ಮನವಿಗೆ ಸ್ಪಂದಿಸಿದ ಇಂಧನ ಸಚಿವರಾದ ಸುನಿಲ್ ಕುಮಾರ್
ವರದಿ:🖋ವೀರಮಣಿ,
ಚಿಕ್ಕಮಗಳೂರು:- ನರಸಿಂಹರಾಜಪುರ ತಾಲ್ಲೂಕ್ ಮೆಲ್ಪಾಲ್ ಗ್ರಾಮ ಪಂಚಾಯತ್ ಕರ್ಕೇಶ್ವರ ಗ್ರಾಮದಲ್ಲಿ ವಿದ್ಯುತ್ ವೋಲ್ಟೇಜ್ ಸಮಸ್ಯೆ ಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ, ರೈತರಿಗೆ ಸಮಸ್ಯೆಯಾಗುತ್ತಿದೆ ಎಂದು ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯೆ ಸುಚಿತ ಅವರಿಗೆ ಗ್ರಾಮಸ್ಥರು ಮನವಿ ಮಾಡಿದ್ದರು, ತಕ್ಷಣವೇ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಇಂಧನ ಸಚಿವರಾದ ಸುನಿಲ್ ಕುಮಾರ್ ರವರ ಗಮನಕ್ಕೆ ತಂದಿದ್ದರು,
ಪತ್ರಕ್ಕೆ ಸ್ಪಂದನೆ ಮಾಡಿದ ಸಚಿವರು ಸ್ಥಳಕ್ಕೆ JE ಮತ್ತು ಲೈನ್ ಮ್ಯಾನ್ ಕಳುಹಿಸಿ ಸ್ಥಳ ತಪಾಸಣೆ ಮಾಡಿ ಕರ್ಕೇಶ್ವರ ಮತ್ತು ಹುಣಸೆ ಕೊಪ್ಪಕ್ಕೆ ಹೊಸ ಟಿಸಿ ಅಳವಡಿಕೆ ಮತ್ತು ಗುಬ್ಬುರು ಗ್ರಾಮಕ್ಕೆ ಟಿಸಿ ಅಳವಡಿಕೆ ಮಾಡುವುದಾಗಿ ತಿಳಿಸಿದ್ದಾರೆ.
ಈ ವಿಷಯವನ್ನ ಇಂಧನ ಸಚಿವರಿಗೆ ಕೂಡಲೇ ತಲುಪಿಸಿ ಸ್ಪಂದನೆ ಮಾಡುವ ಹಾಗೆ ಮಾಡಿದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾದ ಡಿ ಎನ್ ಜೀವರಾಜ್, ಬಾಳೆಹೊನ್ನೂರ್ ಹೋಬಳಿ ಬಿಜೆಪಿ ಅಧ್ಯಕ್ಷರಾದ ಪ್ರಭಾಕರ್, ಕಾರ್ಯದರ್ಶಿ ಪ್ರದೀಪ್ ಕಿಚ್ಚೆಬಿ, ಒಬಿಸಿ ಜಿಲ್ಲಾಧ್ಯಕ್ಷರಾದ ಭಾಸ್ಕರ್, ಚುನಾಯಿತ ಗ್ರಾಮ ಪಂಚಾಯತ್ ಸದಸ್ಯರುಗಳಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳು,
Comments
Post a Comment