ಮದ್ರಸಗಳ ಮೇಲಿನ ಸಂಘ ಪರಿವಾರದ ಆರೋಪ ಆಧಾರ ರಹಿತ : ಸಚಿವೆ ಶಶಿಕಲಾ ಜೊಲ್ಲೆ

 


ಬೆಂಗಳೂರು : ರಾಜ್ಯದ ಮದ್ರಸಾಗಳಲ್ಲಿ ಧಾರ್ಮಿಕ ಭಯೋತ್ಪಾದನೆ ಮತ್ತು ಮೂಲಭೂತವಾದ ಚಟುವಟಿಕೆಗಳು ನಡೆಯುತ್ತಿವೆ ಎಂದು ಸಂಘ ಪರಿವಾರ ಹುಯಿಲೆಬ್ಬಿಸುತ್ತಿರುವ ಹೊತ್ತಿನಲ್ಲಿಯೇ ರಾಜ್ಯದ ಮದ್ರಸಾಗಳಲ್ಲಿ ಯಾವುದೇ ತರದಲ್ಲೂ ಮೂಲಭೂತವಾದ ಶಿಕ್ಷಣ ನೀಡಲಾಗುತ್ತಿಲ್ಲ ಎಂದು ರಾಜ್ಯ ಬಿಜೆಪಿ ಸರಕಾರವೇ ಇದೀಗ ಅಧಿಕೃತವಾಗಿ ಉತ್ತರ ಒದಗಿಸಿದೆ . ಅಷ್ಟೇ ಅಲ್ಲ ಮದ್ರರಸಾ ಶಿಕ್ಷಣದಲ್ಲಿ ಸಣ್ಣ ಮಕ್ಕಳಿಗೆ ದೇವರನ್ನು ಪೂಜಿಸುವವರಿಗೆ ಕೊಲ್ಲು ಎಂಬುದಾಗಿ ಪಾಠ ಮಾಡುತ್ತಿಲ್ಲ . ಇದು ಅಧಾರರಹಿತ ಆಪಾದನೆಯಾಗಿದೆ ಎಂದು ಮುಜುರಾಯಿ ಮತ್ತು ವಕ್ಸ್ ಸಚಿವರಾದ ಶಶಿಕಲಾ ಜೊಲ್ಲೆ ಅವರು ವಿಧಾನಪರಿಷತ್ನಲ್ಲಿ ಉತ್ತರಿಸಿದ್ದಾರೆ .


ಮದ್ರಸಾಗಳ ಶಿಕ್ಷಣ ಕುರಿತು ಸಂಘ ಪರಿವಾರದ ಹಿನ್ನೆಲೆಯ ವಿಧಾನಪರಿಷತ್ ಸದಸ್ಯರಾದ ಮುನಿರಾಜುಗೌಡ ಮತ್ತು ಎನ್.ರವಿಕುಮಾರ್ ಈ ಹಿಂದಿನ ಹಲವು ಅಧಿವೇಶನಗಳಲ್ಲಿ ಪ್ರಶ್ನೆಗಳನ್ನು ಕೇಳುತ್ತಲೇ ಬಂದಿದ್ದಾರೆ . ಈ ಪ್ರಶ್ನೆಗಳಿಗೆ ಇದೇ ಬಿಜೆಪಿ ಸರಕಾರವು ಮದ್ರಸಾಗಳಲ್ಲಿ ಆಧುನಿಕ ಮತ್ತು ಉನ್ನತ ಮಟ್ಟದ ಶಿಕ್ಷಣ ಒದಗಿಸಲಾಗುತ್ತಿದೆ ಎಂದು ಉತ್ತರಿಸುತ್ತಲೇ ಬಂದಿದೆ . ವಿಧಾನಪರಿಷತ್ನಲ್ಲಿ ಬುಧವಾರ ನಡೆದ ಅಧಿವೇಶನದಲ್ಲಿ ಎನ್.ರವಿಕುಮಾರ್ ಅವರು ಮದ್ರಸಾ ಶಿಕ್ಷಣ ಮತ್ತು ಆಪಾದನೆಗಳ ಬಗ್ಗೆ ಒಟ್ಟು 3 ಪ್ರಶ್ನೆಗಳನ್ನು ಕೇಳಿದ್ದರು . ಇದಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಅವರು ಹೊರ ದೇಶ ಮತ್ತು ಬೇರೆ ರಾಜ್ಯಗಳಿಂದ ನಮ್ಮ ರಾಜ್ಯದಲ್ಲಿ ಬಂದು ಮದ್ರಸಾ ಶಿಕ್ಷಣ ಪಡೆಯುವ ಬಗ್ಗೆ ಸಂವಿಧಾನಾತ್ಮಕವಾಗಿ ಯಾವುದೇ ನಿರ್ಬಂಧವಿರುವುದಿಲ್ಲ . ನಮ್ಮ ರಾಜ್ಯದ ಮದ್ರಸಾಗಳಲ್ಲಿ ಅತೀ ಉನ್ನತ ಮಟ್ಟದ ಶಿಕ್ಷಣ ನೀಡಲಾಗುತ್ತಿದೆ . ಮೂಲಭೂತವಾದ ಶಿಕ್ಷಣ ನಮ್ಮ ರಾಜ್ಯದಲ್ಲಿ ಇಲ್ಲ ಎಂದು ಉತ್ತರಿಸಿದ್ದಾರೆ . ಅದೇ ರೀತಿ ಮದ್ರಸಾ ಶಿಕ್ಷಣದಲ್ಲಿ ಸಣ್ಣ ಮಕ್ಕಳಿಗೆ ದೇವರನ್ನು ಪೂಜಿಸುವವರಿಗೆ ಕೊಲ್ಲು ಎಂಬುದಾಗಿ ಯಾವುದೇ ಪಾಠ ಮಾಡುವುದಿಲ್ಲ . ಇದು ಆಧಾರ ರಹಿತ ಆಪಾದನೆಯಾಗಿದೆ . ನೈಜವಾಗಿ ಮದ್ರಸಾಗಳಲ್ಲಿ ಸಮಸ್ತ ಜನಗಳ ಮಧ್ಯೆ ಸೌಹಾರ್ದ , ಸಹಬಾಳ್ವೆ , ಭ್ರಾತೃತ್ವ ಸಂಬಂಧಗಳನ್ನು ಬೆಳೆಸಲು ಪಾಠ ಮಾಡಲಾಗುತ್ತದೆ . ಇತರ ಶಿಕ್ಷಣ ಸಂಸ್ಥೆಗಳಂತೆ ಮದ್ರಸಾ ಶಿಕ್ಷಣ ಸಂಸ್ಥೆಗಳಿಂದಲೂ ಸರಕಾರಕ್ಕೆ ಗಣನೀಯ ಆದಾಯವಿರುವುದಿಲ್ಲ ಎಂದು ಹೇಳಿದೆ .





Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?