ಮತ್ತೊಂದು ಓಮಿಕ್ರಾನ್ ಅಲೆಗಳು,ಲಾಕ್ ಡೌನ್, ಸೀಲ್ ಡೌನ್
ವರದಿ:- ವೇಣುಗೋಪಾಲ್ ಬೆಂಗಳೂರು
ಮತ್ತೊಮ್ಮೆ ಕೊರೋನಾ.... ಓಮಿಕ್ರಾನ್.... ಅಲೆಗಳು..... ಬಣ್ಣಬಣ್ಣದ ವಲಯಗಳು.... ಲಾಕ್ ಡೌನ್.... ಸೀಲ್ಡೌನ್..... ಆಕ್ಸಿಜನ್.... ಕರ್ಫ್ಯೂ..... ಮಾಸ್ಕ್..... ದಂಡಗಳು..... ವ್ಯಾಕ್ಸಿನ್.... ಇನ್ನೂ ಅನೇಕ ಅಲರ್ಜಿ ಪದಗಳು ಕಿವಿಗೆ ಅಪ್ಪಳಿಸುತ್ತಿವೆ..... ಈ ಪದಗಳಿಗೆ ಮಹತ್ವವಿದ್ದ ಕಾಲವೊಂದಿತ್ತು ಏಕೆಂದರೆ ಅಂದು ಇವುಗಳನ್ನು ಅಗತ್ಯವಿದ್ದಾಗ ಮಾತ್ರ ಬಳಸಲಾಗುತ್ತಿತ್ತು...... ಆದರೆ ಇಂದು ಈ ಪದಗಳನ್ನು ಅನಾವಶ್ಯಕವಾಗಿ ಹೇರಲಾಗುತ್ತಿದೆ ಎನ್ನುವುದು ಹೆಚ್ಚಿನವರ ಅಳಲಾಗಿದೆ.... ಇದಕ್ಕೆ ಪೂರಕವೆಂಬಂತೆ ಕೆಲ ಸನ್ನಿವೇಶಗಳು ನಿಮ್ಮ ಮುಂದೆ.... ಮೊದಲನೆಯದಾಗಿ ಪ್ರಜ್ಞಾವಂತ ವಲಯದಿಂದ ಮೂಡಿಬಂದ ಒಂದು ಪ್ರಶ್ನೆ..... ಪ್ರಧಾನಿ ಮೋದಿಯವರು ಪಂಜಾಬ್ ಭೇಟಿಗೆ ನಿರ್ಧರಿಸುವ ಮುನ್ನ ಆ ಕಾರ್ಯಕ್ರಮಕ್ಕೆ ಎಷ್ಟು ಜನ ಸೇರಬೇಕು..... ಸೇರಿದ ಜನರಲ್ಲಿ ಸಾಮಾಜಿಕ ಅಂತರ ಹೇಗೆ ಕಾಯ್ದುಕೊಳ್ಳಬೇಕು... ಹಾಗೆಯೇ ಕೋವಿಡ್ ನಿಯಮಗಳನ್ನು ಹೇಗೆ ಪಾಲಿಸಬೇಕು.... ಎಂಬ ಕನಿಷ್ಠ ಮಾಹಿತಿ ರವಾನೆಯಾಗಿರಲಿಲ್ಲವೇ..... ಏಕೆಂದರೆ ಅಲ್ಲಿ ಯಾವುದೇ ಅಂತರಗಳಿಲ್ಲದೆ ಅಷ್ಟೊಂದು ಆಸನಗಳನ್ನು ವ್ಯವಸ್ಥೆ ಮಾಡಲಾಗಿತ್ತು..... ಪ್ರಮುಖವಾಗಿ ಇಂತಹ ಸಂದಿಗ್ಧ ಸಮಯದಲ್ಲಿ ಜನಗಳನ್ನು ಒಟ್ಟು ಸೇರಿಸಬಾರದು ಎನ್ನುವ ಪ್ರಜ್ಞೆ ಸಮಂಜಸವಲ್ಲವೆ....? ಅದೇ ಪ್ರಜ್ಞಾವಂತ ವಲಯದಿಂದ ಮೂಡಿಬಂದ ಮತ್ತೊಂದು ಪ್ರಶ್ನೆ... ಇತ್ತೀಚೆಗೆ ಕೆಲವೊಂದು ಸ್ಥಳಗಳಲ್ಲಿ 2 ಡೋಸ್ ವ್ಯಾಕ್ಸಿನ್ ಹಾಕಿಸಿರುವ ಪ್ರಮಾಣಪತ್ರವನ್ನು ತೋರಿಸಬೇಕು.... ಇಲ್ಲವಾದಲ್ಲಿ ಪ್ರವೇಶ ನಿಷಿದ್ಧ... ಎನ್ನುವ ಕಾನೂನೊಂದು ಜಾರಿಗೆ ಬಂದಿದೆ...... ಆದರೆ, ಅದನ್ನು ಹೇಗೆ ಪಾಲಿಸಬೇಕು ಎನ್ನುವ ಕನಿಷ್ಠ ಮಾಹಿತಿಯನ್ನು ಏಕೆ ರವಾನಿಸಲಿಲ್ಲ....? ಹೆಚ್ಚಿನ ಸ್ಥಳಗಳಲ್ಲಿ ಪ್ರಮಾಣಪತ್ರವನ್ನು ಕೇಳುತ್ತಾರೆ.... ಜನಗಳು ತೋರಿಸುತ್ತಾರೆ... ಆದರೆ ಆ ಪ್ರಮಾಣ ಪತ್ರ ಅವರದೇ ಎಂದು ಯಾರೂ ಪರೀಕ್ಷಿಸುತ್ತಿಲ್ಲ.... ಒಟ್ಟಾರೆಯಾಗಿ ಯಾವುದೋ ಒಂದು ಪ್ರಮಾಣಪತ್ರ ತೋರಿಸಿದರೆ ಸಾಕು.... ಹೇಗೂ ಎಲ್ಲಾ ಪ್ರಮಾಣಪತ್ರಗಳಲ್ಲೂ ಇರುವುದು ಒಂದೇ ಫೋಟೋ ಅದು ಪ್ರಧಾನಿ ಮೋದಿ ಅವರದು.... ಇಂತಹ ಅಸಮಂಜಸ ನಡೆಗಳು ಬಹಳಷ್ಟಿವೆ.... ಇನ್ನು ವಾರಾಂತ್ಯದ ಕರ್ಫ್ಯೂ ಜಾರಿಯಾಗಿದೆ.... ನಿಯಮಗಳ ಪ್ರಕಾರ ಕೆಲವರಿಗೆ ಅವಕಾಶ ಮತ್ತೆ ಕೆಲವರಿಗೆ ಅವಕಾಶವಿಲ್ಲ.... ಇಂತಹ ತಾರತಮ್ಯ ಅಗತ್ಯವಿದೆಯೇ... ಕೊರೋನಾ ಹರಡಲು... ಅವರು ಇವರು ಎಂದು ತಾರತಮ್ಯ ತೋರುವುದಿಲ್ಲ..... ಈಗ ಒಂದುವಾರದಿಂದ ಗಮನಿಸಿದರೆ ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರ ಹಾವಳಿ ಮಿತಿಮೀರಿದೆ.... ಅವರುಗಳು ಗುಂಪುಕಟ್ಟಿಕೊಂಡು ದಾಖಲೆಗಳನ್ನು ಪರಿಶೀಲಿಸುವ ನೆಪದಲ್ಲಿ..... ದಂಡ ವಿಧಿಸುವ ನೆಪದಲ್ಲಿ ಜನರನ್ನು ಗುಂಪು ಸೇರಿಸುತ್ತಿದ್ದಾರೆ.... ಹಾಗಾದರೆ ಇಂತಹ ಸ್ಥಳಗಳಲ್ಲಿ ಕೊರೋನಾ ಹರಡುವುದಿಲ್ಲವೆ...? ಕೊರೋನಾ.... ಅತಿವೇಗದಲ್ಲಿ ಓಮಿಕ್ರಾನ್ ನಾಮಧೇಯದೊಂದಿಗೆ ಧುಮುಕಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ... ಅದಕ್ಕೆ ಕಡಿವಾಣ ಹಾಕುವುದು ಮುಖ್ಯವೋ...? ಅಥವಾ ಜನಗಳಿಗೆ ದಂಡ ವಿಧಿಸುವುದು ಮುಖ್ಯವೋ....? ಇಂತಹ ಲೆಕ್ಕವಿಲ್ಲದಷ್ಟು ವಿಚಾರಗಳಿವೆ... ದಯವಿಟ್ಟು ಆಳುವವರು ಪ್ರಜ್ಞಾವಂತರಾಗಿ.... ಪ್ರಜ್ಞಾವಂತ ನಿಯಮಗಳೊಂದಿಗೆ.... ಪ್ರಜ್ಞಾವಂತ ಸಮಾಜದಲ್ಲಿ ಪ್ರಜೆಗಳನ್ನು ಬದುಕಲು ಬಿಡಿ.... ಎನ್ನುವ ಪ್ರಜ್ಞಾವಂತ ಪ್ರಜೆಗಳ ಅಹವಾಲನ್ನು ಹೊತ್ತು...
Comments
Post a Comment