ಕೊಪ್ಪ :ಪಟ್ಟಣದ ಹೊರವಲಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಣ್ಣಕೆರೆಯ ಮಕ್ಕಳು ಇಂಗ್ಲಿಷ್ ಫೆಸ್ಟ್ ನಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ. ಪಿಎಂಶ್ರೀ ಕೆಪಿಎಸ್ ಶಾಲೆ ಕೊಪ್ಪ ಪಟ್ಟಣದಲ್ಲಿ ನಡೆದ ಮೂರು ಕ್ಲಸ್ಟರ್ ಗಳ ನಡುವಿನ ಇಂಗ್ಲಿಷ್ ಫೆಸ್ಟ್ ನ 1 ರಿಂದ 5 ನೇ ತರಗತಿಯ ಸ್ಪರ್ಧೆಗಳಲ್ಲಿ ಸಣ್ಣಕೆರೆ ಶಾಲೆಯ ವಿದ್ಯಾರ್ಥಿಗಳಾದ ಶೌರ್ಯ ಯು ರೀಡಿಂಗ್ ಪ್ರಥಮ, ಸೈಯದ್ ಆರಿಜ್ ಅರ್ಹಂ ರೈಟಿಂಗ್ ಸ್ಪರ್ಧೆಯಲ್ಲಿ ದ್ವಿತೀಯ, ತನಯ್ ಗೌಡ ಸ್ಟೋರಿ ಟೆಲ್ಲಿಂಗ್ ತೃತೀಯ, ಅಕ್ಷರ ಎಸ್ ಶೆಟ್ಟಿ ಪಿಕ್ ಅಂಡ್ ಸ್ಪೀಚ್ ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ. ಕನ್ನಡ ಮಾಧ್ಯಮದ ಮಕ್ಕಳು ಇಂಗ್ಲಿಷ್ ಭಾಷೆಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುವುದಕ್ಕೆ ಶಾಲಾ ಎಸ್.ಡಿ.ಎಂ.ಸಿ ಮತ್ತು ಊರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಎಸ್. ಡಿ. ಎಂ. ಸಿ ಮತ್ತು ದಾನಿಗಳ ಸಹಕಾರದಿಂದ ಪೂರ್ವ ಪ್ರಾಥಮಿಕ ಎಲ್. ಕೆ. ಜಿ, ಯು.ಕೆ. ಜಿ ತರಗತಿಗಳನ್ನು ಶಾಲೆಯಲ್ಲಿ ಆರಂಭಿಸುತ್ತಿದ್ದು, ಈ ಇಂಗ್ಲಿಷ್ ಸ್ಪರ್ಧೆಗಳಲ್ಲಿ ಈ ಬಾರಿ ಅತಿ ಹೆಚ್ಚು ಮಕ್ಕಳು ಬಹುಮಾನವನ್ನು ಪಡೆದಿರುವುದು ಹೊಸ ಪೋಷಕರಿಗೆ ಪ್ರೇರಣೆಯಾಗಲಿದೆ ಎಂದು ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ಬಿ. ವಿಜಯ್ ಶುಭ ಹಾರೈಸಿದರು.ಶಾಲಾ ಮುಖ್ಯ ಶಿಕ್ಷಕಿ ಭಾರತಿ ಎ, ಸಹಶಿಕ್ಷಕಿ ಆಶಾಲತಾ ಬಿ, ಅತಿಥಿ ಶಿಕ್ಷಕರಾದ ಸುಮ ಮಕ್ಕಳಿಗೆ ಅಭಿನಂದನೆ ತಿಳಿಸಿದ್...
