ಒಂದೇ ದಿನ 81 ಮಂದಿಗೆ ಗಲ್ಲುಶಿಕ್ಷೆ ವಿಧಿಸಿದ ಸೌದಿ ಅರೇಬಿಯಾ



*ರಿಯಾದ್, :* ಸೌದಿ ಅರೆಬಿಯಾದಲ್ಲಿ ಒಂದೇ ದಿನ ಭಯೋತ್ಪಾದನೆಗೆ ಸಂಬಂಧಿಸಿದ ವಿವಿಧ ಅಪರಾಧ ನಡೆಸಿದ 81 ಮಂದಿಯನ್ನು ಗಲ್ಲಿಗೇರಿಸಲಾಗಿದೆ ಎಂದು ವರದಿಯಾಗಿದೆ. ಎಲ್ಲರೂ ಹಲವು ಘೋರ ಅಪರಾಧಗಳನ್ನು ಎಸಗಿದ ತಪ್ಪಿತಸ್ಥರೆಂದು ಸಾಬೀತಾಗಿದೆ.

 

ಐಸಿಸ್, ಅಲ್ ಖೈದಾ, ಯೆಮನ್ ನ ಹೌದಿ ಬಂಡುಗೋರ ಪಡೆ ಹಾಗೂ ಇತರ ಭಯೋತ್ಪಾದಕ ಸಂಘಟನೆಗೆ ಸೇರಿದವರು ಈ ಪಟ್ಟಿಯಲ್ಲಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಸೌದಿ ಪ್ರೆಸ್ ಏಜೆನ್ಸಿ(ಎಸ್ಪಿಎ) ವರದಿ ಮಾಡಿದೆ. ಜತೆಗೆ, ಸರಕಾರದ ಸಿಬ್ಬಂದಿಗಳನ್ನು, ಪ್ರಮುಖ ಆರ್ಥಿಕ ಸಂಸ್ಥೆಗಳನ್ನು ಗುರಿಯಾಗಿಸಿ ದಾಳಿ ಎಸಗಿದವರು, ಕಾನೂನು ಜಾರಿ ಅಧಿಕಾರಿಗಳನ್ನು ಹತ್ಯೆ ಮಾಡಿದವರು, ಪೊಲೀಸ್ ವಾಹನಗಳನ್ನು ಗುರಿಯಾಗಿಸಿ ನೆಲಬಾಂಬ್ಗಳನ್ನು ಇರಿಸಿದವರು ಈ ಪಟ್ಟಿಯಲ್ಲಿದ್ದಾರೆ. 


ಅಪಹರಣ, ಚಿತ್ರಹಿಂಸೆ, ಅತ್ಯಾಚಾರ, ದೇಶದೊಳಗೆ ಶಸ್ತ್ರಾಸ್ತ್ರ ಮತ್ತು ಬಾಂಬ್ ಕಳ್ಳಸಾಗಣೆಯ ಅಪರಾಧ ಎಸಗಿದರಿಗೆ ಈ ಶಿಕ್ಷೆ ವಿಧಿಸಲಾಗಿದೆ. 81 ಮಂದಿಯಲ್ಲಿ 73 ಮಂದಿ ಸೌದಿ ಪ್ರಜೆಗಳು, 7 ಮಂದಿ ಯೆಮನ್ ಪ್ರಜೆಗಳು ಮತ್ತು ಓರ್ವ ಸಿರಿಯಾದ ನಾಗರಿಕ ಎಂದು ವರದಿ ಹೇಳಿದೆ.




Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?