ಬಸ್ ನಲ್ಲಿದ್ದ ಸಹಪಾಠಿ ವಿದ್ಯಾರ್ಥಿಗಳ ಮೇಲೆ ಗೂಂಡಾಗಿರಿ, ಇಬ್ಬರ ಬಂಧನ,,
ಮಂಗಳೂರು (11-12-2021): ಉಡುಪಿ ಬಸ್ ನಲ್ಲಿ ಸಂಘಪರಿವಾರದ ಕಾರ್ಯಕರ್ತರಿಂದ ಸಹಪಾಠಿ ವಿದ್ಯಾರ್ಥಿಗಳ ಮೆಲೆ ಗೂಂಡಾಗಿರಿ ಕೇಸ್ ಗೆ ಸಂಬಂಧಿಸಿ ಇಬ್ಬರ ಮೆಲೆ ಸುಮೋಟೋ ಕೇಸ್ ದಾಖಲಾಗಿದೆ.
ಪಾಂಡೇಶ್ವರ ಠಾಣೆಯಲ್ಲಿ ಇಬ್ಬರ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಸನ್ 153 ಎ ಮತ್ತು 354 ಅಡಿ ಕೇಸ್ ದಾಖಲಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತರ ಕುಟುಂಬಸ್ಥರನ್ನು ಭೇಟಿ ಮಾಡಲಾಗಿದೆ. ಘಟನೆಯಲ್ಲಿ ಬಸ್ ಸಿಬ್ಬಂದಿಗಳ ಕೈವಾಡದ ಬಗ್ಗೆ ಕೂಡ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಬಸ್ ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗಳನ್ನು ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿ ಗೂಂಡಾಗಳು ವಿಡಿಯೋವನ್ನು ಹರಿಯಬಿಟ್ಟಿದ್ದರು.
Comments
Post a Comment