Popular posts from this blog
ಕೊಪ್ಪ:- ಪ್ರತಿಭೆಗೆ ಪ್ರೋತ್ಸಾಹ: ಕೊಪ್ಪದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ, ವಿದ್ಯಾರ್ಥಿಗಳ ಸಾಧನೆಗೆ ಕೊಪ್ಪದಲ್ಲಿ ಭರ್ಜರಿ ಗೌರವ,
ಕೊಪ್ಪ:- ಪ್ರತಿಭೆಗೆ ಪ್ರೋತ್ಸಾಹ: ಕೊಪ್ಪದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ, ವಿದ್ಯಾರ್ಥಿಗಳ ಸಾಧನೆಗೆ ಕೊಪ್ಪದಲ್ಲಿ ಭರ್ಜರಿ ಗೌರವ, ಮುಸ್ಲಿಂ ಸಂಯುಕ್ತ ಒಕ್ಕೂಟ ಕೊಪ್ಪ ಇವರ ವತಿಯಿಂದ ಪ್ರತಿಭಾ ಪುರಸ್ಕಾರ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದ ಕೊಪ್ಪ ಕಾರ್ಯಕ್ರಮ, ಕೊಪ್ಪ: ಕೊಪ್ಪ ತಾಲ್ಲೂಕು ಮುಸ್ಲಿಂ ಸಂಯುಕ್ತ ಒಕ್ಕೂಟದ ಆಶ್ರಯದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶುಕ್ರವಾರ ಕೊಪ್ಪ ಪುರಭವನದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕೊಪ್ಪ ತಾಲ್ಲೂಕಿನ ಜಮಾಅತ್ಗಳನ್ನು ಒಳಗೊಂಡಿರುವ ಈ ಒಕ್ಕೂಟದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಮಾಜದ ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಜಯಪುರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಷಾ ಗುಪ್ತಾ, ಇಂತಹ ಪ್ರೋತ್ಸಾಹಕಾರಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆಯಾಗುತ್ತವೆ. ವಿದ್ಯಾರ್ಥಿಗಳು ಮೊಬೈಲ್ ಹಾಗೂ ಇಂಟರ್ನೆಟ್ನಲ್ಲಿ ಸಮಯ ವ್ಯರ್ಥ ಮಾಡದೆ ಉತ್ತಮ ಭವಿಷ್ಯ ನಿರ್ಮಾಣದತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಯಪುರ ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರ...
ಕೊಪ್ಪ:- ತಾಲೂಕಿನ ಹರಂದೂರು ಗ್ರಾಮದ ಸಣ್ಣಕೆರೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಗೆ ಹೊಸದಾಗಿ ದಾಖಲಾತಿಯಾದ ಮಕ್ಕಳಿಗೆ, ಬೆಂಗಳೂರಿನಲ್ಲಿ ವಾಸವಿರುವ ಗುರುರಾಜ್ ಎಂಬುವವರು ತಲಾ ಮೂರು ಜೊತೆ ಸಮವಸ್ತ್ರ ಕೊಟ್ಟು ಮಾನವೀಯತೆ ಮೆರೆದಿದ್ದಾರೆ, ಫಾಝಿಲ್ ರಹ್ಮಮಾನ್,ಸಣ್ಣಕೆರೆ ಶಾಲೆಯ ವಿದ್ಯಾರ್ಥಿ,ವಿಡಿಯೋ ನೋಡಲು ಇಲ್ಲಿ ಒತ್ತಿ, ಗುರುರಾಜ್ ರವರಿಗೆ ಸಣ್ಣಕೇರೆ ಶಾಲೆಯ ಎಸ್ ಡಿ ಎಂ ಸಿ. ಅಧ್ಯಕ್ಷರು ಹಾಗು ಸದ್ಯಸ್ಯರು ಶಾಲೆಯ ಶಿಕ್ಷಕರು ಗ್ರಾಮಸ್ಥರು. ಹಾಗೂ ಮಕ್ಕಳ ಪೋಷಕರು. ಅಭಿನಂದಿಸಿ ಧನ್ಯವಾದ ಸಲ್ಲಿಸಿದರು. ವರದಿ:- ಮಜೀದ್ ಸಣ್ಣಕೆರೆ
Comments
Post a Comment