ಐ ಸಿ ಐ ಸಿ ಐ,ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ನ್ನು ಕೊಚ್ಚಿ ಕೊಲೆಗೈದ ದರೋಡೆಕೋರರು!
ಬಳ್ಳಾರಿ: ಎಟಿಎಂ ದೋಚಲು ಬಂದಿದ್ದ ದುಷ್ಕರ್ಮಿಗಳು ಬ್ಯಾಂಕ್ ಸೆಕ್ಯೂರಿಟಿ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಐಸಿಐಸಿಐ ಬ್ಯಾಂಕ್ ಎಟಿಎಂ ಬಳಿಯಲ್ಲಿ ನಡೆದಿದ್ದು, ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.
ರಾತ್ರಿ ವೇಳೆ ಸೆಕ್ಯೂರಿಟಿ ಗಾರ್ಡ್ ಮಲಗಿದ್ದು, ಈ ವೇಳೆ ಬ್ಯಾಂಕ್ ದರೋಡೆಗೆ ಆಗಮಿಸಿದ್ದ ದುಷ್ಕರ್ಮಿಗಳು ಮಲಗಿದ್ದ ಸೆಕ್ಯೂರಿಟಿ ಗಾರ್ಡ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಬಸವರಾಜ ಎಂಬವರು ಹತ್ಯೆಗೀಡಾದ ಸೆಕ್ಯೂರಿಟಿ ಗಾರ್ಡ್ ಆಗಿದ್ದು, ಎಟಿಎಂ ಹಾಗೂ ಐಸಿಐಸಿಐ ಬ್ಯಾಂಕ್ ಅಕ್ಕಪಕ್ಕದಲ್ಲೇ ಇದ್ದು, ದರೋಡೆಗೆ ಯತ್ನಿಸಿ ಸೆಕ್ಯೂರಿಟಿ ಗಾರ್ಡ್ ನ್ನು ಹತ್ಯೆ ಮಾಡಿದರೋ ಅಥವಾ ವೈಯಕ್ತಿಕ ವಿಚಾರಕ್ಕೆ ಹತ್ಯೆ ನಡೆದಿದೆಯೇ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.
ಹತ್ಯೆಗೀಡಾಗಿರುವ ಬಸವರಾಜ್ ಕಳೆದ 10 ತಿಂಗಳಿನಿಂದ ಈ ಬ್ಯಾಂಕ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ ಅಡಾವತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Comments
Post a Comment