ಪತ್ರಕರ್ತ ಹರೀಶ್ ಸಹಿತ, ಶನಿವಾರ ಸಂತೆ ಪಾಕಿಸ್ತಾನ್ ಝಿಂದಾಬಾದ್ ಪ್ರಕರಣ : ಪತ್ರಕರ್ತ ಹರೀಶ್ ಸಹಿತ ಮೂವರ ಮೇಲೆ ಎಫ್ ಐ ಆರ್
ಮಡಿಕೇರಿ:-
ಶನಿವಾರ ಸಂತೆಯಲ್ಲಿ ಮುಸ್ಲಿಂ ಮಹಿಳೆಯರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅಂಬೇಡ್ಕರ್ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದ ವಿಡಿಯೋ ತಿರುಚಿ ಪಾಕಿಸ್ತಾನ್ ಝಿಂದಾಬಾದ್ ಹೇಳಿದ್ದಾರೆಂದು ವದಂತಿ ಹಬ್ಬಿಸಿದ ಆರೋಪದಲ್ಲಿ ಮೂವರ ಮೇಲೆ ಎಫ್ ಐ ಆರ್ ದಾಖಲಾಗಿದೆ . ರಘು ಎಸ್ ಎನ್ , ಹರೀಶ್ ಹಾಗು ಗಿರೀಶ್ ಆರೋಪಿಗಳು . ಈ ಪೈಕಿ ಹರೀಶ್ ಕನ್ನಡ ಪ್ರಭ ಪತ್ರಿಕೆಯ ಸ್ಥಳೀಯ ವರದಿಗಾರನಾಗಿದ್ದು , ಸೋಮವಾರಪೇಟೆ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದಾರೆ . ಶನಿವಾರ ಸಂತೆ ಗ್ರಾಮ ಪಂಚಾಯತ್ ಸದಸ್ಯ ರಘು , ಮಾಜಿ ಸದಸ್ಯ ಹಾಗು ಪತ್ರಕರ್ತ ಹರೀಶ್ ಹಾಗು ಕುಶಾಲ್ ನಗರದ ಗಿರೀಶ್ ಕೋಮು ಸೌಹಾರ್ದ ಕದಡುವ ದುರುದ್ದೇಶದಿಂದ ತಿರುಚಿದ ವಿಡಿಯೋ ವಾಟ್ಸ್ ಆಪ್ ನಲ್ಲಿ ಹರಡಿ ಪ್ರತಿಭಟನೆಯ ಸಂದರ್ಭ ಮುಸ್ಲಿಂ ಮಹಿಳೆಯರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ , ಹಿಂದೂ ಸಂಘಟನೆ ಮೇಲೆ ದಬ್ಬಾಳಿಕೆ ನಡೆಸುತ್ತಲೇ ಬಂದಿದ್ದಾರೆ . ಹಾಗಾಗಿ ನ .15 ರಂದು ಶನಿವಾರ ಸಂತೆ ಬಂದ್ ಮಾಡುವಂತೆ ಕರೆ ನೀಡಿದ್ದರು ಎಂದು ಎಫ್ ಐ ಆರ್ ನಲ್ಲಿ ಹೇಳಲಾಗಿದೆ . ಪ್ರತಿಭಟನೆಯ ವೇಳೆ ಮುಸ್ಲಿಂ ಮಹಿಳೆಯರು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದೂ ಎಫ್ ಐ ಆರ್ ನಲ್ಲಿ ದಾಖಲಾಗಿದೆ .
ಇದೀಗ ಮೂವರು ಆರೋಪಿಗಳ ವಿರುದ್ಧ ಐಪಿಸಿ 34 , 153 ಅಡಿಯಲ್ಲಿ ಶನಿವಾರ ಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
Comments
Post a Comment