ರಿಪ್ಪನ್ ಪೇಟೆಯ ಗರ್ತಿಕೆರೆ ಬಳಿ ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ...!
ವರದಿ:-ವೀರಮಣಿ
ರಿಪ್ಪನ್‌ಪೇಟೆ:- ಸಮೀಪದ ಗರ್ತಿಕೆರೆಯಲ್ಲಿ ಗುರುವಾರ ರಾತ್ರಿ ಕೊಲೆಯಾದ ಸ್ಥಿತಿಯಲ್ಲಿ ಪುರುಷನ ಶವ ಪತ್ತೆಯಾಗಿದೆ.
ಮೃತವ್ಯಕ್ತಿಯನ್ನು ಗರ್ತಿಕೆರೆ ಗ್ರಾಮದ ಅವುಕ ರಸ್ತೆಯ ನಿವಾಸಿ ಸತೀಶ್ ಶೆಟ್ಟಿ, ಎಂದು ಗುರುತಿಸಲಾಗಿದೆ. ಸತೀಶ್ ಶೆಟ್ಟಿ ಸಾವಿಗೂ ಮುನ್ನ ಗರ್ತಿಕೆರೆಯ ಕೋಳಿ ಪಯಾಜ್,ಗರ್ತಿಕೆರೆಯ ಕೃಷ್ಣ ಎಂಬ ಸ್ನೇಹಿತರುಗಳು ಸೇರಿ ಬುಧವಾರ ತಡರಾತ್ರಿ ಸತೀಶ್ ಶೆಟ್ಟಿಯ ಮನೆಯಲ್ಲಿ ಮದ್ಯ ಸೇವಿಸಿ ಪಾರ್ಟಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸತೀಶ ಶೆಟ್ಟಿ ಹಾಗೂ ಮೂವರ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂದಿಸಿದಂತೆ ಜಗಳವಾಗಿ ಕೋಳಿ ಪಯಾಜ್ ಹಾಗೂ ಕೃಷ್ಣ ಸೇರಿ ಮಾರಕಾಸ್ತ್ರಗಳಿಂದ ಸತೀಶ್ ಶೆಟ್ಟಿ (53)ಯನ್ನು ಕೊಲೆ ಮಾಡಿ ಗರ್ತಿಕೆರೆ ಬಳಿಯ ಗಿರೀಶ್ ಬಾರ್ ಅಂಡ್ ರೆಸ್ಟೋರೆಂಟ್ ಸಮೀಪದಲ್ಲಿರುವ ಕೆರೆಗೆ ಶವನ್ನು ಬಿಸಾಡಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ವಿಷಯ ತಿಳಿದ ಗ್ರಾಮಸ್ಥರು ಆರೋಪಿ ಕೋಳಿ ಪಯಾಜ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಇನ್ನೋರ್ವ ಆರೋಪಿ ಕೃಷ್ಣ ನಾಪತ್ತೆಯಾಗಿದ್ದು ಪೊಲೀಸರು ಈತನ ಪತ್ತೆಗಾಗಿ ಬಲೆ ಬೀಸಿದ್ದಾರೆ. ಪ್ರಕರಣ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.
Comments
Post a Comment