*ಯಥಾ ರಾಜ.ತಥಾ ಪ್ರಜಾ.ಅನ್ನೋ ಮಾತು ನೆನಪೂ ಆಗುತ್ತದೆ. ನಗುವೂ ಬರುತ್ತದೆ,,
ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ಮತ್ತೆ ಪ್ರಶ್ನೆಗಳೇ ಹುಟ್ಟಿಕೊಳ್ಳುತ್ತಿವೆ.... ಪ್ರತೀ ವರ್ಷವೂ ವೈರಸ್ ಹೊಸ ನಾಮಕರಣದೊಂದಿಗೆ ನವೆಂಬರ್, ಡಿಸೆಂಬರ್ ನಲ್ಲೇ ಬೀದಿಗೆ ಇಳಿಯುತ್ತೆ... ಜನವರಿ, ಫೆಬ್ರವರಿ ಹೊತ್ತಿಗೆಲ್ಲ ತೀವ್ರತೆ ಕಂಡುಕೊಂಡು ಏಪ್ರಿಲ್, ಜೂನ್ ಹೊತ್ತಿಗೆ ಹಿಡಿತಕ್ಕೆ ಬರುತ್ತದೆ.... ಕಾಲಕಾಲಕ್ಕೆ ಸರಿಯಾಗಿ ಮಳೆಯೇ ಬಾರದಿರುವ ಈ ಕಾಲದಲ್ಲಿ ವೈರಸ್ ಮಾತ್ರ ಕಾಲಕ್ಕೆ ಸರಿಯಾಗಿ ಬರುತ್ತೆ.... ನಿಖರವಾದ ಉತ್ತರ ಯಾರಿಂದಲೂ ದೊರಕುತ್ತಿಲ್ಲ.... ಇನ್ನು ಓಮಿಕ್ರಾನ್ ಎನ್ನುವ ಭಯವೊಂದು ಕಾಡುವ ಅಥವಾ ಕಾಡಿಸುವ ದಿನಗಳು..... ನಮ್ಮ ಮುಂದಿರುವಾಗ... ಆ ಭಯದ ವಿರುದ್ದವಾಗಿ ಕಾರ್ಯಾಚರಣೆ ನಡೆಯುತ್ತಿದೆ ಎಂಬ ಕಲ್ಪನೆಯನ್ನು ಮೂಡಿಸುವ ನಿಟ್ಟಿನಲ್ಲಿ ಸಭೆಗಳಲ್ಲಿ ಕಾಲಹರಣ ಮಾಡಿ ಹೊಸ ಹೊಸ ಮಾರ್ಗಸೂಚಿಗಳನ್ನು ಹೊರಡಿಸುವುದು..... ಅದರ ಪಾಲನೆ ಮಾತ್ರ ಹೊರಡಿಸಿದವರಿಂದಲೇ ನಡೆಯದಿರುವುದು ವಿಪರ್ಯಾಸ..... ಇದರ ಬಗ್ಗೆ ಕೆಲವೊಂದು ಮಾಹಿತಿ ನಮ್ಮ ಸಮಾಧಾನಕ್ಕಾಗಿ.... ಓಮಿಕ್ರಾನ್ ಮಕ್ಕಳನ್ನು ಕಾಡುತ್ತದೆ ಎನ್ನುತ್ತಾರೆ... ಆದರೂ ಶಾಲೆಗಳಲ್ಲಿ ನಿಯಮ ಪಾಲನೆ ಆಗುತ್ತಿದೆಯೇ...... ಶಾಲೆಗಳು ಪರೀಕ್ಷೆಯ ವರೆಗೆ ಮುಂದುವರೆಯುತ್ತವೆ ಎನ್ನುವ ಭರವಸೆ ಇಲ್ಲದಿದ್ದರೂ ಶಾಲೆಗಳಲ್ಲಿ ವ್ಯಾಪಾರ ಭರದಿಂದ ಸಾಗಿವೆ.... ಇದರ ಬಗ್ಗೆ ಗಮನಹರಿಸಬೇಕಾದವರು ಜಾಣ ಕುರುಡು ಮೆರೆಯುತ್ತಿದ್ದಾರೆ....... ಇನ್ನು ಮಾಸ್ಕ್ ವಿಚಾರ ಹೇಳಲು ಘನಘೋರ...... ರಸ್ತೆಯಲ್ಲಿ ಒಬ್ಬೊಬ್ಬರೇ ಹೋಗುತ್ತಿರುವ ಜನರನ್ನು ಮಾಸ್ಕ್ ವಿಚಾರವಾಗಿ ದಂಡ ವಿಧಿಸುವ ನೆಪದಲ್ಲಿ ಗುಂಪು ಸೇರಿಸುವ ಚಾಕಚಕ್ಯತೆ ನಗೆಪಾಟಲು.... ಒಬ್ಬೊಬ್ಬರನ್ನು ಹಿಡಿದು ದಂಡ ವಿಧಿಸುವ ಅಧಿಕಾರಿಗಳಿಗೆ ಗುಂಪುಗಳು, ಸಭೆಗಳು, ರಾಜಕೀಯ ಪ್ರಚಾರಗಳು ಯಾವುವೂ ಕಾಣದಿರುವುದು ವಿಚಿತ್ರ..... ನಮ್ಮ ಆರಕ್ಷಕರು ಜನಗಳನ್ನು ಓಮಿಕ್ರಾನ್ನಿಂದ ರಕ್ಷಿಸುತ್ತಿರುವ ಪರಿ ಹುಬ್ಬೇರಿಸುತ್ತದೆ..... ಸಂಚಾರಿ ಪೊಲೀಸರು ಹಿಂದೆಂದೂ ಇಷ್ಟೊಂದು ಕಾರ್ಯನಿರ್ವಹಿಸಿದ್ದು ಕಂಡೇ ಇಲ್ಲ.... ರಸ್ತೆ ಮಧ್ಯದಲ್ಲಿ ವಾಹನ ಚಾಲಕರನ್ನು ಅಡ್ಡಗಟ್ಟಿ ಅವರನ್ನೆಲ್ಲ ಗುಂಪು ಸೇರಿಸಿ ದಂಡ ವಿಧಿಸುವುದರೊಂದಿಗೆ... ಸಲೀಸಾಗಿ ಸಂಚರಿಸುತ್ತಿರುವ ವಾಹನಗಳಿಗೆ ಟ್ರಾಫಿಕ್ ಜಾಮ್ ಉಂಟಾಗುವಂತೆ ಮಾಡಿ ಅಂತರ ಕಾಯ್ದುಕೊಳ್ಳದ ಸನ್ನಿವೇಶ ಸೃಷ್ಟಿಸುತ್ತಿರುವರು..... ಇಂತಹ ಅದೆಷ್ಟೋ ಎಡಬಿಡಂಗಿ ಸನ್ನಿವೇಶಗಳು ನಮ್ಮ ಮುಂದಿವೆ..... ಆದರೂ ನಾವುಗಳೂ ವಿಶ್ವಮಟ್ಟದಲ್ಲಿ ಮಾತನಾಡಿ ಯಾವುದೋ ದೇಶಗಳ ವೈರಸ್ ಸಮರ ಎನ್ನುವ ಆಲೋಚನೆಗಳನ್ನು ಹುಟ್ಟು ಹಾಕುತ್ತಿದ್ದೇವೆ.... ಇದೆಲ್ಲದರ ನಡುವೆ ಪ್ರಚಲಿತದಲ್ಲಿರುವ ಗುಂಪಿನಲ್ಲೊಂದು ಮಾತು..... ಈಗ ಸದ್ಯಕ್ಕೆ ಚುನಾವಣಾ ಪ್ರಚಾರದಲ್ಲಿ ಮುಳುಗಿರುವ ವೈರಸ್ ಚುನಾವಣೆಯ ನಂತರ ಕಾರ್ಯೋನ್ಮುಖವಾಗಬಹುದು ಎಚ್ಚರ......
ಎಲ್ಲಾ ಮಾತುಗಳು ಏನೇನೋ ಅರ್ಥ ಕಲ್ಪಿಸಿದರೂ....
ಎಲ್ಲರಲ್ಲೂ ಮನವಿ....
ಅವರನ್ನಿವರು... ಇವರನ್ನವರು... ದೂರುವುದು ಸಾಮಾನ್ಯವೇ ಆದರೂ.... ಎಲ್ಲರಿಂದಲೂ ಹಿಂದಾದ ತಪ್ಪುಗಳು ಮರುಕಳಿಸದಿರಲಿ.....
ಈ ಒಂದು ಬರಹದಲ್ಲಿ ಎಷ್ಟೋ ಪ್ರಶ್ನೆಗಳಿವೆ...... ಎಷ್ಟೋ ಉತ್ತರಗಳಿವೆ.... ಎಚ್ಚರಿಕೆಗಳಿವೆ.... ಎಲ್ಲವನ್ನು ಅರ್ಥೈಸುವ ಭಾಗ್ಯ ನಿಮ್ಮದಾಗಲಿ.......
ಪತ್ರಿಕಾ ಬಳಗದೊಂದಿಗೆ....
ವೇಣುಗೋಪಾಲ...
Comments
Post a Comment