'ಲಾಲ್ ಸಲಾಮ್' ಮೂಲಕ ಲೇಖಕಿಯಾದ ಕೇಂದ್ರ ಸಚಿವೆ ಸ್ಮೃತಿ ಇರಾನಿ,
🖋ವರದಿ:-ವೀರಮಣಿ
'ಲಾಲ್ ಸಲಾಮ್' ಮೂಲಕ ಲೇಖಕಿಯಾದ ಕೇಂದ್ರ ಸಚಿವೆ ಸ್ಮೃತಿ ಇರಾನಿ
ಕೇಂದ್ರ ಸಚಿವೆ ಸ್ಮೃತಿ ಜುಬಿನ್ ಇರಾನಿ ಅವರು 'ಲಾಲ್ ಸಲಾಮ್' ಕಾದಂಬರಿಯ ಮೂಲಕ ಲೇಖಕರಾಗಿ ಹೊಸ ಹೆಜ್ಜೆ ಇಡುತ್ತಿದ್ದಾರೆ. ಸ್ಮೃತಿ ಅವರ ಮೊದಲ ಕಾದಂಬರಿ ಹೊರ ಬರುತ್ತಿರುವ ಕುರಿತು ವೆಸ್ಟ್‌ಲೆಂಡ್ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ.
2010ರ ಏಪ್ರಿಲ್‌ನಲ್ಲಿ ದಾಂತೇವಾಡಾದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ 76 ಮಂದಿ ಸಿಆರ್‌ಪಿಎಫ್ ಸಿಬ್ಬಂದಿ ಸಾವಿಗೀಡಾಗಿದ್ದರು. ಆ ಘಟನೆಯನ್ನು ಆಧರಿಸಿ ಸ್ಮೃತಿ ಅವರು ಕಾದಂಬರಿ ಹೆಣೆದಿದ್ದಾರೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ಸವಾಲುಗಳನ್ನು ಎದುರಿಸಿ, ದೇಶಕ್ಕಾಗಿ ಜೀವನ ಮುಡುಪಾಗಿಟ್ಟು ಸೇವೆ ಸಲ್ಲಿಸಿರುವ ಅಸಾಧಾರಣ ಪುರಷರು ಹಾಗೂ ಮಹಿಳೆಯರಿಗೆ ಈ ಕೃತಿಯ ಮೂಲಕ ಗೌರವ ಸಲ್ಲಿಸಲಾಗುತ್ತಿದೆ. ನವೆಂಬರ್ 29ರಂದು ಕಾದಂಬರಿಯು ಬಿಡುಗಡೆಯಾಗಲಿದೆ.
ರಾಜಕೀಯ ಮತ್ತು ಭ್ರಷ್ಟಾಚಾರದ ಹಿನ್ನೆಲೆಯ ವ್ಯವಸ್ಥೆಯ ವಿರುದ್ಧ ವಿಕ್ರಮ್ ಪ್ರತಾಪ್ ಸಿಂಗ್ ಹೆಸರಿನ ಯುವ ಅಧಿಕಾರಿಯು ಎದುರಿಸುವ ಸವಾಲುಗಳನ್ನು 'ಲಾಲ್ ಸಲಾಮ್' ಕಥೆ ಒಳಗೊಂಡಿದೆ.
Comments
Post a Comment