ಸಾಮಾಜಿಕ ಜಾಲತಾಣದ ಮೇಲೆ ಮಂಗಳೂರು ಪೋಲೀಸರ ಹದ್ದಿನ ಕಣ್ಣು,!
ವರದಿ:-ಮಜೀದ್ ಸಣ್ಣಕೇರೆ
ಮಂಗಳೂರು: ಶಿವಮೊಗ್ಗ ಗಲಭೆಯ ಬಳಿಕ ಕರಾವಳಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಪೊಲೀಸರು ಇಡೀ ಜಿಲ್ಲೆಯಲ್ಲಿ ಈಗ ಹದ್ದಿನಕಣ್ಣು ಇಟ್ಟಿದ್ದಾರೆ.
ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿ ಕೋಮು ಸಂಘರ್ಷವನ್ನುಂಟು ಮಾಡಲು ತೆರೆಮರೆಯ ಕಾರ್ಯ ನಡೆಸುವವರ ಹೆಡೆಮುರಿ ಕಟ್ಟಲು ಪೊಲೀಸರು ಮುಂದಾಗಿದ್ದಾರೆ. ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಏನೂ ಆಗಲ್ಲ ಎಂಬ ಧೈರ್ಯದಲ್ಲಿದ್ದವರು ಎಚ್ಚರಿಕೆಯಿಂದ ಇರಿ ಅಂತಾ ಖಡಕ್ ಸೂಚನೆ ಕೊಟ್ಟಿದ್ದಾರೆ.
ಶಿವಮೊಗ್ಗದಲ್ಲಿ ಹರ್ಷ ಕೊಲೆ ಹಿನ್ನಲೆಯಲ್ಲಿ ಮಂಗಳೂರು ನಗರದಲ್ಲಿ ಕೆಲ ಸಂಘಟನೆ, ವ್ಯಕ್ತಿಗಳ ಹೆಸರಿನಲ್ಲಿ ವಿವಿಧ ಧರ್ಮದ ಗ್ರೂಪ್ ಸೃಷ್ಠಿ ಮಾಡಿ ಜಾತಿ ಸಂಘರ್ಷದ ಪೋಸ್ಟ್ ಗಳನ್ನು ಹಾಕಲಾಗಿದೆ. ಈ ಎಲ್ಲಾ ಪೋಸ್ಟ್ ಗಳನ್ನು ಸೋಷಿಯಲ್ ಮಿಡಿಯಾ ಸೆಲ್ ಮೂಲಕ ಗಮನಿಸಲಾಗುತ್ತಿದೆ. “ನೂರಕ್ಕೂ ಹೆಚ್ಚು ಸಂಘಟನೆ, ವ್ಯಕ್ಯಿಗಳು ಸೇರಿದಂತೆ ಸಾವಿರದ ಅರವತ್ತ ನಾಲ್ಕು ಜನರ ಮೇಲೆ ಈಗಾಗಲೇ ನಿಗಾ ಇಟ್ಟಿದ್ದೇವೆ. ಪೋಸ್ಟ್ ಮಾಡಿದರೆ ಹಿಡಿಯೋಕೆ ಆಗಲ್ಲ ಅನ್ನುವ ಭ್ರಮೆ ಬೇಡ. ಇದಕ್ಕಾಗಿಯೇ ಕಳೆದ ಎರಡು ತಿಂಗಳನಿಂದ ಮಾನಿಟರ್ ಮಾಡುತ್ತಿದ್ದೇವೆ. 6 ಜನ ಸಿಬ್ಬಂದಿ ಇದಕ್ಕಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ” ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
Comments
Post a Comment