11,ಜೋಡಿ ಅವಳಿ ವಿದ್ಯಾರ್ಥಿಗಳು,ಶಾಲೆ ಕೈರಂಗಳ,
ಮಂಗಳೂರು: ಹೊರವಲಯದಲ್ಲಿರುವ ಕೈರಂಗಳದಲ್ಲಿರುವ ಪುಣ್ಯಕೋಟಿ ನಗರದಲ್ಲಿನ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ 11 ಜೋಡಿ ಅವಳಿ ಮಕ್ಕಳಿದ್ದು, ಗಮನ ಸೆಳೆಯುತ್ತಿದ್ದಾರೆ.
4ನೇ ತರಗತಿಯಲ್ಲಿ 3 ಜೋಡಿ, 5ನೇ ತರಗತಿಯಲ್ಲಿ 2 ಹಾಗೂ 6,7,8 ಮತ್ತು 10 ನೇ ತರಗತಿಯಲ್ಲಿ ತಲಾ 1 ಹಾಗೂ ಪಿಯುಸಿಯಲ್ಲಿ 2 ಜೋಡಿ ಅವಳಿಗಳಿದ್ದಾರೆ ಎನ್ನಲಾಗಿದೆ.
ಶಾಲೆಯ 4ನೇ ತರಗತಿಯಲ್ಲಿ ಜ್ಞಾನೇಶ್- ಜಯೇಶ್, ಸಂಜನ- ಸಂಜಯ, ಲತೇಶ್- ಲವೇಶ್, 5ನೇ ತರಗತಿಯಲ್ಲಿ ಧನ್ಯಶ್ರೀ- ಧನುಷ್, ಚೈತ್ರ- ಚಂದನ, 6ನೇ ತರಗತಿಯಲ್ಲಿ ಭವ್ಯಶ್ರೀ- ದಿವ್ಯಶ್ರೀ, 7ನೇ ತರಗತಿಯಲ್ಲಿ ಕೀರ್ತಿ- ಕೀರ್ತನಾ, 8ನೇ ತರಗತಿಯಲ್ಲಿ ಸುಜನ- ಸುಹನ, 10ನೇ ತರಗತಿಯಲ್ಲಿ ಶ್ರೀನಾಥ್- ಸುಶಾಂತ್, ದ್ವಿತೀಯ ಪಿಯುಸಿಯಲ್ಲಿ ಪ್ರೇಕ್ಷ - ಪ್ರಜ್ಞ, ಮೋಕ್ಷ- ಮೋಕ್ಷಿತ ಎಂಬ ವಿದ್ಯಾರ್ಥಿ ಅವಳಿಗಳಿದ್ದಾರೆ. ಸದ್ಯ ಈ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆಯುತ್ತಿದ್ದಾರೆ.
Comments
Post a Comment