ಗುಂಡಿ ಹೊಂಬಳ ಶಾಲೆ ಮತ್ತು ಕಡಬಗೆರೆ ಸರ್ಕಾರಿ ಶಾಲೆಯ ಮಕ್ಕಳಿಗೆ ದಾನಿಗಳಿಂದ ಕಿಟ್ಟ್ ವಿತರಣೆ
ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯ
ಹೋಬಳಿ ಬಿದರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಗುಂಡಿಹೊಂಬಳ ಶಾಲೆ ಮತ್ತು ದೇವದಾನ ಗ್ರಾಮ ಪಂಚಾಯಿತಿಯ ಹಳೆ ಕಡಬಗೆರೆ ಶಾಲೆಯ 46 ಮಕ್ಕಳಿಗೆ ಉಚಿತ ಪಠ್ಯೇತರ ಸಾಮಾಗ್ರಿಯನ್ನು ಗಂಧದ ಗುಡಿ ಬಳಗ ಜೆಪಿ ನಗರ ಬೆಂಗಳೂರು ಇವರು ಬ್ಯಾಗ್ ಮತ್ತು ಪಠ್ಯಪುಸ್ತಕ, ಕವಿಗಳ ಪೋಟೋ, ಅಟೋಟ ಸಾಮಗ್ರಿ, ವಾಟರ್ ಫಿಲ್ಟರ್, ಮೆಡಿಕಲ್ ಕಿಟ್, ಚಾರ್ಟ್, ಶಾಲೆಗೆ ಸಣ್ಣ ಗ್ರಂಥಾಲಯ ಪುಸ್ತಕ, ವಿತರಣೆ ಮಾಡಿದರು. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿರುವುದರಿಂದ ಹಾಗೂ ಖಾಸಗಿ ಶಾಲೆಗಳಿಗೆ ಸೇರಿಸಲು ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ತೊಂದರೆ ಉಂಟಾಗುತ್ತಿದ್ದು ಅದರಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತ್ತು ಬುಡಕಟ್ಟು ಜನಾಂಗದ ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಅದರಲ್ಲಿ 2 ವರ್ಷದಿಂದ ಕೋರೋನಾ ಮಹಾಮಾರಿ ಗ್ರಾಮ ಭಾಗದ ಮಕ್ಕಳ ಶಿಕ್ಷಣವನ್ನು ಕಸಿದುಕೊಂಡಿದೆ. ಅದನ್ನು ಮನಗಂಡು ನಮ್ಮ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ದಾನಿಗಳು ಮೂಲಭೂತ ಸೌಕರ್ಯ ವಂಚಿತ ಶಾಲೆಯ ಮಕ್ಕಳಿಗೆ ಉಚಿತ ಪಠ್ಯೇತರ ಸಾಮಾಗ್ರಿಯನ್ನು ನೀಡಲು ಮುಂದಾಗಿರುತ್ತಾರೆ.
ಹಾಗೂ ಗಂಧದ ಗುಡಿ ಬಳಗ ತಂಡದ ಜೊತೆ ಕೊಂಡಿಯಾಗಿ ಕೆಲಸ ಮಾಡಿದ ಮಂಜುನಾಥ್ ವಿ ಸಿ ಬಿದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಖಾಂಡ್ಯ ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಬಡ ವಿದ್ಯಾರ್ಥಿಗಳು ಇರುವ ಮತ್ತು ಮೂಲಸೌಕರ್ಯ ವಂಚಿತ ಶಾಲೆಯನ್ನು ಗುರುತು ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಗಂಧದ ಗುಡಿ ಬಳಗ ತಂಡದ ಸದಸ್ಯರಾದ ಪ್ರಖ್ಯಾತ ಪುತ್ತೂರು, ರವಿಕುಮಾರ್, ಅಫ್ಜಲ್, ಕಾರ್ತಿಕ್ ರವರು ಶಾಲೆಗೆ ಬಂದು ವಿತರಿಸಿದರು,ಹಾಗೂ ಈ ಕಾರ್ಯಕ್ರಮಕ್ಕೆ ಬಿದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಜತ್ತಿಶೇಖರ ಮತ್ತು ಸದಸ್ಯರು ಹಾಗೂ ದೇವದಾನ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶೀಲಾವತಿ ಮತ್ತು ಸದಸ್ಯರು ಗಾಯಕರಾದ ಶೇಖರ್ ಹ್ಯಾರಂಬಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಖಾಂಡ್ಯ ವಲಯದ ಮೇಲ್ವಿಚಾರಕರಾದ ಶಿವರಾಜ್, ಖಾಂಡ್ಯ ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಯೋಜಕರಾದ ಚಂದ್ರಶೇಖರ್ ರೈ, ಸ್ವಯಂಸೇವಕರಾದ ರಘುಪತಿ ವಿ ಸಿ ಬಿದರೆ, ಸಂಪತ್, ಅವಿನಾಶ್ ಟೆಲ್ಲಿಸ್, ಅವಿಲ್, ಫರ್ನಾಂಡಿಸ್, ಸುರೇಶ್, ಕೊಟ್ಯಾನ್, ರಾಕೇಶ್, ಕೃಷ್ಣ, ಪಲ್ಲವಿ, ಮಲ್ಲಿಕಾ, ಅಭಿ ಹುಯಿಗೆರೆ, ಮಂಜುನಾಥ್ ಹುಯಿಗೆರೆ, ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಶಾಲಾ ಶಿಕ್ಷಕರು ಪೋಷಕರು ಸೇವಾಪ್ರತಿನಿಧಿಗಳು ಗ್ರಾಮಸ್ಥರು ಭಾಗವಹಿಸಿದ್ದರು.
Comments
Post a Comment