ಕೊಪ್ಪ:- ಪೊಲೀಸ್ ಸಿಬ್ಬಂದಿ ಮೇಲೆಯೇ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಕಿಡಿಗೇಡಿ ,!
ವರದಿ:-🖋ವೀರಮಣಿ,
ಕೊಪ್ಪ: ಮನೆಯವರೊಂದಿಗೆ ಗಲಾಟೆ ಮಾಡಿಕೊಂಡು ತಾನು ವಾಸವಿದ್ದ ಗುಡಿಸಲಿಗೆ ಬೆಂಕಿಯಿಟ್ಟಿದ್ದ ಯುವಕನೊಬ್ಬ ಈ ಸಂಬಂಧ ವಿಚಾರಣೆಗೆಂದು ಬಂದಿದ್ದ ಪೊಲೀಸ್ ಸಿಬ್ಬಂದಿಯ ಮೇಲೆಯೂ ಪೆಟ್ರೋಲ್ ಎರಚಿ ಬೆಂಕಿಯಿಟ್ಟ ಘಟನೆ ನಡೆದಿದೆ,
ಕೊಪ್ಪ ತಾಲೂಕಿನ ನುಗ್ಗಿ ಗ್ರಾಪಂ ವ್ಯಾಪ್ತಿಯ ಕೂಗೆ ಗ್ರಾಮದ ಜಂಬೇಕಾಡು ಎಂಬಲ್ಲಿ ಮಂಗಳವಾರ ಘಟನೆ ನಡೆದಿದೆ.ಜಂಬೇಕಾಡು ಗ್ರಾಮದ ದೇವರಾಜ್ (25) ಎಂಬಾತ ಕುಡಿದ ಮತ್ತಿನಲ್ಲಿ ಮಂಗಳವಾರ ತಂದೆ, ತಾಯಿ ಜೊತೆ ಗಲಾಟೆ ಮಾಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ತಾನು ವಾಸವಿದ್ದ ಗುಡಿಸಲಿಗೆ ಬೆಂಕಿ ಹಚ್ಚಿದ್ದಾನೆ.ಆತನ ಪುಂಡಾಟಗಳಿಂದ ಬೇಸತ್ತ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಪ್ಪ ಠಾಣೆಯ 112 ವಾಹನ ಚಾಲಕ ತ್ರಿಮೂರ್ತಿ ಹಾಗೂ ಪೇದೆ ರಘು ಈ ಸಂಬಂಧ ವಿಚಾರಣೆಗೆಂದು ಸ್ಥಳಕ್ಕೆ ತೆರಳಿದ್ದಾರೆ.ಈ ವೇಳೆ ಅವರೊಂದಿಗೂ ವಾಗ್ವಾದ ನಡೆಸಿದ ಕಿಡಿಗೇಡಿ ಯುವಕ ಪೊಲೀಸ್ ವಾಹನ ಚಾಲಕ ತ್ರಿಮೂರ್ತಿಯವರ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾನೆ.
ಅದೃಷ್ಟವಶಾತ್ ಪೆಟ್ರೋಲ್ ಕಾಲಿನ ಭಾಗಕ್ಕೆ ಬಿದ್ದಿದ್ದರಿಂದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳದಲ್ಲಿದ್ದ ಸ್ಥಳೀಯರು ತಕ್ಷಣ ಚಾಲಕನ ಚಾಲಕನ ರಕ್ಷಣೆಗೆ ಧಾವಿಸಿದ್ದು, ಕೊಪ್ಪದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ. ಠಾಣಾಧಿಕಾರಿ ಶ್ರೀನಾಥ್ ರೆಡ್ಡಿಯವರು ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಬಂದಿ ಆರೋಗ್ಯ ವಿಚಾರಿಸಿದ್ದಾರೆ.ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದೇವರಾಜ್‌ನನ್ನು ಸ್ಥಳೀಯರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ
Comments
Post a Comment