ಪೊಲೀಸ್ ಹುದ್ದೆ ಪರೀಕ್ಷೆಯಲ್ಲಿ 39ನೇ ರ‍್ಯಾಂಕ್ ಪಡೆದ ಮುಸ್ಲಿಂ ಯುವತಿ,
ಮಂಗಳೂರು: ಕಡಬ ಗ್ರಾಮೀಣ ಭಾಗದ ಬಡ ಮುಸ್ಲಿಂ ಯುವತಿಯೋರ್ವಳು ರಾಜ್ಯ ಪೊಲೀಸ್ ಇಲಾಖೆಯ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆದು 39ನೇ ರ್ಯಾಂಕ್ ನಲ್ಲಿ ಆಯ್ಕೆಯಾಗಿದ್ದಾರೆ.
ಕುಂತೂರು ಸಮೀಪದ ಕೋಚಕಟ್ಟೆ ನಿವಾಸಿ ಎ.ಕೆ. ಇಸ್ಮಾಯಿಲ್ ಹಾಗೂ ಝುಬೈದಾ ಹೆಂತಾರು ದಂಪತಿಯ ನಾಲ್ವರು ಪುತ್ರಿಯರ ಪೈಕಿ ಕೊನೆಯವಳಾದ ಬದ್ರುನಿಶಾ ಇದೀಗ ಪಿಎಸ್‌ಐ ಆಗಿ ಆಯ್ಕೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಕಲಿತು ಪೊಲೀಸ್ ಉದ್ಯೋಗ ಗಿಟ್ಟಿಸೊಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕುಂತೂರಿನಲ್ಲಿ ಪಡೆದಿರುವ ಈಕೆ, ಪ್ರೌಢಶಾಲಾ ಶಿಕ್ಷಣವನ್ನು ಸಂತ ಜಾರ್ಜ್ ಪ್ರೌಢಶಾಲೆ ಕುಂತೂರು ಪದವು ಹಾಗೂ ಪಿಯುಸಿ ಶಿಕ್ಷಣವನ್ನು ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ರಾಮಕುಂಜದಲ್ಲಿ ಮತ್ತು ಯುನಿವರ್ಸಿಟಿ ಆಫ್ ಅಗ್ರಿಕಲ್ಚರಲ್
ಸೈನ್ಸಸ್ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಬೆಂಗಳೂರಿನಲ್ಲಿ ಬಿಎಸ್ಸಿ ಕೃಷಿ ಪದವಿಯನ್ನು ಪಡೆದಿರುತ್ತಾರೆ.
Comments
Post a Comment