ಕವಿಶೈಲ ಮಲೆನಾಡು ಕ್ರಿಯೇಷನ್ ಯೂಟ್ಯೂಬ್ ವತಿಯಿಂದ ಸನ್ಮಾನ ಕಾರ್ಯಕ್ರಮ.
ವರದಿ:- ವೀರಮಣಿ
-ಯೂಟ್ಯೂಬ್ ಚಾನಲ್ ನ ಸಾರಥಿ ಅಖಿಲೇಶ್ ನೇತೃತ್ವ
ಶಿವಮೊಗ್ಗ :ಕವಿಶೈಲ ಮಲೆನಾಡು ಕ್ರಿಯೇಶನ್ ಯೂಟ್ಯೂಬ್ ಚಾನೆಲ್ ವತಿಯಿಂದ ಭಾನುವಾರ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರ, ಕೊಪ್ಪದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಗೀತಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಹಾಗೂ ಸೇನಾ ದಳಕ್ಕೆ ಆಯ್ಕೆಗೊಂಡಿರುವ ನಿತಿನ್ ಮತ್ತು ಸಂಗೀತ ಕ್ಷೇತ್ರದಲ್ಲಿ ಪುಟ್ಟ ಹೆಜ್ಜೆಯನ್ನು ಇಡುತ್ತಿರುವ ನಿಕ್ಷೀಪ್ ಇವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು. ಸಂಗೀತ ಶಿಕ್ಷಕರಾದ ಬಸವರಾಜ್ ಬಾರ್ಕೇರ್, ಕವಿಶೈಲ ಮಲೆನಾಡು ಕ್ರಿಯೇಶನ್ ಚಾನೆಲ್ ನ ಸಾರಥಿ ಅಖಿಲೇಶ್ ಎಂ ಹಾಗೂ ಮತ್ತಿತರು ಉಪಸ್ಥಿತರಿದ್ದರು.
Comments
Post a Comment