ಗ್ರಾಮ ಪಂಚಾಯತಿ ಕದನ, ಬಿ ಜೆ ಪಿ / ಕಾಂಗ್ರೆಸ್,ಕೋಣಂದೂರ್


 ವರದಿ:-ವೀರಮಣಿ 



ಬಿಜೆಪಿ ಹಾಗೂ ಕಾಂಗ್ರೆಸ್ ಗ್ರಾಮಪಂಚಾಯತ್ ಸದಸ್ಯರ ನಡುವೆ ಮಾರಾಮಾರಿ ; ಇಬ್ಬರು ಆಸ್ಪತ್ರೆ ದಾಖಲು,

ಪಂಚಾಯಿತಿಯಲ್ಲಿ ಸಭೆ ನಡೆಯುವಾಗ ಕೆರೆ ಅಭಿವೃದ್ಧಿ ವಿಚಾರವಾಗಿ ಗ್ರಾಮ ಪಂಚಾಯತ್ ಸದಸ್ಯರೇ ಹೊಡೆದಾಟ ನಡೆಸಿದ ಘಟನೆ ಬೆಳಕಿಗೆ ಬಂದಿದೆ .

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಗ್ರಾಮ ಪಂಚಾಯತ್ ನಲ್ಲಿ ಈ ಘಟನೆ ನಡೆದಿದೆ . ಗ್ರಾಮ ಪಂಚಾಯತ್ ನಲ್ಲಿ ಸಾಮಾನ್ಯ ಸಭೆ ನಡೆಯುತ್ತಿದ್ದ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ಕೆರೆ ಅಭಿವೃದ್ಧಿಯ ಕುರಿತಾಗಿ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿಕೊಂಡಿದ್ದಾರೆ .

ಗ್ರಾಮ ಪಂಚಾಯತ್ ನ ಕಾಂಗ್ರೆಸ್ ಬೆಂಬಲಿತ ಸದಸ್ಯ ಸುರೇಶ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯ ಪೂರ್ಣೇಶ್ ನಡುವೆ ಮಾರಾಮಾರಿ ನಡೆದಿದ್ದು ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ . ಒಬ್ಬರು ತೀರ್ಥಹಳ್ಳಿ ಇನ್ನೊಬ್ಬರು ಕೋಣಂದೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ . ಘಟನಾ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?