವಿಜ್ಞಾನಿಗಳು ಈ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ನನಗಿರುವ ಮಾಹಿತಿಯಂತೆ ಡೆಲ್ಟಾಕ್ಕೆ ಹೋಲಿಸಿದರೆ ಓಮಿಕ್ರಾನ್ ವೇಗವಾಗಿ ಹಬ್ಬಿದರೂ ಅಷ್ಟು ಪರಿಣಾಮ ಇರುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಹೊಸ ತಳಿ ರೋಗ ಲಕ್ಷಣಗಳು ವಾಂತಿ ಬರೋವ ಹಾಗೆ, ಪಲ್ಸ್ ರೇಟ್ ಜಾಸ್ತಿ, ಸುತ್ತು ಆಗೋದು, ಆಯಾಸ ಆಗೋದು, ಡೆಲ್ಟಾ ರೀತಿ ಟೇಸ್ಟ್, ವಾಸನೆ ಇಲ್ಲದೆ ಇರುವುದು ಇಂತಹ ಲಕ್ಷಣ ಇದರಲ್ಲಿ ಇರುವುದಿಲ್ಲ. ಆದರೂ ನಾವೆಲ್ಲ ಎಚ್ಚರಿಕೆಯಿಂದ ಇರುವಂತೆ ಸಲಹೆ ಮಾಡುತ್ತೇನೆ ಎಂದರು.
ಕಳೆದ 9 ತಿಂಗಳಿನಿಂದ ಡೆಲ್ಟಾ ವೈರಸ್ ಇದೆ. ಆದರೆ ಅವರಿಗೆ ಕಾಣಿಸಿಕೊಂಡಿರುವುದು ಡೆಲ್ಟಾ ಅಲ್ಲ. ಓಮಿಕ್ರಾನ್ ಇರಬಹುದು ಎಂಬುದಾಗಿ ಅನುಮಾನ. ಈಗ ಅಕೃತವಾಗಿ ಅದನ್ನು ವ್ಯಕ್ತಪಡಿಸೋಕೆ ಆಗಲ್ಲ. ಕೇಂದ್ರ ಆರೋಗ್ಯ ಇಲಾಖೆ ಜೊತೆಗೆ ಸಂಪರ್ಕದಲ್ಲಿ ಇದ್ದೇನೆ ಎಂದು ಮಾಹಿತಿ ನೀಡಿದರು.
Comments
Post a Comment