ಎಡಗೈಯಲ್ಲಿ ಊಟ ಮಾಡಿದ ವಧು, ಮದುವೆ ಮಂಟಪದಿಂದ ಓಡಿಹೋಗಲು ಯತ್ನಿಸಿದ ವರ
ಕಾರವಾರ; ವಧು ಎಡಗೈಯಲ್ಲಿ ಊಟ ಮಾಡಿದ ಕಾರಣಕ್ಕೆ ವರ ಈ ಹೆಂಡ್ತಿನೇ ಬೇಡ ಎಂದು ಮದುವೆ ಮಂಟಪದಿಂದ ವರ ಕಾಲ್ಕೀಳಲು ಮುಂದಾದ ಘಟನೆ ದಾಂಡೇಲಿಯ ಕೂಳಗಿಯ ಈಶ್ವರ ದೇವಸ್ಥಾನದಲ್ಲಿ ಜರುಗಿದೆ.
ಜೊಯಿಡಾದ ಕಬೀರ್ ಕಾತು ನಾಯ್ಕ್ ಹಾಗೂ ಯಲ್ಲಾಪುರದ ವಧುವಿಗೆ ಮೂರು ದಿನಗಳ ಹಿಂದೆ ಮಾತುಕತೆ ನಡೆದು ಮದುವೆ ನಿಶ್ಚಯವಾಗಿತ್ತು. ಕೂಳಗಿಯ ಈಶ್ವರ ದೇವಸ್ಥಾನದಲ್ಲಿ ಮದುವೆ ನಡೆಯುತ್ತಿತ್ತು.
ಮಾಂಗಲ್ಯ ಧಾರಣೆ ಬಳಿಕ ವಧು-ವರರು ಊಟಕ್ಕೆ ಕುಳಿತ ಸಂದರ್ಭದಲ್ಲಿ ವಧು ಎಡಗೈನಲ್ಲಿ ಊಟ ಮಾಡಿದ್ದಾರೆ. ಇದರಿಂದ ಕೋಪಗೊಂಡ ವರ ಹಾಗೂ ಆತನ ಪೋಷಕರು ಆಕೆಯನ್ನು ಬಿಟ್ಟು ಕಾರನ್ನೇರಿ ಹೊರಡಲು ಮುಂದಾಗಿದ್ದಾರೆ.
ತಕ್ಷಣ ವಧುವಿನ ಕಡೆಯವರು ಧಾವಿಸಿ ವರ ಹಾಗೂ ಆತನ ಕುಟುಂಬವನ್ನು ಸ್ಥಳದಿಂದ ತೆರಳದಂತೆ ತಡೆದು ಮಾತುಕತೆ ಮೂಲಕ ವಿಷಯ ಬಗೆ ಹರಿಸಿಕೊಳ್ಳುವಂತೆ ಬೇಡಿಕೊಂಡಿದ್ದಾರೆ.
ವರನ ಕಡೆಯವರು ಪರಾರಿಗೆ ಯತ್ನಿಸುತ್ತಿದ್ದಂತೆ ವಧುವಿನ ಕಡೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಮಹಿಳಾ ಪೊಲೀಸರು ವರನಿಗೆ ಬುದ್ದಿ ಹೇಳಿ ಇಬ್ಬರನ್ನು ಒಟ್ಟುಮಾಡಿ ಕಳಿಸಿದ್ದಾರೆ.
Comments
Post a Comment