ತನ್ನ ಖಾತೆಗೆ ಬಂದ 1.5 ಕೋಟಿ ಹಣವನ್ನು ಹಿಂದಿರುಗಿಸಿದ ಕನ್ನಡಿಗ !


ಕುವೈತ್: ಕುವೈತ್ ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರು, ಕಂಪನಿ ಮಾಲೀಕರು ತಪ್ಪಾಗಿ ತಮ್ಮ ಖಾತೆಗೆ ಜಮೆ ಮಾಡಿದ್ದ ಸುಮಾರು 1.5 ಕೋಟಿ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಇದಕ್ಕಾಗಿ ಕಂಪನಿ ಮಾಲೀಕರು, ಬ್ಯಾಂಕಿನಿಂದ ದೊಡ್ಡ ಮೊತ್ತದ ನಗದು ಹಣ, ಪ್ರಶಂಸನಾ ಪತ್ರ ಪಡೆದುಕೊಂಡಿದ್ದಾರೆ.



 

ಕರ್ನಾಟಕದ ಬೆಂಗಳೂರಿನ ಸುನಿಲ್ ಡೊಮಿನಿಕ್ ಡಿಸೋಜಾ ಕಳೆದ 10 ವರ್ಷಗಳಿಂದ ಕುವೈತ್ ನ N B T C, ಎಂಬ ಕಂಪನಿಯಲ್ಲಿ ಎಸಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದರು. ಈ  ಕಂಪನಿಯಿಂದ ಅವರು ನಿವೃತ್ತರಾಗಿ ಮನೆಗೆ ಮರಳಲು ನಿರ್ಧರಿಸಿದ್ದರು. ಇದರಿಂದ ಕಂಪನಿ ಮಾಲೀಕರು ಡಿಸೋಜಾ ಅವರ ಹಲವು ವರ್ಷಗಳ ಸೇವೆಗೆ ಸಂಬಂಧಿಸಿದ ಹಣವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು.


ಆದರೆ, ಡಿಸೋಜಾ ಅವರಿಗೆ ನೀಡಬೇಕಿದ್ದ ಹಣಕ್ಕಿಂತ 30 ಪಟ್ಟು ಹೆಚ್ಚು ಹಣ ಅವರ ಬ್ಯಾಂಕ್ ಖಾತೆಗೆ ತಪ್ಪಾಸಿ ವರ್ಗಾವಣೆ ಆಗಿತ್ತು. ಅದು ಕೂಡಾ ಒಟ್ಟು 62,859 ಕುವೈತ್ ದಿನಾರ್ ಭಾರತೀಯ ಕರೆನ್ಸಿಯಲ್ಲಿ ಅಂದಾಜು ರೂ. 1.5 ಕೋಟಿ ರೂ) ಜಮಾ ಮಾಡಿದ್ದರು. ಇದನ್ನು ಡಿಸೋಜಾ ಕೂಡಲೇ NBTC ಆಡಳಿತ ಮಂಡಳಿ ಗಮನಕ್ಕೆ ತಂದರು. ಈ ವಿಷಯವನ್ನು ಕಂಪನಿ ಮಾಲೀಕರಿಗೆ ಬ್ಯಾಂಕ್ ಗೆ ತಿಳಿಸಿದರು. ಪರಿಶೀಲಿಸಿದ ಬ್ಯಾಂಕ್ ಸಿಬ್ಬಂದಿ ತಾಂತ್ರಿಕ ಸಮಸ್ಯೆಯಿಂದ ಡಿಸೋಜಾ ಅವರ ಖಾತೆಗೆ ಇಷ್ಟು ದೊಡ್ಡ ಮೊತ್ತ ಜಮಾ ಆಗಿರವುದನ್ನು ಕಂಡುಕೊಂಡಿತು. ಅವರಿಗೆ ಸಲ್ಲಬೇಕಿದ್ದ ಹಣವನ್ನು ನಗದಾಗಿ ನೀಡಿ ಉಳಿದಿದ್ದನ್ನು ಹಿಂಪಡೆಯಲಾಯಿತು.



 

ಹಣವನ್ನು ಕಂಪನಿಗೆ ಮರಳಿಸಿದ ಡಿಸೋಜಾ ಅವರನ್ನು ಗೌರವಿಸಲು NBTC ಅಧ್ಯಕ್ಷ ಮೊಹಮ್ಮದ್ ನಜೀರ್ ಎಂ. ಆಲ್ ಬದ್ಧ, ಗುರುವಾರ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದರು. ವಿಶೇಷ ಪ್ರಶಂಸಾ ಪತ್ರ ಹಾಗೂ 250 ಕುವೈತ್ ದಿನಾರ್ (ರೂ. 61,569) ಬಹುಮಾನ ನೀಡಿ ಗೌರವಿಸಿದರು. ಕಂಪನಿ ಕಾರ್ಯನಿರ್ವಾಹಕ ಅನಿಂದಾ ಬ್ಯಾನರ್ಜಿ ಹಾಗೂ ಬೆನ್ ಪಾಲ್ (ಜನರಲ್ ಮ್ಯಾನೇಜರ್) ಬೆಲೆಬಾಳುವ ಸ್ಮಾರ್ಟ್ ಫೋನನ್ನು ಡಿಸೋಜಾ ಅವರಿಗೆ ಉಡುಗೊರೆಯಾಗಿ ನೀಡಿದರು. ಡಿಸೋಜಾ ಅವರಿಗೆ ಬ್ಯಾಂಕ್ ಆಡಳಿತ ಮಂಡಳಿ ಕೂಡಾ ರೂ. 2,46,277 ನಗದು ಬಹುಮಾನ ಹಾಗೂ ವಿಶೇಷ ಪ್ರಶಂಸನಾ ಪತ್ರ ನೀಡಿ ಗೌರವಿಸಿತು.





Comments

Post a Comment

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?