ಕೇರಳ, ಮಗ, ಸೊಸೆ, ಮೊಮ್ಮಕ್ಕಳನ್ನು ಬೆಂಕಿ ಹಚ್ಚಿ ಕೊಂದ ವೃದ್ಧ





ಕುರಿ ಮಾಂಸ ಖರೀದಿಸದಿದ್ದಕ್ಕೆ ಮಗ, ಸೊಸೆ, ಮೊಮ್ಮಕ್ಕಳಿಗೆ ಬೆಂಕಿ ಹಚ್ಚಿ ಕೊಂದೆ ಎಂದ ಪಾಪಿ!



ಇಡುಕ್ಕಿ:- ಕುರಿ ಮಾಂಸ ಖರೀದಿಸಲಿಲ್ಲ  ಎಂಬ ಕಾರಣಕ್ಕಾಗಿ ತನ್ನ ಮಗ ಸೇರಿ ನಾಲ್ವರನ್ನು  ಹತ್ಯೆ ಮಾಡಿರುವುದಾಗಿ ಕೇರಳದ ಹಮೀದ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.  ನಿನ್ನೆ ಮಗನಿಗೆ ಕುರಿ ಮಾಂಸ  ಖರೀದಿಸಲು ಹೇಳಿ ಕಳುಹಿಸಿದೆ.  ಆದರೆ ತನ್ನ ಮಗ ಅದಕ್ಕೆ ಒಪ್ಪಲಿಲ್ಲ,  ಜೈಲಿನಲ್ಲಿ ಕುರಿ ಮಾಂಸ ಸಿಗುತ್ತದೆ ಎಂಬ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಹಮೀದ್ ಪೊಲೀಸರಿಗೆ ತಿಳಿಸಿದ್ದಾನೆ.


ಆರೋಪಿ ಹಮೀದ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎರ್ನಾಕುಲಂ ರೇಂಜ್ ಡಿಐಜಿ ನೀರಜ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.  ಪ್ರಕರಣದಲ್ಲಿ ಬಲವಾದ ಸಾಕ್ಷ್ಯಾಧಾರಗಳು ಮತ್ತು ಸಾಕ್ಷಿಗಳಿದ್ದು, ಆರೋಪಿಯು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವುದಿಲ್ಲ ಎಂದರು.


ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ.  ಮೃತರಲ್ಲಿ ಹಮೀದ್ ಅವರ ಪುತ್ರ ಮಹಮ್ಮದ್ ಫೈಸಲ್, ಸೊಸೆ ಶೀಬಾ ಮತ್ತು ಮೊಮ್ಮಕ್ಕಳಾದ ಮೆಹರು ಮತ್ತು ಆಸ್ನಾ ಸೇರಿದ್ದಾರೆ. ಹಮೀದ್ ಅವರ ಈ ಕೃತ್ಯಕ್ಕೆ ಇಡೀ ಊರೇ ಬೆಚ್ಚಿ ಬಿದ್ದಿದೆ.


ಮಗನ ಮನೆಗೆ ಬೆಂಕಿ ಹಚ್ಚಿದ ಹಮೀದ್ ಮಗ ಮತ್ತು ಕುಟುಂಬ ತಪ್ಪಿಸಿಕೊಳ್ಳದಂತೆ ಎಲ್ಲ ಪ್ಲಾನ್ ಮಾಡಿದ್ದ. ಈತನ ಪ್ಲಾನ್ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಮೊದಲು ಮನೆಯ ಟ್ಯಾಂಕ್ ನಲ್ಲಿದ್ದ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿದ್ದ ಹಮೀದ್, ಮನೆಯ ಅಕ್ಕಪಕ್ಕ ಇದ್ದ ನೀರನ್ನೆಲ್ಲ ಚೆಲ್ಲಿದ್ದ, ಫ್ರೀಜರ್ ನಲ್ಲಿದ್ದ ನೀರನ್ನು ಕೂಡ ಚೆಲ್ಲಿದ್ದ. ಬಳಿಕ ಮಗ ಹಾಗೂ ಆತನ ಕುಟುಂಬ ಮಲಗಿದ್ದ ಕೊನೆಯನ್ನು ಹೊರಗಿನಿಂದ ಲಾಕ್ ಮಾಡಿದ್ದ. ಮನೆಗೆ ಕೂಡ ಹೊರಗಿನಿಂದ ಲಾಕ್ ಮಾಡಿದ್ದಾನೆ. ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾನೆ. ಬಳಿಕ ಮನೆಗೆ ಬೆಂಕಿ ಹಚ್ಚಿದ್ದಾನೆ.



ಬೆಂಕಿ ಹತ್ತಿ ಉರಿಯುತ್ತಿದ್ದಂತೆಯೇ ಅಕ್ಕಪಕ್ಕದ ಮನೆಯವರು ಓಡಿ ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ, ಮನೆಯಲ್ಲಿ ಎಲ್ಲಿಯೂ ಒಂದು ತೊಟ್ಟು ನೀರು ಇರಲಿಲ್ಲ, ನೆರೆಯ ಮನೆ ವ್ಯಕ್ತಿ ಬಾಗಿಲು ಮುರಿದು ಮನೆಯೊಳಗೆ ಹೋಗಿದ್ದು, ಈ ವೇಳೆ ಅವರು ಸ್ಥಳದಲ್ಲಿ ನೀರಿಲ್ಲದ ಕಾರಣ ಅಸಹಾಯಕರಾಗಿ ನಿಲ್ಲುವಂತಾಗಿತ್ತು.


ಹಮೀದ್ ಇಷ್ಟೆಲ್ಲ ಒಬ್ಬನೇ ಸೇರಿ ಪ್ಲಾನ್ ಮಾಡಿದ್ದನೇ ಅಥವಾ ಇದರ ಹಿಂದೆ ಇನ್ನೆಷ್ಟು ಜನರ ಕೈವಾಡವಿದೆಯೇ ಎಂಬುವುದು ತನಿಖೆಯಿಂದ ತಿಳಿದುಬರಬೇಕಷ್ಟೆ,

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?